ಅಮೃತಸರ (ಪಂಜಾಬ್): ಪಂಜಾಬ್ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಖ್ಯಾತಿಯ ಹರ್ಮಂದಿರ್ ಸಾಹಿಬ್ ಒಳಗೆ ಹಾರ್ಮೋನಿಯಂ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೂಲಕ ನೂರಕ್ಕೂ ಹೆಚ್ಚು ವರ್ಷಗಳ ಬಳಿಕ ಹಾರ್ಮೋನಿಯಂ ಸದ್ದು ನಿಧಾನವಾಗಿ ನಿಲ್ಲಲಿದೆ.
ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆ ನಿಲ್ಲಿಸುವಂತೆ ಅಕಾಲ್ ತಖ್ತ್ನ ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಆದೇಶಿಸಿದ್ದಾರೆ. ಈ ಆದೇಶವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ಜಾರಿಗೊಳಿಸಲು ನಿರ್ಧರಿಸಿದೆ. ಹಾರ್ಮೋನಿಯಂ ಗುರು ಸಾಹಿಬ್‌ಗಳು ಬಳಸುವ ವಾದ್ಯವಲ್ಲ. ಆದರೆ, ಇದು ಭಾರತೀಯರಿಗೆ ಬ್ರಿಟಿಷರು ಒದಗಿಸಿದ ವಾದ್ಯವಾಗಿದೆ. ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಭಾರತಕ್ಕೆ ತರಲಾಯಿತು ಎಂದು ಹರ್‌ಪ್ರೀತ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.
ಏಕಾಏಕಿ ನಿಲ್ಲಿಸುವುದಿಲ್ಲ: ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆಯನ್ನು ಏಕಾಏಕಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಕ್ರಮೇಣವಾಗಿ ಅವರ ಬಳಕೆ ನಿಲ್ಲಿಸಲಾಗುತ್ತದೆ. ಇದರಿಂದ ಗೋಲ್ಡನ್ ಟೆಂಪಲ್ಗೆ ಬರುವ ಭಕ್ತರಿಗೂ ಪರಿಪಾಠವಾಗಲಿದೆ. ಇನ್ಮುಂದೆ ಹೆಚ್ಚಾಗಿ ಕೀರ್ತನಾ ಸಮಯದಲ್ಲಿ ಹಾರ್ಮೋನಿಯಂ ಸ್ಥಾನದಲ್ಲಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಲಾಗುವುದು ಎಂದು ತಿಳಿಸಲಾಗಿದೆ.
122 ವರ್ಷಗಳ ಇತಿಹಾಸ: ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆಗೆ ಸುಮಾರು 122 ವರ್ಷಗಳ ಇತಿಹಾಸ ಇದೆ. 1901ರಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಬಳಸಲಾಗಿತ್ತು ಎಂಬ ನಂಬಿಕೆ ಇದೆ. ಇದೀಗ 122 ವರ್ಷಗಳ ನಂತರ ಹಾರ್ಮೋನಿಯಂ ಬಳಕೆಗೆ ನಿಷೇಧ ಹೇರಲಾಗಿದ್ದು, ಅಕ್ರಮೇಣವಾಗಿ ಇನ್ನೊಂದು ಮೂರು ವರ್ಷದಲ್ಲಿ ಇದು ಸಂಪೂರ್ಣವಾಗಿ ನಿಷೇಧವಾಗಲಿದೆ ಎಂದು ಹೇಳಲಾಗುತ್ತಿದೆ.
ಇತ್ತ, ದಿನದ 20 ಗಂಟೆಗಳ ಕಾಲ 15 ತಂಡಗಳು ಕೀರ್ತನೆ ಸಲ್ಲಿಸುತ್ತವೆ. ಇದರಲ್ಲಿ ತಂಡಗಳು ಹಾರ್ಮೋನಿಯಂ ಬದಲಿಗೆ ರಬಾಬ್ ಮತ್ತು ಸಾರಂದದೊಂದಿಗೆ ಕೀರ್ತನೆ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ ಇತರ ತಂಡಗಳಿಗೂ ತರಬೇತಿಯೂ ಆರಂಭವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹಾರ್ಮೋನಿಯಂ ಇಲ್ಲದೆಯೇ ಕೀರ್ತನೆ ಮಾಡಲು ಸಿದ್ಧತೆ ಆರಂಭಿಸಲಾಗಿದೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಕೊಟ್ಟ ಕೆಲಸವೇನು ಗೊತ್ತಾ?