ETV Bharat / bharat

ಕಾಲಡಿ ಸಂಸ್ಕೃತ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ: ಕ್ಯಾಂಪಸ್​ ಕ್ಯಾಂಟೀನ್​ನಲ್ಲಿ ಪರೋಟ ಮಾಸ್ಟರ್​

author img

By ETV Bharat Karnataka Team

Published : Nov 18, 2023, 7:50 PM IST

Parotta master Akhil Karthikeyan: ಸಂಸ್ಕೃತ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಅಖಿಲ್​ ಕಾರ್ತಿಕೇಯನ್ ಅವರ ದಿನಚರಿ ಕ್ಯಾಂಟೀನ್​ನಿಂದಲೇ ಶುರುವಾಗುತ್ತದೆ.

Akhil Karthikeyan
ಅಖಿಲ್​ ಕಾರ್ತಿಕೇಯನ್
ಕಾಲಡಿ ಸಂಸ್ಕೃತ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಕ್ಯಾಂಪಸ್​ ಕ್ಯಾಂಟೀನ್​ನಲ್ಲಿ ಪರೋಟ ಮಾಸ್ಟರ್​

ಎರ್ನಾಕುಲಂ(ಕೇರಳ): ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದುಕೊಂಡು, ಕ್ಯಾಂಪಸ್ ಕ್ಯಾಂಟೀನ್​ನಲ್ಲಿ ಅಡುಗೆಭಟ್ಟನಾಗಿಯೂ ದುಡಿಯುತ್ತಿರುವ ಅಖಿಲ್​ ಕಾರ್ತಿಕೇಯನ್​. ಓದಿನ ಜೊತೆಗೆ ಕೆಲಸ ಮಾಡುವುದು ಇವರಿಗೆ ಹೊಸದೇನಲ್ಲ, ಆದರೆ ಇವರ ಈ ಎರಡೂ ಪ್ರತಿಭೆಗಳಿಗೆ ಕ್ಯಾಂಪಸ್​ನ ಪ್ಯಾಧ್ಯಾಪಕರು ಹಾಗೂ ಸಹಪಾಠಿಗಳು ಫಿದಾ ಆಗಿದ್ದಾರೆ. ಕಾಲಡಿ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಇವರು ಕ್ಯಾಂಪಸ್​ನಲ್ಲಿ ಪರೋಟ ಮಾಸ್ಟರ್​ ಎಂದೇ ಪ್ರಸಿದ್ಧಿ. ಇವರ ಟೇಸ್ಟಿ ಪರೋಟಾಗೆ ಮಾರು ಹೋಗದವರಿಲ್ಲ.

ಕೊಲ್ಲಂ ಜಿಲ್ಲೆಯ ಸೂರನಾಡಿ​ನವರಾದ ಅಖಿಲ್​ ಅವರು ತಮ್ಮ 8ನೇ ತರಗತಿಯಿಂದಲೇ ಓದಿನ ಜೊತೆಗೆ ಕೆಲಸ ಮಾಡುತ್ತಲೇ ಬಂದವರು. ಮನೆಯಲ್ಲಿದ್ದ ಕಷ್ಟ ಹಾಗೂ ಓದಿನ ಮೇಲಿದ್ದ ಆಸೆ ಮತ್ತು ಪ್ರೀತಿಗೆ ಅದು ಅವರಿಗೆ ಅನಿವಾರ್ಯವಾಗಿತ್ತು. ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿ ಇಲ್ಲಿಯವರೆಗೆ ಬಂದಿರುವ ಅಖಿಲ್ ಶಿಕ್ಷಣ ಮುಗಿಸಿ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಪಿಹೆಚ್​ಡಿ ಮಾಡುವುದರ ಜೊತೆಗೆ ಮತ್ತೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ಈ ಬಾರಿ ತಾವು ಓದುತ್ತಿರುವ ವಿವಿ ಕ್ಯಾಂಪಸ್​ ಕ್ಯಾಂಟೀನ್​ನಲ್ಲೇ ಕೆಲಸ ಮಾಡುತ್ತಿದ್ದಾರೆ.

