ETV Bharat / bharat

ICUನಲ್ಲಿ ಚಿಕಿತ್ಸೆ ಪಡೀತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ರೆಪ್ಪೆ ಕಚ್ಚಿ, ಕೂದಲು ತಿಂದ ಮೂಷಿಕ! - ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ಮೇಲೆ ಇಲಿ ದಾಳಿ

ರಾಜಸ್ತಾನದ ಕೋಟಾ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರ್ಶ್ವವಾಯು ಪೀಡಿತ ಮಹಿಳಾ ರೋಗಿಯ ಮೇಲೆ ಇಲಿ ದಾಳಿ ಮಾಡಿ ಬಲಗಣ್ಣಿನ ರೆಪ್ಪೆಯನ್ನು ಕಚ್ಚಿ, ಕೂದಲನ್ನು ತಿಂದು ಹಾಕಿದೆ.

rat-eats-up-paralysed
ಕೂದಲು ತಿಂದ ಮೂಸಿಕ
author img

By

Published : May 17, 2022, 9:27 PM IST

Updated : May 18, 2022, 6:16 AM IST

ಕೋಟಾ(ರಾಜಸ್ಥಾನ): ಸರ್ಕಾರಿ ಆಸ್ಪತ್ರೆಗಳ ಸುವ್ಯವಸ್ಥೆಗೆ ಸರ್ಕಾರ ಏನೇ ಮಾಡಿದರೂ ಅವ್ಯವಸ್ಥೆ ಮಾತ್ರ ತಪ್ಪಿದ್ದಲ್ಲ. ರಾಜಸ್ಥಾನದ ಕೋಟಾ ನಗರದಲ್ಲಿನ ಸರ್ಕಾರಿ ಆಸ್ಪ್ರತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಯ ಕಣ್ಣಿನ ರೆಪ್ಪೆ ಮತ್ತು ಕೂದಲನ್ನು ಇಲಿಯೊಂದು ಕಚ್ಚಿ ತಿಂದಿದೆ. ದುರಂತ ಅಂದರೆ ಆ ಮಹಿಳೆ ಇದ್ದಿದ್ದು ಐಸಿಯುನಲ್ಲಿ. ಇಲಿ ದಾಳಿ ಮಾಡಿದ್ದೂ ಅಲ್ಲೇ.

ಕೋಟಾ ನಗರದಲ್ಲಿರುವ ಮಹಾರಾವ್ ಭೀಮ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೂಪವತಿ(28) ಮೇಲೆ ಮೂಸಿಕ ದಾಳಿ ಮಾಡಿದೆ. ಈ ಆಸ್ಪತ್ರೆಯ ನ್ಯೂರೋ ಸ್ಟ್ರೋಕ್​ ವಿಭಾಗದಲ್ಲಿ 46 ದಿನಗಳಿಂದ ಈಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಇಡೀ ದೇಹದ ಯಾವುದೇ ಅಂಗ ಚಲನೆಯಲ್ಲಿಲ್ಲ.

ಮೇ 16 ರಂದು ಮಧ್ಯಾಹ್ನದ ವೇಳೆ ಮಹಿಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಐಸಿಯುನೊಳಗೆ ನುಗ್ಗಿರುವ ಇಲಿ ಈಕೆಯ ಕಣ್ಣಿನ ಮೇಲೆ ದಾಳಿ ಮಾಡಿದೆ. ಅಲ್ಲದೇ ರೆಪ್ಪೆಯನ್ನು ಕಚ್ಚಿದ್ದಲ್ಲದೇ, ರೆಪ್ಪೆಯ ಮೇಲಿನ ಕೂದಲನ್ನು ತಿಂದು ಹಾಕಿದೆ. ಇದನ್ನು ಕಂಡ ಆಕೆಯ ಪತ್ನಿ ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದಾರೆ. ಬಳಿಕ ಇದನ್ನು ಯಾರಿಗೂ ತಿಳಿಸದಂತೆ ಕುಟುಂಬಸ್ಥರಿಗೆ ವೈದ್ಯರು ಸೂಚಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಆಸ್ಪತ್ರೆ ವೈದ್ಯರು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ವಿಚಾರವನ್ನು ತಳ್ಳಿ ಹಾಕಿದ್ದಾರೆ. ಆದರೆ, ಕುಟುಂಬಸ್ಥರ ಪ್ರಕಾರ. ಐಸಿಯುನಲ್ಲಿದ್ದ ಮಹಿಳೆಯ ಕಣ್ಣಿನ ಮೇಲೆ ಇಲಿ ಇದ್ದಿದ್ದನ್ನು ನಾವೇ ನೋಡಿದ್ದೇವೆ. ಅದು ಬಲಕಣ್ಣಿನ ರೆಪ್ಪೆಯನ್ನು ಕಚ್ಚಿದೆ. ಇದರಿಂದ ಕಣ್ಣಿನ ಭಾಗದಲ್ಲಿ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ಆರೋಪಿಸಿದ್ದಾರೆ.

ವೈದ್ಯರು ನೇತ್ರ ಚಿಕಿತ್ಸಾ ವಿಭಾಗದ ವೈದ್ಯರನ್ನು ಸಂಪರ್ಕಿಸಿದ್ದು, ಚಿಕಿತ್ಸೆ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಅಗತ್ಯವಿದ್ದರೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಮಾಡಲು ಮುಂದಾಗಿದ್ದಾರೆ.

ಓದಿ: ಸಿಜೇರಿಯನ್ ಒಳಗಾದ ಬಾಣಂತಿಯರ ಹೊಲಿಗೆ ಬಿಚ್ಚುತ್ತಿರುವ ಪ್ರಕರಣ.. 2ನೇ ದಿನವೂ ಮುಂದುವರಿದ ವಿಚಾರಣೆ

Last Updated : May 18, 2022, 6:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.