ಅಯೋಧ್ಯೆ(ಉತ್ತರ ಪ್ರದೇಶ): ಕಟ್ಟಡ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ರಾಮ್ ಮಂದಿರ ದೇವಾಲಯಕ್ಕೆ ಅಡಿಪಾಯ ಹಾಕುವ ಯೋಜನೆಯನ್ನು ಅಂತಿಮಗೊಳಿಸಲು ರಾಮ್ ಮಂದಿರ ನಿರ್ಮಾಣ ಸಮಿತಿ ಶ್ರಮಿಸುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯರೊಬ್ಬರು ತಿಳಿಸಿದ್ದಾರೆ.
ರಾಮ್ ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ತ್ರಿಪೇಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ಸಭೆಯ ಮೊದಲ ದಿನದ ನಂತರ, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಸುದ್ದಿ ಸಂಸ್ಥೆ ಜತೆ ಮಾತನಾಡಿ, ಲಾರ್ಸೆನ್ ಆ್ಯಂಡ್ ಟೌಬ್ರೊ ಮತ್ತು ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್‌ನ ತಜ್ಞರೊಂದಿಗೆ ಸಮಿತಿಯು ಸಿದ್ಧತೆಗಳನ್ನು ಪರಿಶೀಲಿಸಿದೆ. ದೇವಾಲಯ ನಿರ್ಮಾಣ ಮತ್ತು ವಿನ್ಯಾಸ ಯೋಜನೆ ಕುರಿತು ಮಾತುಕತೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ - ಡಿಸೆಂಬರ್ 8ಕ್ಕೆ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮ: ಪ್ರಧಾನಿಯಿಂದ ಭಾಷಣ
ರಾಮ್ ಜನಮಭೂಮಿ ದೇವಸ್ಥಾನಕ್ಕೆ ಅಡಿಪಾಯ ಹಾಕುವ ಯೋಜನೆ ಅಂತಿಮಗೊಳಿಸಲು ಸಮಿತಿ ಕೆಲಸ ಮಾಡುತ್ತಿದೆ. ತಜ್ಞರು ನೆಲದ ಕೆಳಗೆ ಮರಳು ಇರುವುದನ್ನು ಕಂಡುಕೊಂಡಿದ್ದಾರೆ. ಆದರೆ ಇದು ಅಚ್ಚರಿಯೇನಲ್ಲ. ಅಯೋಧ್ಯೆಯು ನದಿಯ ದಡದಲ್ಲಿ ಇರುವುದರಿಂದ ಮರಳು ಮಣ್ಣು ಅಥವಾ ಸಡಿಲವಾದ ಮರಳು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ತಾಜ್ ಮಹಲ್ ಅನ್ನು ಉದಾಹರಣೆಯನ್ನು ತೆಗೆದುಕೊಳ್ಳಿ. ಭೂಮಿಯ ಕೆಳಗೆ ಸಡಿಲವಾದ ಮರಳು ಹೊಂದಿರುವ ಭೂಮಿಯಲ್ಲಿ ಅದರ ರಚನೆಗೆ ಯಾವುದೇ ಹಾನಿಯಾಗದಂತೆ ನಿಂತಿದೆ. ರಾಮ್ ಮಂದಿರದ ಅಡಿಪಾಯವು 1,000 ವರ್ಷಗಳ ಕಾಲ ಉಳಿಯುವಷ್ಟು ಸದೃಢವಾಗಿ ಇರುಬೇಕು. ತಜ್ಞರು ಇದನ್ನು ಖಚಿತಪಡಿಸುವ ಕೆಲಸ ಮಾಡುತ್ತಾರೆ ಎಂದರು.