ETV Bharat / bharat

ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ

ನೀವೂ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲ ನಾವೇ ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆಂದು ಕಳೆದ ಕೆಲ ದಿನಗಳ ಹಿಂದೆ ನವನೀತ್​-ರಾಣಾ ದಂಪತಿ ಸಿಎಂಗೆ ಸವಾಲು ಹಾಕಿದ್ದರು. ಇದೆಲ್ಲಾ ಘಟನೆ ನಡುವೆ ಅವರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ..

ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ
ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ
author img

By

Published : Apr 24, 2022, 2:09 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್​ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ಅಮರಾವತಿ ಸಂಸದೆ ನವನೀತ್ ಕೌರ್​​ ಅವರನ್ನು ಪೊಲೀಸರು ಬಂಧನ ಮಾಡಿದ್ದರು. ಈಗ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ನೀವೂ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲ ನಾವೇ ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆಂದು ಕಳೆದ ಕೆಲ ದಿನಗಳ ಹಿಂದೆ ನವನೀತ್​-ರಾಣಾ ದಂಪತಿ ಸಿಎಂಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಮುಂಬೈಗೆ ಆಗಮಿಸಿದ್ದರು. ಆದರೆ, ತಮ್ಮ ನಿರ್ಧಾರ ರದ್ದು ಮಾಡುತ್ತಿರುವುದಾಗಿ ಅವರು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಇದರ ಬೆನ್ನಲ್ಲೇ ಈಗ ಬಾಂದ್ರಾ ನ್ಯಾಯಾಲಯದ ರಜಾ ಪೀಠವು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಸೆಕ್ಷನ್ 34, 124A (ದೇಶದ್ರೋಹ), 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು IPC ಮತ್ತು ಸೆಕ್ಷನ್ 37(1)ದ ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯಿದೆಯ 135 ಸೆಕ್ಷನ್ ಪ್ರಕಾರ ಬಂಧನ ಮಾಡಲಾಗಿತ್ತು.

ಆರಂಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಅವರು ರಾಣಾ ದಂಪತಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಕೋರಿದ್ದರು. ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಿಜ್ವಾನ್ ಮರ್ಚಂಟ್, ಈ ಮನವಿಯನ್ನು ವಿರೋಧಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಸೆಕ್ಷನ್‌ಗಳನ್ನು ಪ್ರಶ್ನಿಸಿದ್ದರು. ರಿಮಾಂಡ್ ಅರ್ಜಿಯಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ಎಎ ಘಾನಿವಾಲೆ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನದ ಶಿಕ್ಷೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.