ಹೈದರಾಬಾದ್(ತೆಲಂಗಾಣ): ಸೈದಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಹೊತ್ತಿದ್ದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ರೈಲು ಹಳಿಗೆ ಬಿದ್ದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೈ ಮೇಲಿನ ಹಚ್ಚೆಯ ಆಧಾರದ ಮೇಲೆ ರಾಜುವನ್ನು ಗುರ್ತಿಸಲಾಗಿದೆ. ಸೆಪ್ಟೆಂಬರ್ 9ರಂದು ಹೈದರಾಬಾದ್ನ ಸೈದಾಬಾದ್ನಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಕೊಲೆಗೈದು ಆರೋಪಿ ಕಾಣೆಯಾಗಿದ್ದ.
ಪೊಲೀಸರು ಆತನಿಗಾಗಿ ಸಾಕಷ್ಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಉಪ್ಪಲ್ ಪ್ರದೇಶದಲ್ಲಿ ನಿನ್ನೆ ಸುತ್ತಾಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು.
ಆರೋಪಿಯ ಆತ್ಮಹತ್ಯೆ ದೃಢಪಡಿಸಿದ ಕೆಟಿಆರ್ ಮತ್ತು ಪೊಲೀಸರು
ಆರೋಪಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ತೆಲಂಗಾಣ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ. ಅತ್ಯಾಚಾರ ಆರೋಪಿಯ ಮೃತದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ದೇಹದ ಮೇಲಿನ ಗುರುತುಗಳ ಮೂಲಕ ಆತನ ಗುರುತು ಪತ್ತೆ ಹಚ್ಚಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ತೆಲಂಗಾಣ ಸಚಿವರಾದ ಕೆಟಿಆರ್ ಟ್ವೀಟ್ ಮಾಡಿದ್ದು, ಘಾನ್ಪುರ ರೈಲ್ವೆ ಟ್ರಾಕ್ ಬಳಿ ಆರೋಪಿಯ ಶವ ಪತ್ತೆಯಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
-
Just been informed by @TelanganaDGP Garu that the beast who raped the child has been traced & found dead on a railway track at station Ghanpur#JusticeForChaithra https://t.co/TCx2BHvVhG
— KTR (@KTRTRS) September 16, 2021 " class="align-text-top noRightClick twitterSection" data="
">Just been informed by @TelanganaDGP Garu that the beast who raped the child has been traced & found dead on a railway track at station Ghanpur#JusticeForChaithra https://t.co/TCx2BHvVhG
— KTR (@KTRTRS) September 16, 2021Just been informed by @TelanganaDGP Garu that the beast who raped the child has been traced & found dead on a railway track at station Ghanpur#JusticeForChaithra https://t.co/TCx2BHvVhG
— KTR (@KTRTRS) September 16, 2021
ಇದನ್ನೂ ಓದಿ: ವಾಕಿಂಗ್ಗೆ ಹೋಗಿದ್ದ ಯುವತಿ ಅಪಹರಣ..ಆರೋಪಿಗಳಿಗಾಗಿ ಖಾಕಿ ಬಲೆ