ರಾಮಗಢ(ರಾಜಸ್ಥಾನ): ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಅಶೋಕ್ ಗೆಹ್ಲೋಟ್ ಈ ಹಿಂದೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೇ ಕಾರಣಕ್ಕಾಗಿ ಲಕ್ಷಾಂತರ ಅನ್ನದಾತರು ಸಾಲ ಮರುಪಾವತಿ ಮಾಡದೇ ಸುಮ್ಮನಾಗಿಬಿಟ್ಟರು. ಇದೀಗ, ರೈತರ ಹಿಂದೆ ಬ್ಯಾಂಕ್ ಸಿಬ್ಬಂದಿ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದ್ದಾರೆ.
ರಾಜಸ್ಥಾನದ ರಾಮಗಢದ ಪಂಚ್ವಾರಾ ಗ್ರಾಮದಲ್ಲಿ ಬ್ಯಾಂಕ್ನಿಂದ ಕೃಷಿ ಸಾಲ ಪಡೆದುಕೊಂಡಿದ್ದ ರೈತರ ಜಮೀನನ್ನು ಬ್ಯಾಂಕ್ ಸಿಬ್ಬಂದಿ ಹರಾಜು ಹಾಕಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
-
Rajasthan | A farmer's land was auctioned yesterday in Ramgarh Pachwara village of Dausa for non-payment of the loan amount
— ANI (@ANI) January 19, 2022 " class="align-text-top noRightClick twitterSection" data="
My father had taken a loan & he is dead now. We were unable to repay it & requested bank but they denied to give any chance: Pappu Lal, farmer's son pic.twitter.com/4rdqXN8ehR
">Rajasthan | A farmer's land was auctioned yesterday in Ramgarh Pachwara village of Dausa for non-payment of the loan amount
— ANI (@ANI) January 19, 2022
My father had taken a loan & he is dead now. We were unable to repay it & requested bank but they denied to give any chance: Pappu Lal, farmer's son pic.twitter.com/4rdqXN8ehRRajasthan | A farmer's land was auctioned yesterday in Ramgarh Pachwara village of Dausa for non-payment of the loan amount
— ANI (@ANI) January 19, 2022
My father had taken a loan & he is dead now. We were unable to repay it & requested bank but they denied to give any chance: Pappu Lal, farmer's son pic.twitter.com/4rdqXN8ehR
ಇದನ್ನೂ ಓದಿರಿ: ಮೂರು ದಿನಗಳಿಂದ ಕೆಸರಿನ ಹೊಂಡದಲ್ಲಿ ಸಿಲುಕಿದ್ದ ವೃದ್ಧನ ರಕ್ಷಿಸಿದ SI.. ಮಾನವೀಯತೆಗೆ ಮೆಚ್ಚುಗೆ..
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೈತ ಪಪ್ಪು ಲಾಲ್, ಈ ಹಿಂದೆ ನನ್ನ ತಂದೆ ಬ್ಯಾಂಕ್ನಲ್ಲಿ ಸಾಲ ಮಾಡಿದ್ದರು. ಆದರೆ, ಈಗಾಗಲೇ ಅವರು ತೀರಿಕೊಂಡಿದ್ದಾರೆ. ಅಸಲು ಮತ್ತು ಬಡ್ಡಿ ಸೇರಿ ಹೆಚ್ಚಿನ ಹಣವಾಗಿರುವ ಕಾರಣ ನಮ್ಮಿಂದ ಪಾವತಿಸಲು ಇದೀಗ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗೆ ಬ್ಯಾಂಕ್ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಕೆಲ ವರ್ಷಗಳ ಕಾಲ ಸಮಯವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳದೇ ಜಮೀನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ 2019ರ ವಿಧಾಸನಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷಿ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದು, ರೈತರ ಸಾಲ ಮನ್ನಾ ಆಗಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ವಾಗ್ದಾಳಿ ಸಹ ನಡೆಸಿತ್ತು.