ETV Bharat / bharat

ಆರ್‌ಬಿಐ ಮತ್ತೆ ಶೇ 0.35 - 0.50ರಷ್ಟು ರೆಪೋ ದರ ಹೆಚ್ಚಿಸಲಿದೆ: ಆಕ್ಸಿಸ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ

author img

By

Published : Jul 28, 2022, 7:08 PM IST

ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ರಿಸರ್ವ್ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಳ್ಳುತ್ತಿದೆಯಾದರೂ, ಮುಂದಿನ ಹಲವಾರು ತಿಂಗಳುಗಳವರೆಗೆ ದೇಶದಲ್ಲಿ ಹಣದುಬ್ಬರವು ಶೇಕಡಾ 6 ರ ಮಿತಿಗಿಂತ ಹೆಚ್ಚಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ರೆಪೋ ದರ ಹೆಚ್ಚಿಸಲಿದೆ ಎಂದ ಆಕ್ಸಿಸ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ

ನವದೆಹಲಿ: ಮುಂದಿನ ವಾರದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಈ ಅಂದಾಜನ್ನು ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸೌಗತ ಭಟ್ಟಾಚಾರ್ಯ ವ್ಯಕ್ತಪಡಿಸಿದ್ದಾರೆ. ಈ ಬಾರಿ ಪಾಲಿಸಿ ಬಡ್ಡಿದರಗಳಲ್ಲಿ ಅಂದರೆ ರೆಪೋ ದರದಲ್ಲಿ ಈ ಹೆಚ್ಚಳವು 0.35 ರಿಂದ 0.50 ಬೇಸಿಸ್ ಪಾಯಿಂಟ್‌ಗಳಾಗಿರಬಹುದು ಎಂದಿದ್ದಾರೆ.

ಮುಂದಿನ ವಾರದ ಈ ಹೆಚ್ಚಳದ ನಂತರವೂ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.

ಅಮೆರಿಕ ಫೆಡರಲ್​ ಬ್ಯಾಂಕ್​​​ ಸಹ ಈ ರೀತಿ ಮಾಡಿತ್ತು: ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ರೆಪೊ ದರ ಶೇ.5.75ಕ್ಕೆ ಏರಿಕೆಯಾಗಲಿದೆಯಂತೆ. ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪರಿಶೀಲನಾ ಸಭೆ ಈಗ ಆಗಸ್ಟ್ 3 ರಿಂದ 5 ರವರೆಗೆ ನಡೆಯಲಿದೆ. ಈ ಮೊದಲು ಈ ಸಭೆ ಆಗಸ್ಟ್ 2 ರಿಂದ 4 ರವರೆಗೆ ನಡೆಯಬೇಕಿತ್ತು. ಹೊಸ ಬಡ್ಡಿದರಗಳ ಘೋಷಣೆಯನ್ನು ಆಗಸ್ಟ್ 5 ರಂದು ಮಾಡಬಹುದಾಗಿದೆ . ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಕೂಡ ಬುಧವಾರದಂದು ಶೇಕಡಾ 0.75 ರಷ್ಟು ಬಡ್ಡಿದರಗಳನ್ನು ಹೆಚ್ಚಿಸಿದೆ.

ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರ : ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಮೇ ಮತ್ತು ಜೂನ್‌ನಲ್ಲಿ ಸತತ ಎರಡು ಬಾರಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಮೇ ತಿಂಗಳಲ್ಲಿ ಬಡ್ಡಿದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದರೆ, ಜೂನ್‌ನಲ್ಲಿ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ನಂತರ ಪ್ರಸ್ತುತ ರೆಪೋ ದರವು ಶೇಕಡಾ 4.90 ಕ್ಕೆ ತಲುಪಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಸೌಗತ ಭಟ್ಟಾಚಾರ್ಯ ಅವರ ಅಂದಾಜು ನಿಜವಾದರೆ ರೆಪೊ ದರವು 5.25 ರಿಂದ 5.40 ಕ್ಕೆ ಹೆಚ್ಚಾಗಬಹುದು.

ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ರಿಸರ್ವ್ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಳ್ಳುತ್ತಿದೆಯಾದರೂ, ಮುಂದಿನ ಹಲವಾರು ತಿಂಗಳುಗಳವರೆಗೆ ದೇಶದಲ್ಲಿ ಹಣದುಬ್ಬರವು ಶೇಕಡಾ 6 ರ ಮಿತಿಗಿಂತ ಹೆಚ್ಚಾಗಿರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸೆಪ್ಟೆಂಬರ್​​ನಲ್ಲಿ ಹಣದುಬ್ಬರ ದರವು ಮತ್ತಷ್ಟು ಹೆಚ್ಚಾಗುತ್ತದೆ, ನಂತರ ಅದರಲ್ಲಿ ಸ್ವಲ್ಪ ಮಿತವಾಗಿರಬಹುದು. ಒಟ್ಟಾರೆಯಾಗಿ, 2022-23 ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರ ಅಂದರೆ ಗ್ರಾಹಕ ಬೆಲೆ ಸೂಚ್ಯಂಕ (CPI) ದೇಶದಲ್ಲಿ ಸರಾಸರಿ 6.7 ಶೇಕಡಾದಲ್ಲಿ ಉಳಿಯುವ ನಿರೀಕ್ಷೆಯಿದೆ. ಮಾರ್ಚ್‌ಗೆ ಮೊದಲು ದೇಶದಲ್ಲಿ ಹಣದುಬ್ಬರ ದರವು ಶೇಕಡಾ 6 ಕ್ಕಿಂತ ಕಡಿಮೆ ಬರುವುದಿಲ್ಲ ಎಂದು ಅಂದಾಜಿಸಿದ್ದಾರೆ.

ಭಾರತದ ಆಮದು ಅವಲಂಬನೆಯಿಂದಾಗಿ ರೂಪಾಯಿ ಮೌಲ್ಯ ಕುಸಿತವು ಬೆಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದರೆ, ಕಳೆದ ಕೆಲವು ದಿನಗಳಿಂದ ವಸ್ತುಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ BPCL ನ $ 1.6 ಶತಕೋಟಿಯ ಪ್ರಸ್ತಾವಿತ ಹೂಡಿಕೆಗೆ ಅನುಮೋದನೆ: ಇದರ ಪ್ರಯೋಜನವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.