ETV Bharat / bharat

ಜೋಶಿಮಠದಲ್ಲಿ ಭೂಕುಸಿತ: ಬಿರುಕು ಬಿಟ್ಟ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ

ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ - ತೀವ್ರ ಬಿರುಕು ಬಿಟ್ಟ ಹೋಟೆಲ್​ಗಳು ಧರೆಗೆ - ತೆರವು ಕಾರ್ಯಾಚರಣೆಗೆ ಎಸ್​ಡಿಆರ್​ಎಫ್​ ತಂಡ- ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯಿಂದ ಪರಿಶೀಲನೆ

razing-of-hotel-building
ಜೋಶಿಮಠದಲ್ಲಿ ಭೂಕುಸಿತ
author img

By

Published : Jan 10, 2023, 3:23 PM IST

ಜೋಶಿಮಠ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಗಿರಿಧಾಮದಲ್ಲಿ ಭೂಮಿ ಕುಸಿತದಿಂದ ಹಾನಿಗೊಳಗಾದ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಇಂದಿನಿಂದ ಆರಂಭಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ನೆಲಸಮ ಕಾರ್ಯಾಚರಣೆ ನಡೆಯುತ್ತಿದೆ. ಭೂಕುಸಿತದಲ್ಲಿ ಹೆಚ್ಚು ಹಾನಿಗೊಳಗಾಗಿದ್ದ ಎರಡು ಹೋಟೆಲ್​ಗಳನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರ ರಕ್ಷಣೆ ಮತ್ತು ಕಾರ್ಯಾಚರಣೆಗಾಗಿ ಜೋಶಿಮಠದಲ್ಲಿ ಎಸ್‌ಡಿಆರ್‌ಎಫ್‌ನ ಎಂಟು ತಂಡಗಳನ್ನು ನಿಯೋಜಿಸಲಾಗಿದೆ. ತಂಡಗಳು ಇತರ ರಕ್ಷಣಾ ಪಡೆಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿವೆ. ಹಾನಿಗೊಳಗಾದ ಕಟ್ಟಡಗಳ ಸ್ಥಳ ಪರಿಶೀಲನೆಯ ಜೊತೆಗೆ ಅಪಾಯದಲ್ಲಿರುವ ಜನರ ರಕ್ಷಣೆಗೂ ಕೆಲಸ ಮಾಡುತ್ತಿವೆ ಎಂದು ಎಸ್‌ಡಿಆರ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ರಿದ್ಧಿಮ್ ಅಗರವಾಲ್ ತಿಳಿಸಿದರು.

ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಅವರ ನಿರ್ದೇಶನದಂತೆ ಹಾನಿಗೊಳಗಾದ ಕಟ್ಟಡಗಳನ್ನು ನೆಲಸಮ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ವಿಜ್ಞಾನಿಗಳು ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಜೋಶಿಮಠ ಪಟ್ಟಣದ ಎರಡು ಹೋಟೆಲ್‌ಗಳು ಭೂಕುಸಿತದಿಂದ ಗರಿಷ್ಠ ಹಾನಿಗೊಂಡಿದ್ದವು. ಆದ್ದರಿಂದ, ಅವುಗಳನ್ನು ಆದ್ಯತೆಯ ಮೇರೆಗೆ ಕೆಡವಲಾಯಿತು. ನೆಲಸಮಗೊಳಿಸುವ ಕಾರ್ಯದಲ್ಲಿ 60 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಎರಡು ಜೆಸಿಬಿಗಳು, ಎರಡು ಟ್ರಕ್‌ಗಳು ಮತ್ತು ಒಂದು ಬೃಹತ್ ಕ್ರೇನ್ ಮೂಲಕ ಹೋಟೆಲ್​ ಧ್ವಂಸ ಮಾಡಲಾಯಿತು ಎಂದು ರಾಜ್ಯ ವಿಪತ್ತು ನಿರ್ವಹಣಾ ಕಾರ್ಯದರ್ಶಿ ಡಾ.ರಂಜಿತ್ ಸಿನ್ಹಾ ಮಾಹಿತಿ ನೀಡಿದರು.

ಓದಿ: ಅಪಾಯದಂಚಿನಲ್ಲಿದೆ ಜೋಶಿಮಠ: ಪ್ರತಿ ಕ್ಷಣವೂ ನಮಗೆ ಮುಖ್ಯ-ಉತ್ತರಾಖಂಡ ಮುಖ್ಯ ಕಾರ್ಯದರ್ಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.