ETV Bharat / bharat

winter session : ರಾಜ್ಯಸಭಾ ಅಧಿವೇಶನ 2 ಗಂಟೆಗೆ ಆರಂಭ

ಸೋಮವಾರವೂ ಕಾಂಗ್ರೆಸ್​ ಮತ್ತು ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು 12 ಸಹೋದ್ಯೋಗಿಗಳ ಅಮಾನತು ಹಿಂಪಡೆಯಲು ಒತ್ತಾಯಿಸಿದ್ದರಿಂದ ಮಂಗಳವಾರ 2 ಗಂಟೆಗೆ ರಾಜ್ಯಸಭಾ ಅಧಿವೇಶನ ಮುಂದೂಲಾಗಿದೆ..

winter session:  ರಾಜ್ಯಸಭಾ ಅಧಿವೇಶನ 2 ಗಂಟೆಗೆ ಆರಂಭ

author img

By

Published : Dec 7, 2021, 1:21 PM IST

ನವದೆಹಲಿ : ಅಮಾನತುಗೊಂಡ ಸಂಸತ್​ ಸದಸ್ಯರ ವಿಚಾರ ಮಂಗಳವಾರವೂ ಕೂಡ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ. ಪ್ರತಿಪಕ್ಷಗಳ ಸದಸ್ಯರು ಸಂಸದರ ಅಮಾನತು ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಲು ಯತ್ನಿಸಿದ ವೇಳೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ್ದಾರೆ.

ಪಟ್ಟಿ ಮಾಡಲಾದ ಸಮಸ್ಯೆಗಳನ್ನು ಮಂಡಿಸಲು ರಾಜ್ಯಸಭಾ ಸಂಸದರು ಮುಂದಾಗುತ್ತಿದ್ದಂತೆ ರಾಜ್ಯಸಭೆಯ ನಿಯಮ 267ರ ಅಡಿಯಲ್ಲಿ ತನಗೆ ನೋಟಿಸ್ ಬಂದಿದೆ. ಪಟ್ಟಿ ಮಾಡಲಾದ ಸಮಸ್ಯೆಗಳನ್ನು ತೆಗೆದುಕೊಳ್ಳಲು ದಿನದ ವ್ಯವಹಾರವನ್ನು ನಿಗದಿಪಡಿಸುವಂತೆ ಸೂಚನೆ ನೀಡಿದರು.

ಈ ವಿಚಾರವನ್ನು ಪ್ರಸ್ತಾಪಿಸಲು ನಾನು ನಿಮಗೆ ಅನುಮತಿ ನೀಡಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ ವೆಂಕಯ್ಯನಾಯ್ಡು, ಸದನದ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಿದ್ದಾರೆ.

ಸೋಮವಾರವೂ ಕಾಂಗ್ರೆಸ್, ಎಡಪಕ್ಷಗಳು ಮತ್ತು ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ತಮ್ಮ 12 ಸಹೋದ್ಯೋಗಿಗಳ ಅಮಾನತು ಹಿಂಪಡೆಯಲು ಒತ್ತಾಯಿಸಿದ್ದರಿಂದ ರಾಜ್ಯಸಭೆಯು ಹಲವು ಬಾರಿ ಮುಂದೂಲ್ಪಟ್ಟಿತ್ತು.

ಇದನ್ನೂ ಓದಿ: ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ: ಅಧಿವೇಶನಕ್ಕೆ ಗೈರಾಗುವ ಸಂಸದರಿಗೆ ಮೋದಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.