ETV Bharat / bharat

ನಡುರಸ್ತೆಯಲ್ಲೇ ಕಾರಿಗೆ ಬೆಂಕಿ ಹಚ್ಚಿದ ಮಾಲೀಕ: ಕಾರಣ ಮಾತ್ರ ವಿಚಿತ್ರ!

ಬ್ಯಾಂಕ್​ ಸಿಬ್ಬಂದಿ ಕಾರು ಸೀಜ್ ಮಾಡಿ ತೆಗೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಮಾಲೀಕ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

CAR FIRE
CAR FIRE
author img

By

Published : Nov 11, 2021, 5:40 PM IST

ಗ್ವಾಲಿಯರ್ ​(ಮಧ್ಯಪ್ರದೇಶ): ಕಾರು ಮಾಲೀಕನೋರ್ವ ಸ್ವಂತ ಕಾರಿಗೆ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ.

ಗ್ವಾಲಿಯರ್​​ನ ಭಿಂಡ್​ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರು ಖರೀದಿಸಿದ ಕಂತು ಸರಿಯಾಗಿ ಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕ್​ ರಿಕವರಿ ತಂಡ ಕಾರು ಸೀಜ್​ ಮಾಡಿ ತೆಗೆದುಕೊಂಡು ಹೋಗುತ್ತಿತ್ತು. ಈ ವೇಳೆ ಆಕ್ರೋಶಗೊಂಡಿರುವ ಮಾಲೀಕ ಪೆಟ್ರೋಲ್​​ ಎರಚಿ ಬೆಂಕಿ ಹಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: T20 World Cup: ತಂಡ ಫೈನಲ್​ಗೇರಿದ್ರೂ ಸಂಭ್ರಮಿಸದ ಗೆಲುವಿನ ರೂವಾರಿ ನಿಶಾಮ್, ಕಾರಣ ಏನು?

ರಿಕವರಿ ತಂಡ ಕಾರು ಸೀಜ್ ಮಾಡಲು ಮುಂದಾಗುತ್ತಿದ್ದಂತೆ ಕಾರಿನ ಮಾಲೀಕ ವಿನಯ್​ ಶರ್ಮಾ ಬೆದರಿಕೆ ಸಹ ಹಾಕಿದ್ದಾನೆ. ಈ ವೇಳೆ ತಂಡದ ಸಿಬ್ಬಂದಿ ಅವರ ವಿಡಿಯೋ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ಕೋಪಗೊಂಡಿರುವ ಕಾರು ಮಾಲೀಕ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಸಮೀಪದ ಕಾರ್ಖಾನೆ ಸಿಬ್ಬಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.