ETV Bharat / bharat

ಉತ್ತರಕಾಶಿ ಹಿಮಪಾತ: 10 ಮೃತದೇಹ ಪತ್ತೆ, 14 ಪರ್ವತಾರೋಹಿಗಳ ರಕ್ಷಣೆ - ಹಿಮಪಾತ

ಉತ್ತರಾಖಂಡದಲ್ಲಿ ಮಂಗಳವಾರ ಸಂಭವಿಸಿದ ಹಿಮಪಾತದಲ್ಲಿ, ಇಲ್ಲಿಯತನಕ ಒಟ್ಟು 10 ಮೃತದೇಹಗಳು ಪತ್ತೆಯಾಗಿವೆ. 14 ಜನರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ 20 ಪರ್ವತಾರೋಹಿಗಳ ರಕ್ಷಣಾ ಕಾರ್ಯ ಮುಂದುವರೆದಿದೆ.

ಉತ್ತರಕಾಶಿ ಹಿಮಪಾತ
ಉತ್ತರಕಾಶಿ ಹಿಮಪಾತ
author img

By

Published : Oct 5, 2022, 4:22 PM IST

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ದ್ರೌಪತಿಯ ದಂಡ 2 ಪರ್ವತ ಶಿಖರದ ಬಳಿ ಮಂಗಳವಾರ ಹಿಮಪಾತ ಸಂಭವಿಸತ್ತು. ಇದರಲ್ಲಿ 44 ಪರ್ವತಾರೋಹಿಗಳು ಸಿಲುಕಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 20 ಪರ್ವತಾರೋಹಿಗಳ ರಕ್ಷಣಾ ಕಾರ್ಯ ಎಸ್​ಡಿಆರ್​ಎಫ್​ ಮತ್ತು ಐಟಿಬಿಪಿ ತಂಡದಿಂದ ನಡೆಯುತ್ತಿದೆ. ಇಲ್ಲಿಯತನಕ 10 ಮೃತದೇಹಗಳು ಪತ್ತೆಯಾಗಿವೆ.

SDRF, ITBP ಮತ್ತು NIM ತಂಡಗಳಿಂದ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಬುಧವಾರ 6 ಮೃತದೇಹಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 10 ಮೃತದೇಹಗಳನ್ನ ಹೊರ ತೆಗೆಯಲಾಗಿದೆ. ಸುಮಾರು 20 ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಪರಿಹಾರ ಘೋಷಿಸಿದ ಸರ್ಕಾರ: ಪೌರಿ ಗರ್ವಾಲ್ ಬಸ್ ಅಪಘಾತ ಮತ್ತು ಉತ್ತರಕಾಶಿ ಹಿಮ ಕುಸಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ತಲಾ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ: ಹಿಮಪಾತದಲ್ಲಿ ಪರ್ವತಾರೋಹಿ ಸವಿತಾ ಕಾನ್ಸ್​ವಾಲ್ ನಿಧನ.. 25 ಮಂದಿ ನಾಪತ್ತೆ

ಉತ್ತರಕಾಶಿ ಜಿಲ್ಲೆಯ ನೆಹರೂ ಪರ್ವತಾರೋಹಣ ಸಂಸ್ಥೆಯ (ಎನ್‌ಐಎಂ) ಸುಧಾರಿತ ತರಬೇತಿ ಕೋರ್ಸ್‌ ನಡೆಯುವ ವೇಳೆ, ದ್ರೌಪದಿಯ ದಂಡ 2ನಲ್ಲಿ ಹಿಮಪಾತ ಸಂಭವಿಸಿದೆ. ದ್ರೌಪದಿ ದಂಡ ಪರ್ವತ ಶಿಖರವು ಉತ್ತರಕಾಶಿಯ ಭಟವಾಡಿ ಬ್ಲಾಕ್‌ನಲ್ಲಿರುವ ಭುಕ್ಕಿ ಗ್ರಾಮದ ಮೇಲೆ ನೆಲೆಗೊಂಡಿದೆ.

ಉತ್ತರಕಾಶಿ ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡವನ್ನು ರಕ್ಷಿಸಲು ರಾಜ್ಯ ಸರ್ಕಾರವು ಎರಡು ವಾಯುಪಡೆ ಹೆಲಿಕಾಪ್ಟರ್‌ಗಳನ್ನು ದ್ರೌಪದಿ ದಂಡಕ್ಕೆ ಕಳುಹಿಸಿದೆ. ಅದೇ ಸಮಯದಲ್ಲಿ, ನಿಮ್ ಸೇರಿದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್, ಐಟಿಬಿಪಿ ತಂಡಗಳು ಇಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಎನ್‌ಐಎಂ ಉತ್ತರಕಾಶಿ ಪರ್ವತಾರೋಹಣಕ್ಕೆ ಸಂಬಂಧಿಸಿದ ಜನರ ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿರುವುದು ದುಃಖಕರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.