ETV Bharat / bharat

ಮಹಾ ‘ಮೈತ್ರಿ’ಯಲ್ಲಿಲ್ಲ ಬಿರುಕು.. ಐದು ವರ್ಷ ಪೂರೈಸಲು ಸರ್ಕಾರ ಬದ್ಧ : ಸಂಜಯ್‌ ರಾವತ್ - ಕಾಂಗ್ರೆಸ್ ಮುಖ್ಯಸ್ಥ ಭಾಯ್​ ಜಗ್ತಾಪ್

ಎಂವಿಎ(ಮಹಾವಿಕಾಸ್ ಅಗಾದಿ), ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಸಿಎಂ ಉದ್ಧವ್​ ಠಾಕ್ರೆಗೆ ಬೆಂಬಲ ನೀಡುತ್ತಿವೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬಯಸುತ್ತಿರುವ ಹಾಗೂ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿರುವ ಹೊರಗಿನ ಶಕ್ತಿಗಳು (ಬಿಜೆಪಿ) ಮೈತ್ರಿ ಮುರಿಯಲು ವಿಫಲ ಪ್ರಯತ್ನ ಮಾಡುತ್ತಿವೆ ಎಂದು ರಾವತ್ ವ್ಯಂಗ್ಯವಾಡಿದರು..

ರಾವತ್
ರಾವತ್
author img

By

Published : Jun 21, 2021, 7:20 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಸರ್ಕಾರದ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ. ಐದು ವರ್ಷಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್​ ಹೇಳಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೈತ್ರಿ ಮುರಿಯಲು ಪ್ರಯತ್ನಿಸುತ್ತಿರುವುದು ವ್ಯರ್ಥವಾಗುತ್ತಿವೆ ಎಂದು ಹೇಳಿದ್ದಾರೆ.

ಎಂವಿಎ(ಮಹಾವಿಕಾಸ್ ಅಗಾದಿ), ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಸಿಎಂ ಉದ್ಧವ್​ ಠಾಕ್ರೆಗೆ ಬೆಂಬಲ ನೀಡುತ್ತಿವೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬಯಸುತ್ತಿರುವ ಹಾಗೂ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿರುವ ಹೊರಗಿನ ಶಕ್ತಿಗಳು (ಬಿಜೆಪಿ) ಮೈತ್ರಿ ಮುರಿಯಲು ವಿಫಲ ಪ್ರಯತ್ನ ಮಾಡುತ್ತಿವೆ ಎಂದು ರಾವತ್ ವ್ಯಂಗ್ಯವಾಡಿದರು.

ಬಿಎಂಸಿ ಚುನಾವಣೆಯಲ್ಲಿ ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಭಾಯ್​ ಜಗ್ತಾಪ್​​ ಮಾತ್ರ ಸ್ಪರ್ಧಿಸುತ್ತಾರೆ. ಈ ಎಲೆಕ್ಷನ್​ನಲ್ಲಿ ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್​ ಮೈತ್ರಿಯಾಗಿದ್ದು, ಮಹಾ ವಿಕಾಸ್ ಅಗಾದಿ ಹೊರಗುಳಿದಿದೆ ಎಂದು ಕಾಂಗ್ರೆಸ್​ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನಾನಾ ಪಟೋಲೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೇಂದ್ರ ಸಂಪುಟ ವಿಸ್ತರಣೆ ಊಹಾಪೋಹ: ಪ್ರಧಾನಿ ಭೇಟಿಯಾಗಲಿದ್ದಾರಾ ನಿತೀಶ್?​

ಜನರ ಸಮಸ್ಯೆಗೆ ಪರಿಹಾರ ನೀಡದೆ ಕೇವಲ ಮತದಾನದ ಬಗ್ಗೆ ಮಾತನಾಡುವವರಿಗೆ ಜನತೆ ‘ಚಪ್ಪಲಿಗಳಿಂದ ಹೊಡೆಯುತ್ತಾರೆ’ ಎಂದು ಇತ್ತೀಚೆಗಷ್ಟೇ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.