ETV Bharat / bharat

ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ರಾಯ್​ಬರೇಲಿ ಬಂಡಾಯ​ ಶಾಸಕಿ ಅದಿತಿ, ಬಿಎಸ್ಪಿಗೂ ಆಘಾತ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ಉತ್ತರ ಪ್ರದೇಶದ ರಾಯ್​ಬರೇಲಿಯ ಕಾಂಗ್ರೆಸ್ ಬಂಡಾಯ​​ ಶಾಸಕಿ ಅದಿತಿ ಸಿಂಗ್​ ಇಂದು ಬಿಜೆಪಿ ಸೇರ್ಪಡೆಯಾದರು.

Aditi Singh-Vandana Singh
Aditi Singh-Vandana Singh
author img

By

Published : Nov 24, 2021, 7:17 PM IST

Updated : Nov 24, 2021, 7:24 PM IST

ಲಖನೌ(ಉತ್ತರ ಪ್ರದೇಶ): 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್​, ಬಿಎಸ್​ಪಿಗೆ ಇದೀಗ ದೊಡ್ಡ ಹೊಡೆತ ಬಿದ್ದಿದೆ.

ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಕಾಂಗ್ರೆಸ್​ ಹಾಗೂ ಬಿಎಸ್ಪಿಯ ಇಬ್ಬರು ಶಾಸಕಿಯರು ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ.

MLA Aditi Singh join BJP
ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕಿ ಅದಿತಿ ಸಿಂಗ್​​​

ಸದಾ ಒಂದಿಲ್ಲೊದು ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​​ ವಿರುದ್ಧ ಹರಿಹಾಯುತ್ತಿದ್ದ ಪಕ್ಷದ ರಾಯ್​ಬರೇಲಿಯ ರೆಬೆಲ್​ ಶಾಸಕಿ ಅದಿತಿ ಸಿಂಗ್​ ಜೊತೆಗೆ, ಬಿಎಸ್ಪಿಯ ಆಜಂ​ಗಢದ ಬಿಎಸ್​ಪಿ ಶಾಸಕಿ ವಂದನಾ ಸಿಂಗ್​​​ ಕೂಡ ಕಮಲ ಪಕ್ಷ ಸೇರಿಕೊಂಡರು.

ಇದನ್ನೂ ಓದಿ: ಮಸೂದೆ ಜಾರಿ, ರದ್ದುಗೊಳಿಸಿದಾಗಲೂ ಪ್ರಿಯಾಂಕಾ ಗಾಂಧಿಗೆ ಸಮಸ್ಯೆ, ಅವರಿಗೆ ಏನು ಬೇಕು?: ಕೈ ರೆಬಲ್‌ ​ ಶಾಸಕಿ ಪ್ರಶ್ನೆ

ಉತ್ತರ ಪ್ರದೇಶದ ಲಖನೌನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರು ಪಕ್ಷ ಸೇರಿಕೊಂಡಿದ್ದಾರೆ. ಅದಿತಿ ಸಿಂಗ್ (34)​​​ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ​ ಶಾಸಕಿ ಎಂದು ಗುರುತಿಸಿಕೊಂಡಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿ ಕಾಂಗ್ರೆಸ್​ ಕೆಂಗಣ್ಣಿಗೆ ಗುರಿಯಾಗಿದ್ದ ಈ ಶಾಸಕಿ, ಕಳೆದ ಕೆಲವು ದಿನಗಳ ಹಿಂದೆ ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರದ ನಿರ್ಧಾರ ಸಮರ್ಥಿಸಿ, ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ.

ಇದರ ಜೊತೆಗೆ, ಬಿಎಸ್​ಪಿ ಶಾಸಕಿ ವಂದನಾ ಸಿಂಗ್ ಕೂಡ ಕಮಲ ಮುಡಿದಿದ್ದು, ಇವರಿಗೆ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​ ಸಿಂಗ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಕಾಂಗ್ರೆಸ್​ ಪಕ್ಷದ ನಾಯಕ ದಿ.ಅಖಿಲೇಶ್ ಸಿಂಗ್​ ಅವರ ಪುತ್ರಿ ಅದಿತಿ ಸಿಂಗ್​, 2017ರಲ್ಲಿ ರಾಯ್​ಬರೇಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಪಕ್ಷದ ಟಿಕೆಟ್​ ಪಡೆದು ವಿಜಯ ಸಾಧಿಸಿದ್ದರು. ವಿಶೇಷವೆಂದರೆ, ಕಳೆದ ಮೂರು ದಶಕದಿಂದಲೂ ರಾಯ್​ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಪ್ರಾಬಲ್ಯವಿದೆ. ಇದೀಗ ಶಾಸಕಿ ಬಿಜೆಪಿ ಸೇರಿಕೊಂಡಿದ್ದಾರೆ.

Last Updated : Nov 24, 2021, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.