ETV Bharat / bharat

ವಯಸ್ಸು ಬರೋಬ್ಬರಿ 126.. ಶಿವನ ಆರಾಧಕನಿಗೆ ಒಲಿದ 'ಪದ್ಮಶ್ರೀ'.. ಬಾಬಾ ಶಿವಾನಂದ​ ಅವರ ಆರೋಗ್ಯದ ಗುಟ್ಟು ಗೊತ್ತಾ? - ಪದ್ಮಶ್ರೀ ಬಾಬಾ ಶಿವಾನಂದ್

Baba Shivanand got Padma Shri: ಕೇಂದ್ರ ಸರ್ಕಾರದಿಂದ ಘೋಷಣೆಯಾಗಿರುವ ಪದ್ಮಶ್ರೀ ಪ್ರಶಸ್ತಿ ಲಿಸ್ಟ್​ನಲ್ಲಿ 126 ವರ್ಷದ ಬಾಬಾ ಶಿವಾನಂದ ಸ್ವಾಮಿ ಅವರಿಗೂ ಗೌರವ ಪ್ರಶಸ್ತಿ ಒಲಿದುಬಂದಿದೆ.

baba shivanand got padma shri
baba shivanand got padma shri
author img

By

Published : Jan 26, 2022, 4:00 PM IST

ವಾರಣಾಸಿ(ಉತ್ತರ ಪ್ರದೇಶ): 73ನೇ ಗಣರಾಜ್ಯೋತ್ಸವ ಮುನ್ನಾದಿನವಾದ ನಿನ್ನೆ ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಅನೇಕ ಎಲೆಮರೆಯ ಕಾಯಿಯಂತಿರುವ ಸಾಧಕರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು, ಇದರಲ್ಲಿ ವಾರಣಾಸಿಯ ಸ್ವಾಮಿ ಶಿವಾನಂದ ಬಾಬಾ ಕೂಡ ಒಬ್ಬರು.

126 ವರ್ಷ ವಯಸ್ಸಿನ ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಘೋಷಿಸಿದೆ. ಉತ್ತರ ಪ್ರದೇಶದ ಕಬೀರ್​​​ ನಗರದಲ್ಲಿರುವ ಚಿಕ್ಕ ಕೋಣೆವೊಂದರಲ್ಲಿ ವಾಸಿಸುತ್ತಿರುವ ಇವರು, ಬೆಳಗ್ಗೆ 3 ಗಂಟೆಗೆ ಎದ್ದೇಳುತ್ತಾರೆ. ದಿನನಿತ್ಯದ ದಿನಚರಿಯೇ ಇವರ ಆರೋಗ್ಯದ ಗುಟ್ಟಾಗಿದೆ.

ಆಗಸ್ಟ್​​​ 8,1896ರಂದು ಬಾಂಗ್ಲಾದೇಶದ ಸಿಲ್ಹೆಟ್​​ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ಜನಿಸಿರುವ ಇವರು, ಸದ್ಯ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಯೋಗ, ಪ್ರಾಣಯಾಮ ಮತ್ತು ಮನೆಯಲ್ಲಿ ತಯಾರಿಸುವ ಔಷಧಿ ಸೇವನೆ ಮಾಡುತ್ತಾರೆ.

126 ವರ್ಷದ ಶಿವನ ಆರಾಧಕನಿಗೆ ಒಲಿದು ಬಂತು 'ಪದ್ಮಶ್ರೀ' ಗೌರವ

ಬ್ರಹ್ಮಚಾರಿ ಜೀವನ ಅನುಸರಿಸುವ ಇವರು, ಹಾಲು, ಸಕ್ಕರೆ ಮತ್ತು ಎಣ್ಣೆಯಿಂದ ತಯಾರಿಸುವ ಯಾವುದೇ ಆಹಾರ ಪದಾರ್ಥ ಸೇವನೆ ಮಾಡಲ್ಲ. ಪ್ರಮುಖವಾಗಿ ಬೇಯಿಸಿದ ಆಹಾರ ಮತ್ತು ತರಕಾರಿ ಸೇವನೆ ಮಾಡ್ತಾರೆ. ಬೆಳಗಿನ ಜಾವ 3 ಗಂಟೆಗೆ ಏಳುವ ಬಾಬಾ, ದೈನಂದಿನ ಕರ್ಮದ ನಂತರ ಶಿವನ ಮಂತ್ರ ಪಠಣೆ ಮಾಡ್ತಾರೆ. ನಂತರ ಬೆಳಗ್ಗೆ 5ರಿಂದ 6 ಗಂಟೆಯವರೆಗೆ ಯೋಗಾಸನ, 6:30ಕ್ಕೆ ಒಂದು ಲೋಟ ನೀರು ಸೇವನೆ ಮಾಡ್ತಾರೆ. ಇದಾದ ಬಳಿಕ ಶ್ರೀ ಕೃಷ್ಣನ ಮಂತ್ರ ಪಠಣ ಮಾಡಲು ಆರಂಭಿಸುತ್ತಾರೆ.

ಇದನ್ನೂ ಓದಿರಿ: ರಾಮೋಜಿ ಫಿಲ್ಮ್​​ ಸಿಟಿಯಲ್ಲೂ ಗಣರಾಜ್ಯೋತ್ಸವ ಸಂಭ್ರಮ.. ಧ್ವಜಾರೋಹಣ ಮಾಡಿದ ರಾಮೋಜಿ ರಾವ್​..

ಬಾಬಾ ಶಿವಾನಂದ​ ಅವರ ಆಶ್ರಮದ ನಿಯಮ ಕೂಡ ವಿಭಿನ್ನವಾಗಿದ್ದು, ಇಲ್ಲಿಗೆ ಭೇಟಿ ನೀಡುವವರು ಬರಿಗೈಯಲ್ಲಿ ಬರಬೇಕು. ಆದರೆ, ಊಟ ಮಾಡದೆ ಆಶ್ರಮದಿಂದ ಯಾರೂ ಸಹ ತೆರಳುವಂತಿಲ್ಲ. ಬಂದವರಿಗೆಲ್ಲರಿಗೂ ಬಾಬಾ ಅವರೇ ತಮ್ಮ ಕೈಯಿಂದಲೇ ಊಟ ತಯಾರಿಸಿ, ನೀಡುತ್ತಾರೆ. ಶಿವನ ಅನನ್ಯ ಆರಾಧಕರಾಗಿರುವ ಇವರಿಗೆ ಅಪಾರ ಶಿಷ್ಯ ಬಳಗವಿದೆ.

ಇವರ ಆಶ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದು, ಚಿತ್ರರಂಗದ ಶಿಲ್ಪಾ ಶೆಟ್ಟಿ ಕೂಡ ಇಲ್ಲಿಗೆ ಬಂದು ಹೋಗಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ 'ಈಟಿವಿ ಭಾರತ' ಜೊತೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ್ದ ಇವರು, ದೇಶದ ಜನತೆಗೆ ಯೋಗಾಭ್ಯಾಸ ಕುರಿತು ಮನವಿ ಮಾಡಿದ್ದರು. ಯೋಗದಿಂದ ಎಲ್ಲ ಕಾಯಿಲೆಗಳಿಂದಲೂ ದೂರ ಇರಬಹುದು ಎಂದು ತಿಳಿಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.