ETV Bharat / bharat

ಮಗು ಪಡೆಯಬೇಕೆಂಬ ಪತ್ನಿಯ ಇಚ್ಛೆ ಪೂರೈಸಲು ಕೈದಿಗೆ ಪೆರೋಲ್​ ನೀಡಿದ ಹೈಕೋರ್ಟ್​! - Rajasthan High Court Jodhpur Bench

ಜೈಲುಪಾಲಾಗಿದ್ದ ಪತಿಯಿಂದ ಮಗು ಪಡೆಯಬೇಕೆಂದು ಬಯಸಿದ್ದ ಮಹಿಳೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಮೊದಲು ಅರ್ಜಿ ಸಲ್ಲಿಸಿದ್ದಳು. ಆದರೆ, ಜಿಲ್ಲಾಧಿಕಾರಿಗಳ ಸಮಿತಿಯು ಮಹಿಳೆಯ ಮನವಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಳು.

ಕೈದಿ ಪತಿಗೆ ಪೆರೋಲ್​ ನೀಡಿದ ಹೈಕೋರ್ಟ್​
ಕೈದಿ ಪತಿಗೆ ಪೆರೋಲ್​ ನೀಡಿದ ಹೈಕೋರ್ಟ್​
author img

By

Published : Apr 22, 2022, 7:44 PM IST

ಜೋಧಪುರ್(ರಾಜಸ್ಥಾನ): ಗರ್ಭಿಣಿಯಾಗಬೇಕೆಂಬ ಪತ್ನಿಯ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೈದಿ ಪತಿಯೋರ್ವನಿಗೆ ರಾಜಸ್ಥಾನದ ಜೋಧಪುರ್​ ಹೈಕೋರ್ಟ್​ ಪೀಠ​​ 15 ದಿನಗಳ ಪೆರೋಲ್​ ನೀಡಿ ಆದೇಶಿಸಿದೆ. ಅಲ್ಲದೇ, ಮಹಿಳೆಯು ತಾಯಿ ಆಗುವುದರಿಂದ ವಂಚಿತಳಾಗಬಾರದು ಎಂದು ಉಚ್ಛ ನ್ಯಾಯಾಲಯ ಹೇಳಿದೆ.

ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಭಿಲ್ವಾರಾ ಜಿಲ್ಲೆಯ ನಿವಾಸಿ ನಂದಲಾಲ್‌ ಎಂಬಾತನಿಗೆ ಈ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಅಜ್ಮೇರ್​ ಜೈಲಿನಲ್ಲಿ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಪೆರೋಲ್ ಮೇಲೆ ಹೊರ ಹೋಗಲು 50 ಸಾವಿರ ರೂ. ವೈಯಕ್ತಿಕ ಬಾಂಡ್​​ ಅನ್ನು ಜೈಲಿನ ಅಧೀಕ್ಷಕರಿಗೆ ಸಲ್ಲಿಸುವಂತೆ ನ್ಯಾಯ ಪೀಠ ಸೂಚಿಸಿದೆ.

ಜೈಲುಪಾಲಾಗಿದ್ದ ಪತಿಯಿಂದ ಮಗು ಪಡೆಯಬೇಕೆಂದು ಬಯಸಿದ್ದ ಮಹಿಳೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಮೊದಲು ಅರ್ಜಿ ಸಲ್ಲಿಸಿದ್ದಳು. ಆದರೆ, ಜಿಲ್ಲಾಧಿಕಾರಿಗಳ ಸಮಿತಿಯು ಮಹಿಳೆಯ ಮನವಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಳು. ಅಂತೆಯೇ ಮಹಿಳೆಯ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಮಹಿಳೆಯು ಪತಿಯಿಲ್ಲದೆ ಮತ್ತು ಆತನಿಂದ ಮಕ್ಕಳಿಲ್ಲದೆ ವಂಚಿತಳಾಗಿ ನರಳುವ ಸ್ಥಿತಿಯಲ್ಲಿ ಬದುಕುವಂತೆ ಆಗಬಾರದು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ದೆಹಲಿ-ತಮಿಳುನಾಡಿನಲ್ಲಿ ಮತ್ತೆ ಮಾಸ್ಕ್​​ ಕಡ್ಡಾಯ: ₹500 ದಂಡ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.