ನವದೆಹಲಿ: ಸರಕು ಸಾಗಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ರಿಲಯನ್ಸ್ ಆಯಿಲ್ ಗುಜರಾತ್ನ ಜಮ್ನಾಘರ್ನಲ್ಲಿರುವ ತೈಲ ಸಂಸ್ಕರಣಾ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ. ಸರಕುಗಳು ಸರಿಯಾದ ಸಮಯಕ್ಕೆ ತಲುಪದೆ ಸಮಸ್ಯೆಯಾಗುತ್ತಿರುವುದರಿಂದ ಇಲ್ಲಿನ 2ನೇ ತೈಲ ಸಂಸ್ಕರಣ ಘಟಕವನ್ನು ಮುಚ್ಚಲಾಗುವುದು ಎಂದು ಕಂಪನಿ ತಿಳಿಸಿದೆ.
ಜಮ್ನಾಘರ್ನಲ್ಲಿರುವ ಫ್ಲೂಯಿಲೈಜಡ್ ಕ್ಯಾಟಲಿಕ್ ಕ್ರ್ಯಾಕರ್ ಯುನಿಟ್ (ಎಫ್ಸಿಸಿಯು) ಸೇವೆಯನ್ನ ತುರ್ತಾಗಿ ಬಂದ್ ಮಾಡುತ್ತಿರುವುದಾಗಿ ಸಂಸ್ಥೆ ಹೇಳಿದೆ.
ರಿಲಯನ್ಸ್ ಸಂಸ್ಥೆಯು ಜುಮ್ನಾಘರ್ನಲ್ಲಿ ಎರಡು ತೈಲ ಸಂಸ್ಕರಣಾಗಾರಗಳನ್ನು ಹೊಂದಿದ್ದು, ಅದು ಕಚ್ಚಾ ತೈಲವನ್ನು ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸುವ ಕಾರ್ಯ ಮಾಡುತ್ತಿವೆ. ಒಂದು ಘಟಕದಲ್ಲಿ 35.2 ಮಿಲಿಯನ್ ಟನ್ ಅಷ್ಟು ತೈಲ ರಫ್ತಾದರೆ, 33 ಮಿಲಿಯನ್ ತೈಲ ದೇಶೀಯ ಬಳಕೆಗೆ ಲಭ್ಯವಾಗುತ್ತಿದೆ.
ಓದಿ: ಯೆಸ್ ಬ್ಯಾಂಕ್ ವಂಚನೆ ಪ್ರಕರಣ: ಗೌತಮ್ ಥಾಪರ್ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ!