ETV Bharat / bharat

SCO ಸಮಾವೇಶ: ಭದ್ರತಾ ಸವಾಲುಗಳ ಬಗ್ಗೆ ದನಿ ಎತ್ತಿದ ರಾಜನಾಥ್ ಸಿಂಗ್ - Shanghai Cooperation Organisation 2021

ಶಾಂಘೈ ಸಹಕಾರ ಸಮಾವೇಶದಲ್ಲಿ ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸಂಜೆ ತಜಕಿಸ್ತಾನದ ದುಶಾಂಬೆ ತೆರಳಿದ್ದಾರೆ.

Rajnath Singh
ರಾಜನಾಥ್ ಸಿಂಗ್
author img

By

Published : Jul 28, 2021, 6:41 AM IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುಶಾಂಬೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಮಾವೇಶದಲ್ಲಿ ಭಾಗಿಯಾಗಿದ್ದು, ಭಯೋತ್ಪಾದನೆ ಮತ್ತು ಇತರ ಭದ್ರತಾ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಸಹ ಎಸ್‌ಸಿಒ ಸಮಾವೇಶದಲ್ಲಿ ಭಾಗವಹಿಸಿದ್ದರು. ಆದರೆ, ಈ ಸಂದರ್ಭದಲ್ಲಿ ಸಿಂಗ್ ಮತ್ತು ಚೀನಾದ ನಾಯಕರ ನಡುವೆ ಯಾವುದೇ ದ್ವಿಪಕ್ಷೀಯ ಸಭೆ ನಿಗದಿಯಾಗಿಲ್ಲ. ಸಮಾವೇಶದ ಹೊರತಾಗಿ ಸಿಂಗ್ ಮತ್ತು ವೀ ನಡುವೆ ಸಭೆ ನಡೆಯುವ ಸಾಧ್ಯತೆಗಳೂ ಇವೆ ಎಂದು ಕೆಲ ಮೂಲಗಳು ತಿಳಿಸಿದೆ.

ಎಸ್‌ಸಿಒ ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಿಂಗ್ ಮಂಗಳವಾರ ಸಂಜೆ ತಜಕಿಸ್ತಾನದ ದುಶಾಂಬೆ ತೆರಳಿದ್ದಾರೆ. ಜು.29ರ ವರೆಗೆ ಸಮಾವೇಶ ನಡೆಯಲಿದ್ದು, ಭಯೋತ್ಪಾದನೆ ಮತ್ತು ಇತರ ಭದ್ರತಾ ಸವಾಲುಗಳನ್ನು ಎದುರಿಸುವ ಬಗೆಯ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.