ನವದೆಹಲಿ: ದೇಶಿಯ ವಲಸೆ ಮತದಾರರಿಗಾಗಿ ಭಾರತೀಯ ಚುನಾವಣಾ ಆಯೋಗ ರಿಮೋಟ್ ಎಲೆಕ್ಟ್ರಾನಿಕ್ಸ್ ವೋಟಿಂಗ್ ಮಷಿನ್ ಮೂಲ ಮಾದರಿಯನ್ನು ಅಭಿವೃದ್ಧಿ ಪಡಿಸಿದೆ. ಇದು ಒಂದೇ ಬೂತ್ನಿಂದ 72 ಕ್ಷೇತ್ರದ ರಿಮೋಟ್ ಮತದಾನದ ನಿರ್ವಹಣೆ ಮಾಡುತ್ತದೆ. ಈ ಸಂಬಂಧ ಗುರುವಾರ ಆಯೋಗ ರಿಮೋಟ್ ಮತದಾನದ ಪರಿಕಲ್ಪನೆಯ ಟಿಪ್ಪಣಿಯನ್ನು ನೀಡಿದ್ದು, ಇದರ ಅನುಷ್ಠಾನದ ಕುರಿತು ತಜ್ಞರು ಹಾಗೂ ಪರಿಣತರಿಂದ ಅಭಿಪ್ರಾಯಗಳನ್ನು ಕೇಳಿದೆ.
ಇದರ ಅನುಷ್ಟಾನ ಸಂಬಂಧ ರಾಜಕೀಯ ಪಕ್ಷಗಳಿಂದಲೂ ಕಾನೂನಾತ್ಮಕ, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ವರದಿ ಕೇಳಿದೆ. ಈ ಆರ್ವಿಎಂ ಅನ್ನು 8 ಅಧಿಕೃತ ರಾಷ್ಟ್ರೀಯ ಪಕ್ಷ ಮತ್ತು 57 ಪಕ್ಷಗಳಿಗೆ ಜ 16, 2023ರಂದು ಪ್ರಸ್ತುತಿ ಪಡಿಸಲಿದೆ.
ಸಾರ್ವಜನಿಕ ವಲಯದ ಉದ್ಯಮದೊಂದಿಗೆ ಚುನಾವಣಾ ಆಯೋಗ ಬಹು ಕ್ಷೇತ್ರದ ಆರ್ವಿಐ ಪರೀಕ್ಷಾರ್ಥಕ್ಕೆ ಸಜ್ಜಾಗಿದೆ. ಶಿಕ್ಷಣ. ಉದ್ಯೋಗ ಇನ್ನಿತರ ಉದ್ದೇಶ ತಮ್ಮ ಊರುಗಳನ್ನು ತೊರೆದು ದೂರದ ಸ್ಥಳಗಳಿಂದ ಕೌಟುಂಬಿಕ ವಲಸಿಗರು ಭಾಗವಹಿಸಲು ಇದು ಅನುಕೂಲ ಮಾಡಿಕೊಡಲಿದೆ ಎಂದು ಚುನಾವಣಾ ಆಯೋಗ ನಿರೀಕ್ಷೆ ಇಟ್ಟುಕೊಂಡಿದೆ.
ಏಕಕಾಲದಲ್ಲಿ ರಿಮೋಟ್ ಮತಚಲಾವಣೆ ಬೂತ್ ಮೂಲಕ ಈ ಸುಧಾರಿತ ಇವಿಎಂ 72 ಬಹು ಕ್ಷೇತ್ರದಲ್ಲಿ ನಿರ್ವಹಿಸಲಿದೆ. ಇದನ್ನು ಅಳವಡಿಕೆ ಮಾಡಿದರೆ ಇದರಿಂದ ಸಾಮಾಜಿಕ ಬದಲಾವಣೆ ಕಾಣಬಹುದಾಗಿದೆ. ವಲಸಿಗರು ತಮ್ಮ ಮೂಲ ಬೇರುಗಳೊಂದಿಗೆ ಸಂಪರ್ಕ ಸಾಧಿಸಬಹುದು. ವಿವಿಧ ಕಾರಣಗಳಿಗಾಗಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಹಲವು ಬಾರಿ ಹಿಂಜರಿದಿರುತ್ತಾರೆ. ಇದರಿಂದ ಅವರ ಮೂಲ ಸಂಪರ್ಕ ಸಾಧ್ಯವಾಗಲಿದೆ ಎನ್ನುತ್ತಾರೆ ಚುನಾವಣಾ ಆಯುಕ್ತರು.
