ಜಮ್ಮು: ಆರ್ಮಿ ಅಗ್ನಿವೀರ್ ನೇಮಕಾತಿ ರ್‍ಯಾಲಿಗಾಗಿ ಆನ್‌ಲೈನ್ ನೋಂದಣಿಯು ಆಗಸ್ಟ್ 5 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 3 ರಂದು ಮುಕ್ತಾಯಗೊಳ್ಳಲಿದೆ. ಜಮ್ಮುವಿನ ಸುಂಜುವಾನ್ ಮಿಲಿಟರಿ ಸ್ಟೇಷನ್‌ನಲ್ಲಿರುವ ಜೋರಾವರ್ ಸ್ಟೇಡಿಯಂನಲ್ಲಿ ಅಕ್ಟೋಬರ್ 7 ರಿಂದ 20 ರವರೆಗೆ ಉಧಮ್‌ಪುರ, ರಾಜೌರಿ, ಪೂಂಚ್, ರಿಯಾಸಿ, ರಾಮಬನ್, ದೋಡಾ, ಕಿಶ್ತವಾರ್, ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ನೇಮಕಾತಿ ರ್‍ಯಾಲಿ ನಡೆಯಲಿದೆ.
ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ನೇಮಕ ಮಾಡಿಕೊಳ್ಳಲು ಈ ರ್‍ಯಾಲಿ ನಡೆಯಲಿದೆ. ಎಲ್ಲ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳು ಅಕ್ಟೋಬರ್ 1, 1999 ಮತ್ತು ಏಪ್ರಿಲ್ 1, 2005 (ಎರಡೂ ದಿನಾಂಕಗಳನ್ನು ಒಳಗೊಂಡಂತೆ) ನಡುವೆ ಜನಿಸಿದವರು ಮತ್ತು ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಅಗ್ನಿವೀರ್ (ಸಾಮಾನ್ಯ ಕರ್ತವ್ಯ), ಅಗ್ನಿವೀರ್ ತಾಂತ್ರಿಕ (ಎಲ್ಲ ಶಸ್ತ್ರಾಸ್ತ್ರಗಳು), ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಅಗ್ನಿವೀರ್ ಟೆಕ್ನಿಕಲ್ ಮತ್ತು ಟ್ರೇಡ್ಸ್ ಮ್ಯಾನ್ಗೆ (VIII ಮತ್ತು X ನೇ ತರಗತಿ ಪಾಸ್ ಆದವರು) ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸೇನಾ ನೇಮಕಾತಿಯು ಉಚಿತ ಸೇವೆಯಾಗಿದೆ ಮತ್ತು ಆಯ್ಕೆಯು ನ್ಯಾಯೋಚಿತವಾಗಿ, ಸಂಪೂರ್ಣ ಅರ್ಹತೆಯ ಆಧಾರದ ಮೇಲೆ ನಡೆಯುತ್ತದೆ ಎಂದು ಜಮ್ಮುವಿನ ಸೇನಾ ನೇಮಕಾತಿ ಕಚೇರಿ ಹೇಳಿದೆ. ವಂಚಕರಿಂದ ಅಭ್ಯರ್ಥಿಗಳು ದೂರವಿರುವಂತೆ ಸೂಚಿಸಲಾಗಿದೆ.
ಇದನ್ನು ಓದಿ:ಮಗಳ ಮೊದಲ ಪಿರಿಯಡ್ ಹಬ್ಬದಂತೆ ಆಚರಿಸಿದ ದಂಪತಿ.. ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿದ ಗಂಡ ಹೆಂಡ್ತಿ!