ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿರುವ ನಳಿನಿ 5,000 ರೂ. ಗಳನ್ನು ಕೋವಿಡ್ ನಿಧಿಗೆ ನೀಡಿದ್ದಾರೆ.
ಕೊರೊನಾದ ಎರಡನೇ ಅಲೆ ತಮಿಳುನಾಡಿನಲ್ಲಿ ತೀವ್ರಗೊಂಡಿದೆ. ಕೊರೊನಾ ನಿಧಿಯಾಗಿ ದೇಣಿಗೆ ನೀಡುವಂತೆ ಸಿಎಂ ಎಂ.ಕೆ.ಸ್ಟಾಲಿನ್ ಜನರಲ್ಲಿ ಕೇಳಿದ್ದಾರೆ. ಮನವಿಯ ನಂತರ, ಜನರು ಸರ್ಕಾರಕ್ಕೆ ಹಣವನ್ನು ಒದಗಿಸುತ್ತಿದ್ದಾರೆ.
ಅಂತೆಯೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ 29 ವರ್ಷಗಳಿಗೂ ಹೆಚ್ಚು ಕಾಲ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿದ್ದ ನಳಿನಿ ಇಂದು 5000 ರೂ. ಗಳನ್ನು ಜೈಲು ಅಧೀಕ್ಷಕರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಿದ್ದಾರೆ.
ಮತ್ತೊಬ್ಬ ಅಪರಾಧಿ ರವಿಚಂದ್ರನ್ ಅವರು ಕೂಡ ರೂ. 5000 ವನ್ನು ತಮ್ಮ ವಕೀಲ ತಿರುಮುರುಗನ್ ಮೂಲಕ ಕೆಲ ದಿನಗಳ ಹಿಂದಷ್ಟೇ ನೀಡಿದ್ದರು.