ವಲಸಿಗರು ಬಹಳಷ್ಟು ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ: ಪದೇ ಪದೇ ಮನೆ ಬದಲಾವಣೆ, ವಲಸೆ ಹೋದ ಸ್ಥಳದ ಜೊತೆ ಸಾಮಾಜಿಕ ಮತ್ತು ಭಾವಾನಾತ್ಮಕ ನಂಟು, ಆಸ್ತಿ ಸೇರಿದಂತೆ ಹುಟ್ಟೂರಿನ ಅಭಿಮಾನದಿಂದಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಅಳಿಸದೇ ಹಾಗೇ ಇರುವುದರಿಂದ ವಲಸಿಗರು ತಮ್ಮ ಕಾರ್ಯ ನಿರ್ವಹಣೆ ಸ್ಥಳದಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳುವುದಿಲ್ಲ.
ಯುವಕರ ನಿರಾಸಕ್ತಿ ಹೋಗಲಾಡಿಸಲು ನೆರವು: ಯುವಕರು ಮತ್ತು ನಗರ ನಿರಾಸಕ್ತಿಯ ಮೇಲೆ ಕೇಂದ್ರೀಕರಿಸಿದ ನಂತರ ಚುನಾವಣಾ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸಲು ರಿಮೋಟ್ ಮತದಾನವು ಪರಿವರ್ತನೆಯ ಅಗತ್ಯವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಅಧಿಸೂಚನೆ ಪ್ರಕಾರ 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ 67.4ರಷ್ಟು ಮತದಾನವಾಗಿದೆ. ಆಯೋಗವು ಹೇಳಿದೆ. 30 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸದಿರುವ ವಿಷಯದ ಬಗ್ಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಭಿನ್ನ ಮತದಾರರ ಮತದಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆಂತರಿಕ ವಲಸೆ ಕಾರಣದಿಂದಾಗಿ ಮತ ಚಲಾಯಿಸಲು ಅಸಮರ್ಥತೆಯು ಮತದಾರರ ಮತದಾನವನ್ನು ಸುಧಾರಿಸಲು ಮತ್ತು ಚುನಾವಣೆಗಳಲ್ಲಿ ಭಾಗವಹಿಸಲು ಖಚಿತಪಡಿಸಿಕೊಳ್ಳಲು ತಿಳಿಸಬೇಕಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದೇಶದೊಳಗೆ ವಲಸೆಗೆ ಸಂಬಂಧಿಸಿದಂತೆ ಯಾವುದೇ ಕೇಂದ್ರೀಯ ಡೇಟಾಬೇಸ್ ಲಭ್ಯವಿಲ್ಲದಿದ್ದರೂ, ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಡೇಟಾದ ವಿಶ್ಲೇಷಣೆಯು ಕೆಲಸ, ಮದುವೆ ಮತ್ತು ಶಿಕ್ಷಣ - ಸಂಬಂಧಿತ ವಲಸೆಯನ್ನು ದೇಶೀಯ ವಲಸೆಯ ಪ್ರಮುಖ ಅಂಶಗಳಾಗಿ ಸೂಚಿಸುತ್ತದೆ.
ಇದನ್ನೂ ಓದಿ: ಬಿಹಾರದಲ್ಲಿ ದಲೈಲಾಮಾ ವಿರುದ್ಧ ಗೂಢಾಚಾರಿಕೆ.. ಚೀನಿ ಮಹಿಳೆಯ ರೇಖಾಚಿತ್ರ ಬಿಡುಗಡೆ