ETV Bharat / bharat

ಐಸಿಯು ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ದೇಹದ ಅಂಗಾಂಗ ಕಚ್ಚಿದ ಇಲಿ! - etv bharat kannada

ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ದಾಖಲಾಗಿದ್ದ ವ್ಯಕ್ತಿಯ ಕಾಲನ್ನು ಇಲಿಗಳು ತಿಂದಿವೆ.

ಇಲಿ ಕಡಿತ
ಇಲಿ ಕಡಿತ
author img

By

Published : Jul 25, 2023, 2:29 PM IST

ಬದೌನ್ (ಉತ್ತರಪ್ರದೇಶ) : ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಸಿಯು (ತೀವ್ರ ನಿಗಾ ಘಟಕ)ದಲ್ಲಿ ದಾಖಲಾಗಿದ್ದ ರೋಗಿಯ ಅಂಗಾಂಗಗಳನ್ನು ಇಲಿಗಳು ಕಚ್ಚಿರುವ ಪ್ರಕರಣ ಮುನ್ನೆಲೆಗೆ ಬಂದಿದೆ.

ಜೂನ್ 30ರಂದು ಸಂಭವಿಸಿದ ಅಪಘಾತದಲ್ಲಿ ರಾಮ್ ಸೇವಕ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಗಿತ್ತು. ವ್ಯಕ್ತಿಯ ಗಂಭೀರ ಸ್ಥಿತಿಯನ್ನು ನೋಡಿದ ವೈದ್ಯರು ತಕ್ಷಣ ಐಸಿಯು ವಾರ್ಡ್‌ನಲ್ಲಿ ವೆಂಟಿಲೇಟರ್ ಸಪೋರ್ಟ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲು ಇತರೆ ವೈದ್ಯರಿಗೆ ಹೇಳಿದ್ದರು. ರಾತ್ರಿ ವೇಳೆ ನಿಯೋಜನೆಗೊಂಡಿರುವ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಾರ್ಡ್‌ನಲ್ಲಿರುವ ಇಲಿಗಳು ರಾಮ್​ಸೇವಕ್​ ಅವರ ಹಣೆ, ಕಿವಿ, ಕಾಲ್ಬೆರಳು ಸೇರಿದಂತೆ ದೇಹದ ಹಲವೆಡೆ ಕಚ್ಚಿವೆ ಎಂದು ಅವರ ಸಹೋದರ ರಾಮ್ ಪ್ರಕಾಶ್ ಹೇಳಿದರು.

ರೋಗಿಯ ಪತ್ನಿ ತನ್ನ ಪತಿಯನ್ನು ನೋಡಲು ಐಸಿಯು ವಾರ್ಡ್‌ಗೆ ಹೋದಾಗ ಗಂಡನ ಕಾಲಿಗೆ ಇಲಿ ಕಚ್ಚಿ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾರೆ. ಈ ಸಂಗತಿಯನ್ನು ಮರೆಮಾಚುತ್ತಲೇ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರೋಗಿಗೆ ಬ್ಯಾಂಡೇಜ್ ಹಾಕಿದ್ದರು ಎಂದು ರಾಮಸೇವಕ್ ಅವರ ಸಹೋದರ ರಾಮ್ ಗುಪ್ತಾ ಆರೋಪಿಸಿದ್ದಾರೆ.

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು, ರಾಮ್​ ಸೇವಕ್​ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಾಳುವಿಗೆ ಇಲಿ ಕಡಿದಿದೆ. ಈ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇಲಿಗಳು ವಾರ್ಡ್‌ಗಳಿಗೆ ಹಾಗೂ ರೋಗಿಗಳ ಸುತ್ತಮುತ್ತ ಬರದಂತೆ 'ರ್ಯಾಟ್‌ ಟ್ರ್ಯಾಪ್‌'ಗಳನ್ನು ಅಳವಡಿಸಲಾಗುತ್ತಿದೆ. ವೈದ್ಯಕೀಯ ಕಾಲೇಜಿನಲ್ಲಿ ಇಲಿಗಳು ಎಲ್ಲಿಂದ ಬಂದವು ಎಂಬುದು ತಿಳಿದಿಲ್ಲ. ಸಂಪೂರ್ಣ ತನಿಖೆಯನ್ನು 48 ಗಂಟೆಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಚಿತ್ರಮಂದಿರದಲ್ಲಿ ಮಹಿಳೆಗೆ ಇಲಿ ಕಡಿತ: ಇತ್ತೀಚೆಗೆ ಗುವಾಹಟಿಯಲ್ಲಿ ಅನಿತಾ ಎಂಬ ಮಹಿಳೆ ತಮ್ಮ ಕುಟುಂಬ ಸದಸ್ಯರೊಂದಿಗೆ ಭಂಗಾಗರ್ ಪ್ರದೇಶದ ಗ್ಯಾಲೇರಿಯಾ ಥಿಯೇಟರ್‌ನಲ್ಲಿ ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಚಿತ್ರ ವೀಕ್ಷಣೆ ವೇಳೆ ಅನಿತಾ ಅವರ ಕಾಲಿಗೆ ಇಲಿ ಕಚ್ಚಿತ್ತು. ತಕ್ಷಣ ಸಿನಿಮಾ ಹಾಲ್‌ನಿಂದ ಹೊರಬಂದ ಅವರು ಕಾಲು ನೋಡಿಕೊಂಡ ವೇಳೆ ಗಾಯವಾಗಿದ್ದು ಕಂಡು ಬಂದಿತ್ತು. ಈ ವಿಷಯವನ್ನು ಚಿತ್ರಮಂದಿರದ ಆಡಳಿತ ಮಂಡಳಿಗೆ ಹೇಳಿದ್ದರೂ ಸಹ ಅನಿತಾಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡದೆ ಥಿಯೇಟರ್ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ನೊಂದ ಮಹಿಳೆ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ವಿಲೇವಾರಿ ಮಾಡಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಗುವಾಹಟಿಯ ಗಲೇರಿಯಾ ಚಿತ್ರಮಂದಿರದ ಅಧಿಕಾರಿಗಳಿಗೆ ಮಹಿಳೆಯ ವೈದ್ಯಕೀಯ ವೆಚ್ಚ, ಮಾನಸಿಕ ನೋವುಂಟು ಮಾಡಿದ ವೆಚ್ಚವಾಗಿ ಒಟ್ಟು ₹ 67,282.48 ಪಾವತಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ: ರೇಬಿಸ್‌ನಿಂದ 8 ವರ್ಷದ ಬಾಲಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.