ಅಡುಗೆ ಮಾತ್ರವಲ್ಲ ಇವರಲ್ಲಿದೆ ಹಲವು ಕೌಶಲ: ವಿಭಿನ್ನ ಕೌಶಲ ಹೊಂದಿರುವ ಅಖಿಲ್​ ಕೈಯ್ಯಲ್ಲಿ ಅಡುಗೆ ಮಾತ್ರವಲ್ಲ, ಚಂದದ ಚಿತ್ರ ಅರಳುತ್ತದೆ. ಕಂಠದಿಂದ ಸೊಗಸಾದ ಹಾಡು ಹೊರಹೊಮ್ಮುತ್ತದೆ. ಮಾತ್ರವಲ್ಲ ಒಂದೊಮ್ಮೆ ಪಂಚಾಯತ್​ ಸದಸ್ಯನಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಸಂಪಾದಿಸಿದ್ದಾರೆ ಅಖಿಲ್​. ಮಲಯಾಳಂ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಖಿಲ್​ ಈಗ ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಮಲಯಾಳಂ ಸಿನಿಮಾದ ಭಾವನಾತ್ಮಕ ವಿಕಸನ ಹಾಗೂ ಮಾರುಕಟ್ಟೆ ರಾಜಕೀಯ (Malayalam cinema's emotional evolution and market politics) ವಿಷಯದ ಕುರಿತು ಡಾ. ವತ್ಸಲನ್​ ವತುಸ್ಸೆರಿ ಅವರ ನೇತೃತ್ವದಲ್ಲಿ ಅಖಿಲ್​ ಸಂಶೋಧನೆ ಮಾಡುತ್ತಿದ್ದಾರೆ.

ನಿತ್ಯ ಕ್ಯಾಂಟೀನ್​ನಿಂದ ಬದುಕು ಶುರು: ಪಿಎಚ್​ಡಿ ಮಾಡಲೆಂದು ವಿಶ್ವವಿದ್ಯಾಲಯ ಕ್ಯಾಂಪಸ್​ಗೆ ಬಂದ ನಂತರ ಅಖಿಲ್​ ಅವರಿಗೆ ಅಧ್ಯಯನಕ್ಕೆ ಬೆಂಬಲವಾಗಿ ಕೆಲಸ ಹುಡುಕುವುದು ಅನಿವಾರ್ಯವಾಗಿತ್ತು. ಇದೇ ಸಮಯಕ್ಕೆ ಕ್ಯಾಂಟೀನ್​ನಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕ ಕೆಲಸ ಬಿಟ್ಟು ಹೋಗಿದ್ದರು. ಕ್ಯಾಂಟೀನ್​ನಲ್ಲಿ ಪರೋಟ ಮಾಸ್ಟರ್​ ಕೆಲಸ ಖಾಲಿ ಇರುವ ಬಗ್ಗೆ ತಿಳಿದುಕೊಂಡು, ಆ ಜಾಗಕ್ಕೆ ಅಖಿಲ್​ ಅವರು ಸೇರಿಕೊಂಡಿದ್ದಾರೆ. ಪರೋಟ ತಯಾರಿಸಲು ಸಾಕಷ್ಟು ಅಡುಗೆ ಕೌಶಲ್ಯ ಮತ್ತು ದೈಹಿಕ ಶ್ರಮ ಬೇಕಾಗುತ್ತದೆ. ಮೊದಲು ಕ್ಯಾಂಟೀನ್​ ನಿರ್ವಾಹಕರು ಅಖಿಲ್​ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದು ದಿನ ಅಖಿಲ್​ ಪ್ರಾಯೋಗಿಕವಾಗಿ ಮಾಡಿಕೊಟ್ಟ ಪರೋಟದ ರುಚಿಗೆ ನಿರ್ವಾಹಕರು ಮನಸೋತಿದ್ದರು. ಹೀಗೆ ಕಳೆದ ನಾಲ್ಕು ತಿಂಗಳುಗಳಿಂದ ಕ್ಯಾಂಪಸ್​ ಕ್ಯಾಂಟೀನ್​ನಿಂದಲೇ ಅಖಿಲ್​ ಅವರ ದಿನಚರಿ ಶುರುವಾಗುತ್ತಿದೆ.

