ETV Bharat / bharat

ಕಾಂಗ್ರೆಸ್​ ಶಾಸಕರ ರಾಜೀನಾಮೆ: ರಾಜಸ್ಥಾನ ಸ್ಪೀಕರ್​ಗೆ​ ಹೈಕೋರ್ಟ್​ ನೋಟಿಸ್​

ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರದಲ್ಲಿ ರಾಜಸ್ಥಾನ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ವೇಳೆ ಪೀಠವು ಸ್ಪೀಕರ್ ಮತ್ತು ಕಾರ್ಯದರ್ಶಿಗೆ ನೋಟಿಸ್​ ಜಾರಿ ಮಾಡಿದೆ

rajasthan-high-court-notice-to-speaker-cp-joshi-in-case-of-resignation-of-91-rajasthan-congress-mlas
ಕಾಂಗ್ರೆಸ್​ ಶಾಸಕರ ರಾಜಿನಾಮೆ: ರಾಜಸ್ಥಾನ ಸ್ಪೀಕರ್​ ಹೈಕೋರ್ಟ್​ ನೋಟಿಸ್​
author img

By

Published : Dec 6, 2022, 8:37 PM IST

ಜೈಪುರ(ರಾಜಸ್ಥಾನ): ಕಾಂಗ್ರೆಸ್​ ಪಕ್ಷದ 91 ಶಾಸಕರ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳದ ಕಾರಣ ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಮತ್ತು ವಿಧಾನಸಭೆಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ವಿಚಾರಣೆ ನಡೆಸಿದ ನ್ಯಾ.ಎಂಎಂ ಶ್ರೀವಾಸ್ತವ ಮತ್ತು ನ್ಯಾ.ವಿ ಕೆ ಭರ್ವಾನಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಕಳೆದ ಸೆಪ್ಟೆಂಬರ್ 25ರಂದು ಕಾಂಗ್ರೆಸ್​ನ​ 91 ಶಾಸಕರು ವಿಧಾನ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರ ಅಕ್ಟೋಬರ್ 18, 19, ನವೆಂಬರ್ 12, 21 ರಂದು ಅರ್ಜಿದಾರರು ಸ್ಪೀಕರ್‌ಗೆ ರಾಜೀನಾಮೆ ಸ್ವೀಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಆದರೂ ರಾಜೀನಾಮೆ ಬಗ್ಗೆ ಸ್ಪೀಕರ್ ಇನ್ನೂ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ.

ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದರೆ ವಿಧಾನಸಭೆಯ ನಿಯಮ 173ರ ಅಡಿಯಲ್ಲಿ ಸ್ಪೀಕರ್ ರಾಜೀನಾಮೆ ಅಂಗೀಕರಿಸದೇ ಬೇರೆ ದಾರಿಯಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರಾಜೀನಾಮೆ ಸ್ವಯಂಪ್ರೇರಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಬೇಕು ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.

ಶಾಸಕರ ರಾಜೀನಾಮೆಯಿಂದ ಸದನದಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಇದರ ಹೊರತಾಗಿಯೂ ರಾಜೀನಾಮೆ ನೀಡಿದವರು ಸಚಿವ ಸಂಪುಟ ಸೇರಿದಂತೆ ಇತರೆ ಸರ್ಕಾರಿ ಸಭೆಗಳಿಗೆ ಹಾಜರಾಗುತ್ತಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ಹೆಸರನ್ನು ಬಹಿರಂಗಪಡಿಸಬೇಕು ಮತ್ತು ಶಾಸಕರಾಗಿ ವಿಧಾನಸಭೆ ಪ್ರವೇಶಿಸದಂತೆ ತಡೆಯಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ.. 48 ಗಂಟೆಯೊಳಗೆ ಎರಡೂ ರಾಜ್ಯಗಳ ಸಿಎಂಗಳು ಸಮಸ್ಯೆ ಪರಿಹರಿಸಬೇಕು: ಶರದ್ ಪವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.