ETV Bharat / bharat

ಗಾಂಧೀಜಿ ನಿಂದಿಸಿ ಗೋಡ್ಸೆ ಹೊಗಳಿದ್ದ ಹಿಂದೂ ಗುರು ಕಾಳಿಚರಣ್‌ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲು - ಮಹಾತ್ಮ ಗಾಂಧೀಜಿ ವಿರುದ್ಧ ಹೇಳಿಕೆ

ಯಾರಾದರೂ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾಘೆಲ್ ಹೇಳಿದ್ದರು. ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಧಾರ್ಮಿಕ ಮುಖಂಡನನ್ನು ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು..

Remarks on Mahatma Gandhi, Remarks on Mahatma Gandhi in Maharastra, Case registered against Hindu seer, Case registered against Hindu seer in Maharastra, ಹಿಂದೂ ಧರ್ಮಗುರುಗಳ ವಿರುದ್ಧ ಪ್ರಕರಣ ದಾಖಲು, ಹಿಂದೂ ಧರ್ಮಗುರುಗಳ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲು, ಮಹಾತ್ಮ ಗಾಂಧೀಜಿ ವಿರುದ್ಧ ಹೇಳಿಕೆ, ಮಹಾರಾಷ್ಟ್ರದಲ್ಲಿ ಮಹಾತ್ಮ ಗಾಂಧೀಜಿ ಬಗ್ಗೆ ಹೇಳಿಕೆ,
ಮಹಾತ್ಮ ಗಾಂಧೀಜಿ ಕುರಿತು ಹೇಳಿಕೆ
author img

By

Published : Dec 28, 2021, 1:11 PM IST

ಅಕೋಲಾ : ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕೋಲಾದ ಹಳೆಯ ನಗರ ಪ್ರದೇಶದ ಶಿವಾಜಿನಗರದ ನಿವಾಸಿ ಕಾಳಿಚರಣ್ ಮಹಾರಾಜ್ ಅಲಿಯಾಸ್ ಅಭಿಜಿತ್ ಸರಾಗ್ ಭಾನುವಾರ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಜನರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೋಮವಾರ ಇಲ್ಲಿನ ಸಿಟಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳೀಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಶಾಂತ್ ಗವಾಂಡೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆ 294 (ಅಶ್ಲೀಲ ಕೃತ್ಯಗಳು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಕಾಳಿಚರಣ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಓದಿ: ಕೋವಿಡ್‌ ಲಸಿಕೆ ಕೊವೊವಾಕ್ಸ್, ಕಾರ್ಬೋವ್ಯಾಕ್ಸ್, ಮೊಲ್ನುಪಿರವಿರ್‌ ಮಾತ್ರೆ ತುರ್ತು ಬಳಕೆಗೆ ಅನುಮತಿ

ಭಾನುವಾರ ಸಂಜೆ ರಾಯ್‌ಪುರದಲ್ಲಿ ಎರಡು ದಿನಗಳ 'ಧರ್ಮ ಸಂಸದ್' (ಧಾರ್ಮಿಕ ಸಂಸತ್ತು) ಸಮಾರೋಪದಲ್ಲಿ ಕಾಳಿಚರಣ್ ಮಹಾರಾಜ್ ಮಹಾತ್ಮ ಗಾಂಧಿಯವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದರು. ಅಷ್ಟೇ ಅಲ್ಲ, ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದರು.

ಇದೇ ಕಾರ್ಯಕ್ರಮದಲ್ಲಿ ಧರ್ಮವನ್ನು ರಕ್ಷಿಸುವ ಸಲುವಾಗಿ ಕಟ್ಟಾ ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಂತೆ ಮಹಾರಾಜ್​ ಜನರನ್ನು ಕೇಳಿಕೊಂಡಿದ್ದರು. ಇದಾದ ಬಳಿಕ ರಾಯ್‌ಪುರದಲ್ಲಿ ಮಹಾರಾಜ್​ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಮಹಾರಾಜ್​ ಹೇಳಿಕೆಗಳನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್‌ರಿಂದ ತೀವ್ರ ಟೀಕೆಗೆ ಗುರಿಯಾದವು. ಈ ವಿಷಯವು ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ರಾಷ್ಟ್ರಪಿತನನ್ನು ನಿಂದಿಸುವ ಮೂಲಕ ಮತ್ತು ಸಮಾಜದಲ್ಲಿ ವಿಷವನ್ನು ಹರಡುವ ಮೂಲಕ ತನ್ನ ಉದ್ದೇಶವನ್ನು ಯಶಸ್ವಿಯಾಗಬಹುದೆಂದು ಕಪಟ ಭಾವಿಸಿದರೆ ಅದು ಅವನ ಭ್ರಮೆ.

ಯಾರಾದರೂ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾಘೆಲ್ ಹೇಳಿದ್ದರು. ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಧಾರ್ಮಿಕ ಮುಖಂಡನನ್ನು ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಎಂವಿಎ ಸರ್ಕಾರ (ಕಾಳಿಚರಣ್ ಮಹಾರಾಜರ) ಕಾಮೆಂಟ್‌ಗಳ ಬಗ್ಗೆ ವರದಿಯನ್ನು ಕೇಳುತ್ತದೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.