ಜೈಪುರ (ರಾಜಸ್ಥಾನ): ಕಪ್ಪು ಶಿಲೀಂಧ್ರ ರೋಗ (ಮ್ಯೂಕರ್ಮೈಕೋಸಿಸ್) ಪ್ರಕರಣಗಳು ದಿನೇ ದಿನೇ ದೇಶಾದ್ಯಂತ ಹೆಚ್ಚಾಗುತ್ತಿವೆ. ರಾಜಸ್ಥಾನದಲ್ಲಿಯೂ ಈ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಈ ರೋಗವನ್ನು ಸಾಂಕ್ರಾಮಿಕವೆಂದು ಘೋಷಿಸಿದೆ.
2020ರ ರಾಜಸ್ಥಾನ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಮೂಲಕ ಕಪ್ಪು ಶಿಲೀಂಧ್ರ ಸೋಂಕು ತಡೆಯಲು ಬೇಕಾದ ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತಷ್ಟು ವೇಗವಾಗಿ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿದೆ.
ಇದನ್ನೂ ಓದಿ: ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್ಓ ಹೊಸ ನೀತಿಯ ಪೂರ್ಣ ಮಾಹಿತಿ
ಸದ್ಯಕ್ಕೆ ದೆಹಲಿಯಲ್ಲಿ 130ಕ್ಕೂ ಹೆಚ್ಚು ಮ್ಯೂಕರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಮೇ 18ರಂದು ಹರಿಯಾಣ ಸರ್ಕಾರ "ಹರಿಯಾಣ ಸಾಂಕ್ರಾಮಿಕ ರೋಗಗಳು (ಮ್ಯೂಕಾರ್ಮೈಕೋಸಿಸ್) ನಿಯಮಗಳು- 2021" ಎಂಬ ಕಾನೂನನ್ನು ರೂಪಿಸಿದೆ.
ಮೂಲಗಳ ಪ್ರಕಾರ ಕೋವಿಡ್ ಚಿಕಿತ್ಸೆಯಲ್ಲಿ ಬಳಸಲಾಗುವ ಸ್ಟಿರಾಯ್ಡ್ಗಳು ಕಪ್ಪು ಶಿಲೀಂಧ್ರ ರೋಗಕ್ಕೆ ಕಾರಣವಾಗುತ್ತವೆ. ಆದ್ದರಿಂದ ಸರ್ಕಾರಗಳು ಸ್ಟಿರಾಯ್ಡ್ ಬಳಕೆ ವಿಚಾರವಾಗಿ ಕೆಲವು ಮಾರ್ಗಸೂಚಿಗಳನ್ನು ಆಸ್ಪತ್ರೆಗಳಿಗಾಗಿ ಬಿಡುಗಡೆ ಮಾಡಿವೆ.