ಮುಂಬೈ : ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ ಹಾಂಗ್ ಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಎಸ್‌ಬಿಸಿ) ಬ್ಯಾಂಕ್‌ಗೆ 1.73 ಕೋಟಿ ರೂಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದಂಡ ವಿಧಿಸಿದೆ. ಕ್ರೆಡಿಟ್ ಮಾಹಿತಿ ಕಂಪನಿಗಳ ನಿಯಮಗಳು, 2006 (ಸಿಐಸಿ ನಿಯಮಗಳು) ಅಡಿಯಲ್ಲಿ ಕೆಲವು ನಿಯಮಗಳ ಉಲ್ಲಂಘನೆಗಾಗಿ ಆರ್‌ಬಿಐ ದಂಡ ಹಾಕಿದೆ.
ಇದನ್ನೂ ಓದಿ : ಅಡುಗೆ ಎಣ್ಣೆ ಬೆಲೆ ಇಳಿಕೆ: ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕಂಪನಿಗಳಿಗೆ ಕೇಂದ್ರ ಸೂಚನೆ
ಎಲ್ಲಾ ನಾಲ್ಕು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಶೂನ್ಯ ಬಾಕಿ ಇರುವ ಹಲವಾರು ಅವಧಿ ಮೀರಿದ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಎಚ್‌ಎಸ್‌ಬಿಸಿ ಬ್ಯಾಂಕ್ ತಪ್ಪಾದ ಕ್ರೆಡಿಟ್ ಮಾಹಿತಿಯನ್ನು ಒದಗಿಸಿದೆ. ಬ್ಯಾಂಕ್‌ನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧವಾಗಿ ಮಾರ್ಚ್ 31, 2021 ರಂದು ತನಿಖೆ ಮಾಡಲಾಗಿತ್ತು. ಈ ವೇಳೆ ಆರ್‌ಬಿಐ ತನ್ನ ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ಅಪಾಯದ ಮೌಲ್ಯಮಾಪನ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಪತ್ರ ವ್ಯವಹಾರಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ : ಶೇಕಡಾ 69 ರಷ್ಟು ಮಹಿಳೆಯರಿಂದ ಮುದ್ರಾ ಯೋಜನೆ ಸದ್ಬಳಕೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಬಳಿಕ ತನಿಖೆಯಲ್ಲಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಆರ್‌ಬಿಐನ ಹಲವು ನಿಯಮಗಳನ್ನು ಎಚ್‌ಎಸ್‌ಬಿಸಿ ಬ್ಯಾಂಕ್ ಅನುಸರಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಹೀಗಾಗಿ ನಿಯಮಗಳನ್ನು ಅನುಸರಿಸದೆ ಇರುವ ಕಾರಂ 1.73 ರೂ ಕೋಟಿ ದಂಡ, ಹಾಗು ಸಿಐಸಿ ನಿಯಮಗಳನ್ನು ನಿರ್ಲಕ್ಷಿಸಿ ಸರಿಯಾದ ಮಾಹಿತಿ ನೀಡದಿರುವುದಕ್ಕೆ ಕಾರಣ ಕೇಳಿ ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ, ಆರ್‌ಬಿಐ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಎಚ್‌ಎಸ್‌ಬಿಸಿ ಬ್ಯಾಂಕ್ ನೊಂದಿಗೆ ತನಿಖೆ ನಡೆಸಿದ ನಂತರ, ನಿಯಮಗಳ ಉಲ್ಲಂಘನೆಯ ದೃಷ್ಟಿಯಿಂದ ಬ್ಯಾಂಕ್‌ಗೆ 1.73 ಕೋಟಿ ರೂ ದಂಡ ವಿಧಿಸಲು ಆರ್‌ಬಿಐ ನಿರ್ಧರಿಸಿದೆ. ಜೊತೆಗೆ ಬ್ಯಾಂಕ್‌ನ ಗ್ರಾಹಕರೊಂದಿಗೆ ಯಾವುದೇ ರೀತಿಯ ವಹಿವಾಟಿನಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಕೇಂದ್ರೀಯ ಬ್ಯಾಂಕ್ ಹೊಂದಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ದಂಡ ವಿಧಿಸಿದಕ್ಕೆ ಗ್ರಾಹಕರ ಮೇಲೆ ಪರಿಣಾಮ ಏನು? : ಬ್ಯಾಂಕ್‌ಗಳು ಅಥವಾ ಸಹಕಾರಿ ಬ್ಯಾಂಕ್‌ಗಳ ನಿಯಮಗಳನ್ನು ಪಾಲಿಸದೆ ಇದ್ದಾಗ ಆರ್‌ಬಿಐ ದಂಡವನ್ನು ವಿಧಿಸುತ್ತದೆ. ಬ್ಯಾಂಕ್‌ಗಳಿಗೆ ವಿಧಿಸಲಾದ ಈ ದಂಡಕ್ಕೂ ಖಾತೆದಾರರಿಗೂ ಯಾವುದೇ ಸಂಬಂಧವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಲಭ್ಯವಿರುವ ಯಾವುದೇ ಸೌಲಭ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ : ಭಾರತದ ಫಿಚ್ ರೇಟಿಂಗ್ 'BBB-' ಯಲ್ಲಿ ಸ್ಥಿರ: ದೃಢವಾದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