ನವದೆಹಲಿ : ಅಯೋಧ್ಯೆಯಲ್ಲಿ ಮೂರು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ನೆಲ ಮಹಡಿ ನಿರ್ಮಾಣ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಜನವರಿ 22 ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ ಅವರು, "ಜನವರಿ 20 ರಿಂದ 24 ರ ನಡುವೆ ನಡೆಯುವ 'ಪ್ರಾಣ ಪ್ರತಿಷ್ಠಾಪನೆ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ. ಆದ್ರೆ, ಅಂತಿಮ ದಿನಾಂಕವನ್ನು ಪ್ರಧಾನಿ ಕಾರ್ಯಾಲಯ ತಿಳಿಸಬೇಕಾಗಿದೆ" ಎಂದು ಹೇಳಿದರು.
-
Recent pictures from Shri Ram Janmabhoomi Mandir construction site.
— Shri Ram Janmbhoomi Teerth Kshetra (@ShriRamTeerth) September 25, 2023 " class="align-text-top noRightClick twitterSection" data="
श्री राम जन्मभूमि मंदिर निर्माण स्थल से आज प्राप्त चित्र pic.twitter.com/qMKiQhPRAn
">Recent pictures from Shri Ram Janmabhoomi Mandir construction site.
— Shri Ram Janmbhoomi Teerth Kshetra (@ShriRamTeerth) September 25, 2023
श्री राम जन्मभूमि मंदिर निर्माण स्थल से आज प्राप्त चित्र pic.twitter.com/qMKiQhPRAnRecent pictures from Shri Ram Janmabhoomi Mandir construction site.
— Shri Ram Janmbhoomi Teerth Kshetra (@ShriRamTeerth) September 25, 2023
श्री राम जन्मभूमि मंदिर निर्माण स्थल से आज प्राप्त चित्र pic.twitter.com/qMKiQhPRAn
ಪ್ರತಿ ವರ್ಷ ರಾಮನವಮಿಯ ದಿನದಂದು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಕ್ಷಣ ಮಾತ್ರದಲ್ಲಿ ಬೀಳುವಂತೆ ಮಾಡುವ ಉಪಕರಣವನ್ನು ದೇವಾಲಯದ 'ಶಿಖರ'ದ ಮೇಲೆ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಈ ವಿಶಿಷ್ಟ ಉಪಕರಣದ ವಿನ್ಯಾಸವನ್ನು ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಪುಣೆಯ ಒಂದು ಸಂಸ್ಥೆ ಜಂಟಿಯಾಗಿ ಇದಕ್ಕಾಗಿ ಗಣಕೀಕೃತ ಕಾರ್ಯಕ್ರಮವನ್ನು ರಚಿಸಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ನೆಲ ಅಂತಸ್ತಿನ ಕಾಮಗಾರಿಯನ್ನು ಡಿಸೆಂಬರ್ 2023 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಜ್ಞಾನವುಳ್ಳ ಸಂತರು ಮತ್ತು ಋಷಿಗಳೊಂದಿಗೆ ಸಮಾಲೋಚಿಸಿ 'ಪ್ರಾಣ ಪ್ರತಿಷ್ಠಾಪನೆ'ಯನ್ನು ಪ್ರಾರಂಭಿಸಲಾಗುವುದು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಯೋಜಿತ ಸಮಾರಂಭದ ವಿವರಗಳ ಬಗ್ಗೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಮಭಕ್ತರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ಅಯೋಧ್ಯೆಯಲ್ಲಿ ದೇಶೀಯ ವಿಮಾನಗಳ ಹಾರಾಟ ಶುರು
ಇನ್ನೊಂದೆಡೆ, ಮರ್ಯಾದಾ ಪುರುಷೋತ್ತಮ ಕ್ಷೇತ್ರ ಟ್ರಸ್ಟ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ರಾಮಮಂದಿರ ನಿರ್ಮಾಣದ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದೆ. ಈ ಛಾಯಾಚಿತ್ರಗಳಲ್ಲಿ ಮೊದಲ ಅಂತಸ್ತಿನ ಸರಿಸುಮಾರು ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೀಗ ನೆಲ ಮಹಡಿಯಲ್ಲಿ ಬಾಗಿಲು, ಕೆತ್ತನೆ ಕಾಮಗಾರಿ ಮುಗಿಸಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಮೇಲ್ಛಾವಣಿ ಮಾಡಲು ಎಲ್ಲಾ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ನಿರಂತರವಾಗಿ 24 ಗಂಟೆಗಳ ಕಾಲ ಕಾಮಗಾರಿ ನಡೆಯುತ್ತಿದ್ದು, ಮೊದಲ ಮಹಡಿಯ ಮೇಲ್ಛಾವಣಿ ಕೆಲಸ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : Ram Mandir : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ ; ನವೆಂಬರ್‌ನಿಂದ ವಿದೇಶಿ ದೇಣಿಗೆಗೆ ಅವಕಾಶ ಸಾಧ್ಯತೆ
ಇನ್ನೊಂದೆಡೆ, ರಾಮಮಂದಿರ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಪ್ರಸ್ತುತ, ಇಂಜಿನಿಯರ್‌ಗಳು, ಮೇಲ್ವಿಚಾರಕರು, ವ್ಯವಸ್ಥಾಪಕರು, ಕಾರ್ಮಿಕರು ಮತ್ತು ಇತರೆ ಇಲಾಖೆಗಳಿಗೆ ಸೇರುವ ಸುಮಾರು 3000 ಮಂದಿ ಕಾರ್ಮಿಕರು ರಾಮಮಂದಿರ ನಿರ್ಮಾಣದಲ್ಲಿ ತೊಡಗಿದ್ದಾರೆ.