ಜೈಪುರ: 2019-20 ಮತ್ತು 2020-21ರಲ್ಲಿ ದೇಶದಲ್ಲಿ ಕಡಿಮೆ ಅಪಘಾತಗಳು ವರದಿಯಾಗಿರುವ ರಾಜಸ್ಥಾನ ರಾಜ್ಯಕ್ಕೆ ಭಾರತ ಸರ್ಕಾರ 'ರಸ್ತೆ ಸುರಕ್ಷತಾ ಪ್ರಶಸ್ತಿ' ನೀಡಿ ಗೌರವಿಸಿದೆ.
ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ' ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಮತ್ತು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಉಪಸ್ಥಿತರಿದ್ದರು.
ಇದನ್ನೋ ಓದಿ: 2025ರ ಒಳಗೆ ಶೇ.50 ರಷ್ಟು ರಸ್ತೆ ಅಪಘಾತ ಇಳಿಸುವ ಗುರಿ: ನಿತಿನ್ ಗಡ್ಕರಿ
2009-10 ರಿಂದ ರಾಜಸ್ಥಾನ ನಿರಂತರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದು, ಅಲ್ಲಿನ ರಸ್ತೆ ಮಾರ್ಗಗಳು, ಅಧಿಕಾರಿಗಳ ಕಾರ್ಯಕ್ಷಮತೆಗೆ ಗಡ್ಕರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾವುಗಳ ಪ್ರಮಾಣವನ್ನು 2025ರ ಒಳಗಾಗಿ ಶೇ.50 ರಷ್ಟು ಇಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು.