ನವದೆಹಲಿ: ಕೋವಿಡ್ ವೈರಸ್ ರೂಪಾಂತರಿ ಒಮಿಕ್ರಾನ್ ಸೋಂಕಿನ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತವು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು 2022ರ ಜನವರಿ 31ರವರೆಗೆ ರದ್ದುಗೊಳಿಸಿದೆ. ಗುರುವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಡಿಸೆಂಬರ್ 15ರಿಂದ ಯಾವುದೇ ರೀತಿಯ ಮಾರ್ಗಸೂಚಿ ಇಲ್ಲದೇ, 14 ದೇಶಗಳ ಮೇಲಿನ ನಿರ್ಬಂಧ ಮುಂದುವರೆಸಿ ವಿಮಾನ ಸೇವೆ ಆರಂಭಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಬಳಿಕ ಡಿ. 1ರಂದು ಈ ಮರುಚಾಲನೆ ನಿರ್ಧಾರವನ್ನೂ ಕೂಡ ಡಿಜಿಸಿಎ ಮುಂದೂಡಿತ್ತು.
- — DGCA (@DGCAIndia) December 9, 2021 " class="align-text-top noRightClick twitterSection" data="
— DGCA (@DGCAIndia) December 9, 2021
">— DGCA (@DGCAIndia) December 9, 2021
ಈಗ ಮತ್ತೆ ಪ್ರಕಟಣೆ ಹೊರಡಿಸಿರುವ ಡಿಜಿಸಿಎ, ಭಾರತಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರ ಸೇವೆಯನ್ನು 2022ರ ಜನವರಿ 31ರವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್ 23ರಿಂದ ಈ ಸೇವೆಯು ರದ್ದುಗೊಂಡಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ 2020ರ ಮೇ ತಿಂಗಳಿನಿಂದ ಮತ್ತು ವಿಶೇಷ ಒಪ್ಪಂದಗಳ ಅನ್ವಯ 2020ರ ಜುಲೈನಿಂದ ಆಯ್ದ ದೇಶಗಳಿಗೆ ವಿಶೇಷ ಪ್ರಯಾಣಿಕರ ವಿಮಾನಗಳ ಸಂಚಾರ ನಡೆದಿದೆ.
-
In continuation to DGCA Circular No. 4/1/2020-IR dated 9.12.2021 on Travel & Visa Restrictions related to COVID-19, it is clarified to all concerned that all international flights under existing Bubble Agreements shall continue to operate till 31st of January 2022.
— DGCA (@DGCAIndia) December 9, 2021 " class="align-text-top noRightClick twitterSection" data="
">In continuation to DGCA Circular No. 4/1/2020-IR dated 9.12.2021 on Travel & Visa Restrictions related to COVID-19, it is clarified to all concerned that all international flights under existing Bubble Agreements shall continue to operate till 31st of January 2022.
— DGCA (@DGCAIndia) December 9, 2021In continuation to DGCA Circular No. 4/1/2020-IR dated 9.12.2021 on Travel & Visa Restrictions related to COVID-19, it is clarified to all concerned that all international flights under existing Bubble Agreements shall continue to operate till 31st of January 2022.
— DGCA (@DGCAIndia) December 9, 2021
ಭಾರತವು ಏರ್ ಬಬಲ್ ವ್ಯವಸ್ಥೆಯಡಿ ಅಮೆರಿಕ, ಇಂಗ್ಲೆಂಡ್, ಯುಎಇ, ಕೀನ್ಯಾ, ಭೂತಾನ್ ಹಾಗೂ ಫ್ರಾನ್ಸ್ ಸೇರಿ 32 ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದವಿರುವ ರಾಷ್ಟ್ರಗಳಿಗೆ ಮತ್ತು ಅಲ್ಲಿಂದ ಭಾರತಕ್ಕೆ ಮಾತ್ರ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಇರಲಿದೆ.
ಇದನ್ನೂ ಓದಿ: ವೀರಪುತ್ರರ ದುರಂತ ಸಾವು: ಪಾರ್ಥಿವ ಶರೀರದ ಅಂತಿಮ ದರ್ಶನ, ಕುಟುಂಬಸ್ಥರಿಗೆ ನಮೋ ಸಾಂತ್ವನ