ETV Bharat / bharat

ಅಕ್ರಮ ಲೋನ್​ ಆ್ಯಪ್​ಗಳ ಹಾವಳಿ: ಆರ್​ಬಿಐ ಸಿದ್ಧಪಡಿಸಲಿದೆ ಸಕ್ರಮ ಆ್ಯಪ್​ಗಳ ಶ್ವೇತಪಟ್ಟಿ

ಅಕ್ರಮ ಲೋನ್​ ಅಪ್ಲಿಕೇಶನ್‌ಗಳಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

rbi-will-prepare-apps-whitelist-regarding-illegal-loan-apps
ಅಕ್ರಮ ಲೋನ್​ ಆ್ಯಪ್​ಗಳ ಹಾವಳಿ: ಆರ್​ಬಿಐ ಸಿದ್ಧಪಡಿಸಲಿದೆ ಸಕ್ರಮ ಆ್ಯಪ್​ಗಳ ಶ್ವೇತಪಟ್ಟಿ
author img

By

Published : Sep 9, 2022, 7:47 PM IST

ನವದೆಹಲಿ: ಅಕ್ರಮ ಲೋನ್​ ಆ್ಯಪ್​ಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲ ಸಕ್ರಮವಾದ ಅಪ್ಲಿಕೇಶನ್‌ಗಳ ಶ್ವೇತಪಟ್ಟಿ ಸಿದ್ಧಪಡಿಸಲಿದೆ. ಅಲ್ಲದೇ, ಶ್ವೇತಪಟ್ಟಿಯಲ್ಲಿರುವ ಆ್ಯಪ್​ಗಳು ಮಾತ್ರವೇ ಆಪ್ ಸ್ಟೋರ್‌ನಲ್ಲಿ ಹೋಸ್ಟ್ ಮಾಡುವುದನ್ನು ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಖಚಿತ ಪಡಿಸಲಿದೆ.

ಅಕ್ರಮ ಲೋನ್​ ಆ್ಯಪ್‌ಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅಕ್ರಮ ಲೋನ್​ ಅಪ್ಲಿಕೇಶನ್‌ಗಳಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮನಿ ಲಾಂಡರಿಂಗ್‌ಗೆ ಬಳಸಬಹುದಾದ 'ಬಾಡಿಗೆ' ಖಾತೆಗಳನ್ನು ಆರ್‌ಬಿಐ ಮೇಲ್ವಿಚಾರಣೆ ಮಾಡುತ್ತದೆ. ನಿಷ್ಕ್ರಿಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್‌ಬಿಎಫ್‌ಸಿಗಳ ದುರುಪಯೋಗವನ್ನು ತಪ್ಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆನ್​ಲೈನ್​ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ: ಮನನೊಂದು ಆತ್ಮಹತ್ಯೆ

ಪಾವತಿ ಅಗ್ರಿಗೇಟರ್‌ಗಳ ನೋಂದಣಿಯನ್ನು ಸಮಯದ ಮಿತಿಯೊಳಗೆ ಪೂರ್ಣಗೊಳಿಸುವುದನ್ನು ಆರ್​ಬಿಐ ಖಚಿತಪಡಿಸುತ್ತದೆ. ಅದರ ನಂತರ ಯಾವುದೇ ನೋಂದಾಯಿಸದ ಪಾವತಿ ಸಂಗ್ರಾಹಕಗಳನ್ನು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ. ಅಲ್ಲದೇ. ಶೆಲ್ ಕಂಪನಿಗಳನ್ನು ಗುರುತಿಸಲು ಮತ್ತು ಅವುಗಳ ದುರುಪಯೋಗವನ್ನು ತಡೆಗಟ್ಟಲು ನೋಂದಣಿ ರದ್ದುಗೊಳಿಸುವಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಲಾಗಿದೆ.

ಮೇಲಾಗಿ ದುರ್ಬಲ ವರ್ಗಗಳಿಗೆ ಸಾಲವನ್ನು ನೀಡಿ, ಹೆಚ್ಚಿನ ಬಡ್ಡಿದರಗಳನ್ನು ಪಡೆಯುವುದಲ್ಲದೇ ನಂತರ ಹೆಚ್ಚಿನ ಮೊತ್ತವನ್ನು ಈ ಆ್ಯಪ್​ಗಳು ವಸೂಲಿ ಮಾಡುತ್ತವೆ. ಹಣ ಪಾವತಿಸದೇ ಹೋದರೆ ಗ್ರಾಹಕರನ್ನೇ ಬೆದರಿಸುವ ತಂತ್ರಗಳನ್ನು ಅನುಸರಿಸುತ್ತವೆ.

ಇದನ್ನೂ ಓದಿ: 4,000 ರೂ. ಆ್ಯಪ್​ ಸಾಲಕ್ಕೆ ಪ್ರಾಣ ಕಳ್ಕೊಂಡ ಯುವಕ: ಸಾಲ ಕೊಟ್ಟವರ ಕಾಟ ಕೇಳಿದ್ರೆ ಬೆಚ್ಚಿಬೀಳ್ತಿರಾ!

ಇದಲ್ಲದೇ, ಈ ಆ್ಯಪ್​ಗಳಿಂದ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಮತ್ತು ಡೇಟಾ ಉಲ್ಲಂಘನೆಯ ಸಾಧ್ಯತೆ ಇದೆ. ಹೀಗಾಗಿ ಗ್ರಾಹಕರು, ಬ್ಯಾಂಕ್​ ಉದ್ಯೋಗಿಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರಿಗೆ ಸೈಬರ್ ಜಾಗೃತಿಯನ್ನು ಮೂಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಬ್ಯಾಂಕಿಂಗ್ ಕಾರ್ಯದರ್ಶಿಗಳಂತಹ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಬ್ಯಾಂಕಿಂಗ್ ಕಾರ್ಯದರ್ಶಿ ಹಾಗೂ ಕಾರ್ಪೊರೇಟ್ ವ್ಯವಹಾರಗಳು ಮತ್ತು ಐಟಿ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ನುಚ್ಚಕ್ಕಿ ರಫ್ತು ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ; ಇಂದಿನಿಂದ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.