ETV Bharat / bharat

ಮುಸ್ಲಿಂ ಮಹಿಳೆಯರಿಗೆ ಪೂಜಾರಿಯಿಂದ ಅಪಹರಣ-ಅತ್ಯಾಚಾರ ಬೆದರಿಕೆ: ಪೊಲೀಸರಿಂದ ತನಿಖೆ - ಮಹಿಳೆಯರಿಗೆ ಪೂಜಾರಿಯಿಂದ ಮಹಿಳೆಯರಿಗೆ ಬೆದರಿಕೆ

ರಸ್ತೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕಾರಿನಲ್ಲಿ ಕುಳಿತಿದ್ದ ಪೂಜಾರಿಯೊಬ್ಬರು ಮಾತನಾಡುತ್ತಾ ಮುಸ್ಲಿಂ ಮಹಿಳೆಯರಿಗೆ ಬಹಿರಂಗವಾಗಿ ಅಪಹರಣ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ಸತ್ಯಾಸತ್ಯತೆಯನ್ನು ತನಿಖೆ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಪೂಜಾರಿಯಿಂದ ಅಪಹರಣ-ಅತ್ಯಾಚಾರದ ಬೆದರಿಕೆ

author img

By

Published : Apr 8, 2022, 3:18 PM IST

ಲಖನೌ(ಉತ್ತರ ಪ್ರದೇಶ): ಮುಸ್ಲಿಂ ಮಹಿಳೆಯರಿಗೆ ಪೂಜಾರಿಯೊಬ್ಬರು ಬಹಿರಂಗವಾಗಿ ಅಪಹರಣ ಮತ್ತು ಅತ್ಯಾಚಾರದ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರು ದಿನಗಳ ಹಿಂದೆ ಮಸೀದಿ ಹೊರಗಡೆಯೇ ಇಂತಹ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • @NCWIndia has taken serious note of the incident and condemns the statement made by the accused. Chairperson @sharmarekha has written to @dgpup to immediately intervene and to register an FIR against the accused. NCW has also sought arrest of the accused at the earliest.

    — NCW (@NCWIndia) April 8, 2022 " class="align-text-top noRightClick twitterSection" data=" ">

ರಸ್ತೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕಾರಿನಲ್ಲಿ ಕುಳಿತಿದ್ದ ಪೂಜಾರಿಯೊಬ್ಬರು ಮಾತನಾಡುತ್ತಾ, ಮುಸ್ಲಿಂ ಮಹಿಳೆಯರಿಗೆ ಈ ರೀತಿಯ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋವನ್ನು ಫ್ಯಾಕ್ಟ್​​ ಚೆಕ್ಕಿಂಗ್​ ವೆಬ್​ಸೈಟ್​ನ ಸಹ ಸಂಸ್ಥಾಪಕ ಮೊಹಮ್ಮದ್​ ಜುಬೈರ್​ ಎಂಬುವವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಇದನ್ನು ಗಮನಿಸಿರುವ ರಾಷ್ಟ್ರೀಯ ಮಹಿಳಾ ಆಯೋಗವು ಪೂಜಾರಿ ಹೇಳಿಕೆಯನ್ನು ಖಂಡಿಸಿದ್ದಲ್ಲದೇ, ಗಂಭೀರವಾಗಿ ಪರಿಗಣಿಸಿದೆ.

ಈ ಘಟನೆ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಉತ್ತರ ಪ್ರದೇಶದ ಡಿಜಿಪಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ಡಿಜಿಪಿ ಮಧ್ಯಪ್ರವೇಶಿಸಿ ಆರೋಪಿ ವಿರುದ್ದ ಎಫ್​ಐಆರ್​ ದಾಖಲಿಸಬೇಕು. ಆದಷ್ಟು ಬೇಗ ಆರೋಪಿಯನ್ನು ಬಂಧಿಸಬೇಕೆಂದು ಆಯೋಗ ಆಗ್ರಹಿಸಿದೆ.

ಅಲ್ಲದೇ, ಮಹಿಳೆಯರ ವಿರುದ್ಧ ಇಂತಹ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮೂಕ ಪ್ರೇಕ್ಷಕರಾಗಿ ಇರುವುದು ಸರಿಯಲ್ಲ. ಡಿಜಿಪಿ ಬರೆದ ಪತ್ರವನ್ನು ಸೀತಾಪುರ ಎಸ್​ಪಿಗೂ ರವಾನಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ : ರೈಲಿಗೆ ಸಿಲುಕಿ ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.