ETV Bharat / bharat

ಸರ್ಕಾರಿ ನೌಕರಿ ಪಡೆಯಲು 75 ವರ್ಷ ಬೇಕಾಯ್ತು.. ಕೊನೆಗೂ ನನಸಾದ ಗ್ರಾಮಸ್ಥರ ಕನಸು

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಈ ಗ್ರಾಮದ ಒಬ್ಬರಿಗೂ ಸರ್ಕಾರಿ ನೌಕರಿ ಸಿಕ್ಕಿರಲಿಲ್ಲ. 2000 ಜನಸಂಖ್ಯೆಯ ಈ ಗ್ರಾಮದ ಯಾರೊಬ್ಬರೂ ಸರ್ಕಾರಿ ನೌಕರಿ ಪಡೆಯಲು ಸಫಲರಾಗಿರಲಿಲ್ಲ. ಆದರೆ ಈಗ ಯುವನೊಬ್ಬನಿಗೆ ಸರ್ಕಾರಿ ಶಾಲೆಯಲ್ಲಿ ನೌಕರಿ ಸಿಕ್ಕಿದ್ದಕ್ಕೆ ಇಡೀ ಗ್ರಾಮವೇ ಸಂಭ್ರಮಿಸುತ್ತಿದೆ.

author img

By

Published : Sep 27, 2022, 2:24 PM IST

ಸರ್ಕಾರಿ ನೌಕರಿ ಪಡೆಯಲು 74 ವರ್ಷ ಬೇಕಾಯ್ತು
youth bags govt job after 74 years

ಮುಜಾಫರ್‌ಪುರ (ಬಿಹಾರ): ತಮ್ಮ ಗ್ರಾಮದ ಯುವಕ ರಾಕೇಶ್ ಕುಮಾರ್ ಎಂಬಾತನಿಗೆ ಪ್ರಾಥಮಿಕ ಶಾಲೆಯ ಶಿಕ್ಷಕನ ನೌಕರಿ ಸಿಕ್ಕಿದ್ದಕ್ಕೆ ಜಿಲ್ಲೆಯ ಸೋಹಾಗ್​ಪುರ ಗ್ರಾಮಸ್ಥರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಒಂದು ನೌಕರಿ ಸಿಕ್ಕಿದ್ದಕ್ಕೆ ಇಷ್ಟೊಂದು ಖುಷಿಯಾಗಲು ಖಂಡಿತ ಕಾರಣವಿದೆ.

ಹೌದು.., ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಈ ಗ್ರಾಮದ ಒಬ್ಬರಿಗೂ ಸರ್ಕಾರಿ ನೌಕರಿ ಸಿಕ್ಕಿರಲಿಲ್ಲ. 2000 ಜನಸಂಖ್ಯೆಯ ಈ ಗ್ರಾಮದ ಯಾರೊಬ್ಬರೂ ಸರ್ಕಾರಿ ನೌಕರಿ ಪಡೆಯಲು ಸಫಲರಾಗಿರಲಿಲ್ಲ. ಆದರೆ ಈಗ ಯುವಕನೊಬ್ಬನಿಗೆ ಸರ್ಕಾರಿ ಶಾಲೆಯಲ್ಲಿ ನೌಕರಿ ಸಿಕ್ಕಿದ್ದಕ್ಕೆ ಗ್ರಾಮವೇ ಸಂಭ್ರಮಿಸುತ್ತಿದೆ.

ಈಗ ಯುವಕ ರಾಕೇಶ್ ಕುಮಾರ್ ಸರ್ಕಾರಿ ನೌಕರಿ ಪಡೆದಿದ್ದು, ಒಂದು ಮಹತ್ಸಾಧನೆಯಾಗಿದೆ. ತಮ್ಮ ಗ್ರಾಮಸ್ಥರಿಗೆ ಸರ್ಕಾರಿ ನೌಕರಿ ಸಿಗಲ್ಲ ಎಂದು ನಂಬಿದ್ದ ಜನರಿಗೆ ಈತ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದ್ದಾರೆ. ಇನ್ನೂ ಹಲವಾರು ಯುವಕರು ಸರ್ಕಾರಿ ನೌಕರಿ ಪಡೆಯಬಹುದು ಮತ್ತು ಗ್ರಾಮಕ್ಕೆ ಪ್ರಖ್ಯಾತಿ ತರಬಹುದು ಎಂದು ಜನ ನಿರೀಕ್ಷಿಸುತ್ತಿದ್ದಾರೆ.

ರಾಕೇಶ್ ಸೆಪ್ಟೆಂಬರ್ 8 ರಂದು ನೇಮಕಾತಿ ಪತ್ರವನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಬಾರ್ಕುರ್ವಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ರಾಕೇಶ್ ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ನೆರೆಯ ಜಿಲ್ಲೆಯ ದರ್ಭಾಂಗನಲ್ಲಿ ಎಂ ಕಾಮ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ರಾಜಸ್ಥಾನದಿಂದ ಬಿಇಡಿ ಪದವಿ ಪಡೆದರು. ಇತ್ತೀಚೆಗೆ, ಅವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಲು ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿರುವ ರಾಕೇಶ್, ತಂದೆಯ ನಿಧನದ ನಂತರ ನನ್ನ ಶಿಕ್ಷಣ ಮುಂದುವರಿಸಲು ನಾನು ಇತರರಿಗೆ ಟ್ಯೂಷನ್ ನೀಡುತ್ತಿದ್ದೆ. ಎಂ ಕಾಮ್ ಮತ್ತು ಬಿಇಡಿ ಪದವಿಗಳನ್ನು ಗಳಿಸಿದ ನಂತರ ನಾನು ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಸದ್ಯ ನಾನು ತೇರ್ಗಡೆಯಾಗಿದ್ದೇನೆ. ಪರೀಕ್ಷೆ ಮುಗಿದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ: ಸರ್ಕಾರಿ ನೌಕರಿ ಆಮಿಷವೊಡ್ಡಿ ವಂಚನೆ ಪ್ರಕರಣ: ಒಳಾಡಳಿತ ಇಲಾಖೆಯ ಇಬ್ಬರು ನೌಕರರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.