ETV Bharat / bharat

ದೇಶದಲ್ಲಿ ಚಿಲ್ಲರೆ ಹಣದುಬ್ಬರ 17 ತಿಂಗಳಲ್ಲೇ ಹೆಚ್ಚು! ನಗರಕ್ಕಿಂತ ಗ್ರಾಮೀಣ ಬದುಕೇ ತುಟ್ಟಿ - market-wise prices

ಬೆಲೆ ಏರಿಕೆಯು ನಗರಕ್ಕಿಂತ ಗ್ರಾಮೀಣ ಭಾರತದಲ್ಲಿ ತೀವ್ರವಾಗಿದೆ. ಮಾರ್ಚ್‌ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ವ್ಯಾಪಾರದ ಹಣದುಬ್ಬರ ಶೇ.7.66ಕ್ಕೆ ಏರಿಕೆಯಾಗಿದ್ದರೆ, ನಗರ ಪ್ರದೇಶದಲ್ಲಿ ಶೇ.6.12ಕ್ಕೇರಿದೆ.

ಚಿಲ್ಲರೆ ಮಾರುಕಟ್ಟೆಯಲ್ಲೂ ಹಣದುಬ್ಬರ
ಚಿಲ್ಲರೆ ಮಾರುಕಟ್ಟೆಯಲ್ಲೂ ಹಣದುಬ್ಬರ
author img

By

Published : Apr 12, 2022, 8:02 PM IST

ನವದೆಹಲಿ: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿನ ತೀವ್ರ ಹೆಚ್ಚಳದಿಂದಾಗಿ ಕಳೆದ 17 ತಿಂಗಳಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಹಣದುಬ್ಬರ ಗಗನಮುಖಿಯಾಗಿದೆ. ಮಾರ್ಚ್​ ತಿಂಗಳಲ್ಲಿ ಶೇ.6.07ರಿಂದ ಶೇ.6.95ಕ್ಕೆ ಹಣದುಬ್ಬರ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ತಿಳಿಸಿದೆ.

ಗ್ರಾಹಕ ಬೆಲೆ ಸೂಚ್ಯಂಕ (CPI)ದ ಮೇಲೆ ಚಿಲ್ಲರೆ ವ್ಯಾಪಾರದ ಹಣದುಬ್ಬರವನ್ನು ಅಳೆಯಲಾಗುತ್ತದೆ. ಚಿಲ್ಲರೆ ವ್ಯಾಪಾರ ಹಣದುಬ್ಬರವು ಜನವರಿಯಲ್ಲಿ ಶೇ.6.01ರಷ್ಟಿತ್ತು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣದುಬ್ಬರ ತೀವ್ರವಾಗಿ ಹೆಚ್ಚಾಗಿದೆ. 2021ರ ಮಾರ್ಚ್​​ನಲ್ಲಿ ಇದು ಶೇ.5.52ರಷ್ಟಿತ್ತು.

ಗ್ರಾಮೀಣ ಭಾಗದಲ್ಲೇ ಅಧಿಕ: ಈ ಬೆಲೆ ಏರಿಕೆಯು ನಗರಕ್ಕಿಂತ ಗ್ರಾಮೀಣ ಭಾರತದಲ್ಲಿ ತೀವ್ರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್‌ನಲ್ಲಿ ಚಿಲ್ಲರೆ ವ್ಯಾಪಾರದ ಹಣದುಬ್ಬರ ಶೇ.7.66ಕ್ಕೆ ಏರಿದೆ. ಇದರ ಹಿಂದಿನ ತಿಂಗಳು ಶೇ.6.38ರಷ್ಟಿತ್ತು. ಅದೇ ರೀತಿ, ನಗರ ಪ್ರದೇಶದಲ್ಲಿ ಮಾರ್ಚ್​ನಲ್ಲಿ ಶೇ.6.12ಕ್ಕೆ ತಲುಪಿದೆ. ಆದರೆ, ಇದರ ಹಿಂದಿನ ತಿಂಗಳು ಇದು ಶೇ.5.75ರಷ್ಟಿತ್ತು.

ಈ ಬೆಲೆಯ ಮಾಹಿತಿಯನ್ನು ಆಯ್ದ 1,114 ನಗರ ಮಾರುಕಟ್ಟೆಗಳು ಮತ್ತು 1,181 ಹಳ್ಳಿಗಳಿಂದ ಸಂಗ್ರಹಿಸಲಾಗಿದೆ. ಪ್ರತಿ ವಾರದ ವೇಳಾಪಟ್ಟಿಯಂತೆ ಆಯಾ ರಾಜ್ಯಗಳಲ್ಲಿ ಕೇಂದ್ರದ ರಾಷ್ಟ್ರೀಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಡಿ ಬರುವ ಕ್ಷೇತ್ರ ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ವೈಯಕ್ತಿಕ ಭೇಟಿ ಕೊಟ್ಟು ಇದನ್ನು ಸಂಗ್ರಹಿಸಿದ್ದಾರೆ. ಮಾರ್ಚ್​ನಲ್ಲಿ ಶೇ.99.9ರಷ್ಟು ಬೆಲೆಗಳನ್ನು ಗ್ರಾಮೀಣ ಭಾಗ ಮತ್ತು ಶೇ.98.3ರಷ್ಟು ಬೆಲೆಗಳನ್ನು ನಗರ ಮಾರುಕಟ್ಟೆಗಳಿಂದ ಸಂಗ್ರಹ ಮಾಡಲಾಗಿದೆ. ಇನ್ನು, ಮಾರುಕಟ್ಟೆವಾರು ದರಗಳನ್ನು ಶೇ.90.2ರಷ್ಟು ಗ್ರಾಮೀಣ ಹಾಗೂ ಶೇ.93.2ರಷ್ಟು ನಗರದಲ್ಲಿ ಸಂಗ್ರಹಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.