ETV Bharat / bharat

ಡೇಟಾ ಸ್ಟೋರೇಜ್​​​ ಮಾನದಂಡ ಪಾಲಿಸದ Mastercardಗೆ ನಿರ್ಬಂಧ ವಿಧಿಸಿದ RBI! - ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007

ಸೂಚಿಸಿದ ಮಾನದಂಡಗಳನ್ನು ಪಾಲಿಸದ ಹಿನ್ನೆಲೆ ಮಾಸ್ಟರ್​ಕಾರ್ಡ್​ಗೆ ನಿರ್ಬಂಧ ವಿಧಿಸಿ ಆರ್​ಬಿಐ ಆದೇಶ ಹೊರಡಿಸಿದೆ. ಈ ಆದೇಶವು ಮಾಸ್ಟರ್‌ಕಾರ್ಡ್‌ನ ಈಗಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಆರ್​ಬಿಐ ಸ್ಪಷ್ಟಪಡಿಸಿದೆ.

Mastercard
Mastercard
author img

By

Published : Jul 15, 2021, 12:55 PM IST

ನವದೆಹಲಿ: ಸ್ಥಳೀಯ ಡೇಟಾ ಸ್ಟೋರೇಜ್ ಮಾನದಂಡಗಳನ್ನು ಪಾಲಿಸದ ಕಾರಣ ಜುಲೈ 22 ರಿಂದ ಭಾರತದಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಮಾಸ್ಟರ್‌ಕಾರ್ಡ್‌ಗೆ RBI ನಿರ್ಬಂಧ ವಿಧಿಸಿದೆ. ಅಗತ್ಯ ಪ್ರಮಾಣದ ಸಮಯ ನೀಡಿದರೂ ಮತ್ತು ಅವಕಾಶಗಳನ್ನು ನೀಡಲಾಗಿದ್ದರೂ ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಶೇಖರಿಸಿಡುವ ನಿರ್ದೇಶನಗಳಿಗೆ ಈ ಸಂಸ್ಥೆಯು ಬದ್ಧವಾಗಿಲ್ಲ ಎಂದು ಆರ್‌ಬಿಐ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಆದೇಶವು ಮಾಸ್ಟರ್‌ಕಾರ್ಡ್‌ನ ಈಗಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಕಾರ್ಡ್ ನೀಡುವ ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಮಾಸ್ಟರ್ ಕಾರ್ಡ್ ಸಲಹೆ ನೀಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007 (ಪಿಎಸ್‌ಎಸ್ ಕಾಯ್ದೆ) 17ರ ಅಡಿಯಲ್ಲಿ ಆರ್‌ಬಿಐಗೆ ಇರುವ ಅಧಿಕಾರವನ್ನು ಚಲಾಯಿಸಿ ಮೇಲ್ವಿಚಾರಣೆ ಕ್ರಮ ಕೈಗೊಳ್ಳಲಾಗಿದೆ. ಮಾಸ್ಟರ್‌ಕಾರ್ಡ್ ಎನ್ನುವುದು ಪಿಎಸ್‌ಎಸ್ ಕಾಯ್ದೆಯಡಿ ದೇಶದಲ್ಲಿ ಕಾರ್ಡ್ ನೆಟ್‌ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿರುವ ಪಾವತಿ ವ್ಯವಸ್ಥೆ ಆಪರೇಟರ್ ಆಗಿದೆ.

ಏಪ್ರಿಲ್ 6, 2018ರ ದಿನದಂದು ಆರ್‌ಬಿಐ ಹೊರಡಿಸಿದ್ದ ಸುತ್ತೋಲೆಯ ಪ್ರಕಾರ, ಆಪರೇಟರ್​ಗಳು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸುತ್ತಿರುವುದಾಗಿ ಎಲ್ಲ ಸಿಸ್ಟಮ್ ಪೂರೈಕೆದಾರರಿಗೆ ಆರು ತಿಂಗಳ ಅವಧಿಯಲ್ಲಿ ಖಚಿತಪಡಿಸುವಂತೆ ನಿರ್ದೇಶಿಸಲಾಗಿತ್ತು.

ಇದನ್ನೂ ಓದಿ : ನಿಲ್ಲದ ತೈಲ ದರ ಹೆಚ್ಚಳ: ಯಾವ್ಯಾವ ರಾಜ್ಯಗಳಲ್ಲಿ ಎಷ್ಟಿದೆ ಇಂಧನ ಬೆಲೆ?!

ಇದರ ಜತೆಗೆ ಆರ್​ಬಿಐ ನಿಯಮಾವಳಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದಾಗಿ ವರದಿ ಮಾಡಬೇಕಾಗಿತ್ತು. ಸಿಇಆರ್​ಟಿ - ಇನ್ ಎಂಪನೇಲ್ಡ್ ಆಡಿಟರ್ ನಡೆಸಿದ ಬೋರ್ಡ್ - ಅನುಮೋದಿತ ಸಿಸ್ಟಮ್ ಆಡಿಟ್ ವರದಿಯನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಸಲ್ಲಿಸಬೇಕಾಗಿತ್ತು. ಆದರೆ, ಸಂಸ್ಥೆ ಈ ಯಾವುದೇ ನಿಯಮ ಪಾಲಿಸಿಲ್ಲ ಎಂದು ಆರ್​ಬಿಐ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.