ETV Bharat / bharat

ಲೈಂಗಿಕ ಬಳಕೆಗಾಗಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಪಾಸಿಂಗ್​ ಅಂಕ.. ತಾಂತ್ರಿಕ ವಿವಿ ಪ್ರಾಧ್ಯಾಪಕ ಅರೆಸ್ಟ್​ - ಲೈಂಗಿಕ ಬಳಕೆ

ಲೈಂಗಿಕ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿನಿಯ ದೂರು ಹಿನ್ನೆಲೆಯಲ್ಲಿ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ (ಆರ್‌ಟಿಯು) ಪ್ರಾಧ್ಯಾಪಕ ಮತ್ತು ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

rajasthan-professor-held-for-sexual-favours-for-marks-racket
ಲೈಂಗಿಕ ಬಳಕೆಗಾಗಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಪಾಸಿಂಗ್​ ಅಂಕ: ತಾಂತ್ರಿಕ ವಿವಿ ಪ್ರಾಧ್ಯಾಪಕ ಅರೆಸ್ಟ್​
author img

By

Published : Dec 22, 2022, 6:36 PM IST

ಕೋಟಾ (ರಾಜಸ್ಥಾನ): ಉತ್ತಮ ಅಂಕ ನೀಡುವ ಆಮಿಷವೊಡ್ಡಿ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪ ಪ್ರಕರಣದಲ್ಲಿ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ (ಆರ್‌ಟಿಯು) ಸಹ ಪ್ರಾಧ್ಯಾಪಕ ಗಿರೀಶ್ ಕುಮಾರ್ ಪರ್ಮಾರ್​ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪ್ರೊಫೆಸರ್ ಪರ್ಮಾರ್ ಲೈಂಗಿಕವಾಗಿ ಬಳಕೆ ಮಾಡಿಕೊಂಡು ಅನುತ್ತೀರ್ಣವಾದ ವಿದ್ಯಾರ್ಥಿನಿಯರಿಗೆ ಪಾಸಿಂಗ್ ಅಂಕ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ನೊಂದ ವಿದ್ಯಾರ್ಥಿನಿ ಕೂಡ ಪೊಲೀಸರ ಮೊರೆ ಹೋಗಿದ್ದರು.

ಈ ಎರಡೂ ದೂರುಗಳ ಆಧಾರದ ಮೇಲೆ ಆರ್‌ಟಿಯುನ ಸಹ ಪ್ರಾಧ್ಯಾಪಕ ಗಿರೀಶ್ ಪರ್ಮಾರ್​ನನ್ನು ಬಂಧಿಸಿದ್ದೇವೆ. ಇವರು ಮೂಲತಃ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೋಟಾದ ವಸಂತ ವಿಹಾರ್ ಕಾಲೋನಿಯಲ್ಲಿ ವಾಸವಾಗಿದ್ದರು. ಈ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಎನ್ನಲಾದ ಎಂಬ ವಿದ್ಯಾರ್ಥಿಯನ್ನು ಸಹ ಬಂಧಿಸಲಾಗಿದೆ ಎಂದು ಕೋಟಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಜೈನ್ ತಿಳಿಸಿದ್ದಾರೆ.

ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಎಸ್‌ಕೆ ಸಿಂಗ್ ಸಹ ಮಾತನಾಡಿದ್ದು, ಈ ಮೊದಲು ಇಂತಹ ವಿಷಯದ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ಬಂದಿರಲಿಲ್ಲ. ನೊಂದ ವಿದ್ಯಾರ್ಥಿಗಳು ಈ ವಿಷಯವನ್ನು ನಮ್ಮ ಗಮನಕ್ಕೆ ತರಬಹುದಿತ್ತು. ಆದರೆ, ಭಯದಿಂದ ವಿದ್ಯಾರ್ಥಿಗಳು ನಮ್ಮ ಮುಂದೆ ಬರಲು ಹಿಂಜರಿದಿದ್ದಾರೆ ಎಂದು ತೋರುತ್ತದೆ. ಸದ್ಯ ಈ ಬಗ್ಗೆ ನಾವು ಸಹ ತನಿಖಾ ಸಮಿತಿಯನ್ನು ರಚಿಸಿದ್ದು, ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.

ಇದನ್ನೂ ಓದಿ: ಹೆಚ್ಚು ಅಂಕದ ಆಮಿಷವೊಡ್ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಾಧ್ಯಾಪಕ, ವಿದ್ಯಾರ್ಥಿ ವಿರುದ್ಧ ಕೇಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.