ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 80 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಕೋವಿಡ್ ಲಸಿಕೆಗೋಸ್ಕರ ದೇಶದಲ್ಲಿ ಹೊಸ ಪರಿಷ್ಕೃತ ಮಾರ್ಗಸೂಚಿ ಜಾರಿಗೊಂಡಿದ್ದು, ಅದರ ಮೊದಲ ದಿನವೇ ಇಷ್ಟೊಂದು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
-
More than 80 lakh doses of anti-COVID vaccine have been administered so far, on day one of the implementation of 'Revised Guidelines for COVID Vaccination' today: Union Health Ministry
— ANI (@ANI) June 21, 2021 " class="align-text-top noRightClick twitterSection" data="
(file photo) pic.twitter.com/fVmRkvmAwT
">More than 80 lakh doses of anti-COVID vaccine have been administered so far, on day one of the implementation of 'Revised Guidelines for COVID Vaccination' today: Union Health Ministry
— ANI (@ANI) June 21, 2021
(file photo) pic.twitter.com/fVmRkvmAwTMore than 80 lakh doses of anti-COVID vaccine have been administered so far, on day one of the implementation of 'Revised Guidelines for COVID Vaccination' today: Union Health Ministry
— ANI (@ANI) June 21, 2021
(file photo) pic.twitter.com/fVmRkvmAwT
ದೇಶದಲ್ಲಿ ಜನವರಿ 16ರಿಂದ ವ್ಯಾಕ್ಸಿನೇಷನ್ ಡ್ರೈವ್ ಆರಂಭಗೊಂಡಿದ್ದು, ಇದೇ ಮೊದಲ ಸಲ ಅತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ಇಲ್ಲಿಯವರೆಗೆ 28.7 ಕೋಟಿ ಜನರಿಗೆ ಲಸಿಕೆ ನೀಡಿದಂತಾಗಿದೆ ಎಂದು ಇಲಾಖೆ ತಿಳಿಸಿದೆ. ಕೇಂದ್ರ ಸರ್ಕಾರ ಇಂದಿನಿಂದ ಪ್ರತಿಯೊಬ್ಬ ಭಾರತೀಯನಿಗೂ ಉಚಿತ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಿದ್ದು, ದೇಶದ ಬಡವರು, ಮಧ್ಯಮ ವರ್ಗ ಮತ್ತು ಯುವಕರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ.
ಇದನ್ನೂ ಓದಿರಿ: Amarnath Yatra: ಕೋವಿಡ್ನಿಂದ ಈ ವರ್ಷವೂ ಅಮರನಾಥ ಯಾತ್ರೆ ರದ್ದು
ಕಳೆದ ಕೆಲ ದಿನಗಳ ಹಿಂದೆ ಅನೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕೋವಿಡ್ ವ್ಯಾಕ್ಸಿನ್ ಕೊರತೆ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಆದರೆ, ಇದೀಗ ಎಲ್ಲ ರೀತಿಯ ಸಮಸ್ಯೆ ಬಗೆಹರಿದಿರುವ ಕಾರಣ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗಿದೆ.
ಪ್ರಧಾನಿ ಮೋದಿ ಅಭಿನಂದನೆ
-
Today’s record-breaking vaccination numbers are gladdening. Vaccine remains our strongest weapon against COVID. Congratulations to those who got vaccinated & kudos to all frontline warriors working hard to ensure so many citizens got the vaccine. Well done India: PM Modi pic.twitter.com/Hp1U9cqaJS
— ANI (@ANI) June 21, 2021 " class="align-text-top noRightClick twitterSection" data="
">Today’s record-breaking vaccination numbers are gladdening. Vaccine remains our strongest weapon against COVID. Congratulations to those who got vaccinated & kudos to all frontline warriors working hard to ensure so many citizens got the vaccine. Well done India: PM Modi pic.twitter.com/Hp1U9cqaJS
— ANI (@ANI) June 21, 2021Today’s record-breaking vaccination numbers are gladdening. Vaccine remains our strongest weapon against COVID. Congratulations to those who got vaccinated & kudos to all frontline warriors working hard to ensure so many citizens got the vaccine. Well done India: PM Modi pic.twitter.com/Hp1U9cqaJS
— ANI (@ANI) June 21, 2021
ಒಂದೇ ದಿನ ದಾಖಲೆಯ ಮಟ್ಟದಲ್ಲಿ ವ್ಯಾಕ್ಸಿನ್ ಹಾಕಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಸಿದ್ದಾರೆ. ದಾಖಲೆ ಮಟ್ಟದಲ್ಲಿ ವ್ಯಾಕ್ಸಿನೇಷನ್ ಹಾಕಿರುವುದು ನಿಜಕ್ಕೂ ಸಂತೋಷಕರ, ಕೋವಿಡ್ ವಿರುದ್ಧ ಲಸಿಕೆ ಪ್ರಬಲ ಅಸ್ತ್ರವಾಗಿದೆ. ಕೋವಿಡ್ ವ್ಯಾಕ್ಸಿನ್ ನೀಡಲು ಶ್ರಮಿಸುತ್ತಿರುವ ಎಲ್ಲ ಮುಂಚೂಣಿ ಕಾರ್ಯಕರ್ತರು ಹಾಗೂ ವ್ಯಾಕ್ಸಿನ್ ಪಡೆದವರಿಗೆ ಅಭಿನಂದನೆಗಳು ಎಂದಿದ್ದಾರೆ.