ETV Bharat / bharat

ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'

ಈ ಘಟನೆ ಸಂಬಂಧ ಒಟ್ಟಾರೆ 21 ಆರೋಪಿಗಳ ಮನೆಗಳನ್ನು ಪೊಲೀಸರು ಗುರುತು ಮಾಡಿದ್ದರು. ಗುರುವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಂದಾಯ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಬುಲ್ಡೋಜರ್ ಮೂಲಕ 8 ಮನೆಗಳನ್ನು ಕೆಡವಲಾಗಿದೆ.

Ruckus in procession of Dalit in Rajgarh
ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ
author img

By

Published : May 19, 2022, 7:21 PM IST

ರಾಜಗಢ (ಮಧ್ಯಪ್ರದೇಶ): ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಮೂಲಕ ನೆಲಸಮ ಮಾಡಿದೆ. ರಾಜಗಢ ಜಿಲ್ಲೆಯ ಜಿರಾಪುರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ 21 ಆರೋಪಿಗಳ ಪೈಕಿ 8 ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಮಂಗಳವಾರ ರಾತ್ರಿ ವೇಳೆ ವಧುವಿನ ಕಡೆಯುವರು ವರನ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಡಿಜೆ ಹಾಕಲಾಗಿತ್ತು. ಆದರೆ, ಗ್ರಾಮದ ಧಾರ್ಮಿಕ ಕೇಂದ್ರವೊಂದರ ಬಳಿ ಬಂದಾಗ ಕೆಲವರು ಡಿಜೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅಲ್ಲಿನ ಧಾರ್ಮಿಕ ಕೇಂದ್ರ ದಾಟುವವರೆಗೆ ಡಿಜೆ ನಿಲ್ಲಿಸಿ, ಮುಂದೆ ಸಾಗಿದಾಗ ಮತ್ತೆ ಡಿಜೆ ಹಾಕಿಸಲಾಗಿತ್ತು. ಆದರೆ, ಮುಂದೆ ಮೆರವಣಿಗೆ ಬಂದ ಮೇಲೆ ಹಿಂದಿನಿಂದ ಕೆಲ ಕಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆಗಳ ಕೆಡವಿದ 'ಬುಲ್ಡೋಜರ್'

ಅಲ್ಲದೇ, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಹೀಗಾಗಿ ಈ ಕುರಿತು ವಧುವಿನ ತಂದೆ ದೂರು ದಾಖಲಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಈ ಘಟನೆ ಸಂಬಂಧ ಒಟ್ಟಾರೆ 21 ಆರೋಪಿಗಳ ಮನೆಗಳನ್ನು ಪೊಲೀಸರು ಗುರುತು ಮಾಡಿದ್ದರು. ಗುರುವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಂದಾಯ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಬುಲ್ಡೋಜರ್ ಮೂಲಕ 8 ಮನೆಗಳನ್ನು ಕೆಡವಲಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಜೀನ್ಸ್‌ ಪ್ಯಾಂಟ್​, ಟೀ - ಶರ್ಟ್‌ ಧರಿಸಿ ಗುಜರಾತಿ ಲೇಡಿ ಗ್ಯಾಂಗ್ ಹಲ್​ಚಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.