ಇದೇ ಇವರ ನಿತ್ಯದ ದಿನಚರಿ: ಅಖಿಲ್​ ಕಾರ್ತಿಕೇಯನ್​ ಅವರು ದಿನಕ್ಕೆ 300 ಪರೋಟಗಳನ್ನು ತಯಾರಿಸುತ್ತಾರೆ. ಬೆಳಗ್ಗೆ 9.30ಕ್ಕೆ ಮೊದಲೇ ಕ್ಯಾಂಟೀನ್​ನಲ್ಲಿ ಕೆಲಸ ಮುಗಿಸಿ, ನಂತರ ಹಾಸ್ಟೆಲ್​ಗೆ ಹೋಗಿ ಸ್ನಾನ ಮುಗಿಸಿಕೊಂಡು ಬಟ್ಟೆ ಬದಲಾಯಿಸಿ, ನೇರವಾಗಿ ಸಂಶೋಧನಾ ವಿದ್ಯಾರ್ಥಿಯಾಗಿ ತಮ್ಮ ವಿಭಾಗಕ್ಕೆ ತೆರಳುವುದು ಇವರ ನಿತ್ಯದ ಕಾಯಕ. ಅಧ್ಯಯನದ ಜೊತೆ ಜೊತೆಗೆ ಕೆಲಸ ಮಾಡುವುದು ವಿದೇಶಗಳಲ್ಲಿ ಹೊಸದೇನಲ್ಲ. ಆದರೆ ಇದೇ ಮಾದರಿಯನ್ನು ನಮ್ಮ ನಾಡಲ್ಲೂ ಮುಂದುವರಿಸಬಹುದು ಎನ್ನುವುದು ಅಖಿಲ್​ ಅಭಿಪ್ರಾಯ.

"ಪರೋಟಾ ಮಾಡುವುದು ಸುಲಭದ ಮಾತಲ್ಲ. ಬಹಳಷ್ಟು ದೈಹಿಕ ಶ್ರಮದ ಜೊತೆಗೆ ಬಹಳ ಹೊತ್ತಿನವರೆಗೆ ಬೆಂಕಿ ಮುಂದೆಯೇ ಕೆಲಸ ಮಾಡಬೇಕು. ನಿಜವಾಗಿಯೂ ಕಷ್ಟಕರವಾದ ಕೆಲಸ ಇದು." ಎನ್ನುತ್ತಾರೆ ಅಖಿಲ್​. ಸಿನಿಮಾದ ಮೇಲಿನ ಆಸಕ್ತಿಯಿಂದ ಈ ವಿಷಯವನ್ನು ಸಂಶೋಧನಾ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡೆ. ಇದಕ್ಕೆ ನನ್ನ ಕುಟುಂಬದ ಸಂಪೂರ್ಣ ಬೆಂಬಲ ಇದೆ. ಸೂರನಾಡಿನ ಲೀಲಾ ಹಾಗೂ ಕಾರ್ತಿಕೇಯನ್​ ದಂಪತಿಯ ಪುತ್ರ ಅಖಿಲ್​. ಅನುಶ್ರೀ ಚಂದನ್​ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಪತ್ನಿ ಅನುಶ್ರೀ ಚಂದನ್​ ಅವರು ಶ್ರೀಶಂಕರಾಚಾರ್ಯ ವಿಶ್ವವಿದ್ಯಾಲಯದಲ್ಲಿ ಲೇಖಕಿ ಹಾಗೂ ಸಂಶೋಧಕರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಟಿ ಉದ್ಯೋಗ ತೊರೆದು ಸಾವಯವ ಕೃಷಿ: ಕಿವಿ ಹಣ್ಣು ಬೆಳೆದು ವಾರ್ಷಿಕ 40 ಲಕ್ಷ ರೂಪಾಯಿ ಆದಾಯ ಗಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.