ETV Bharat / bharat

'ಅಗೌರವದ ಸಚಿವ ಸ್ಥಾನದಿಂದ ನನ್ನ ಮುಕ್ತಗೊಳಿಸಿ': ರಾಜಸ್ಥಾನ ಕ್ರೀಡಾ ಸಚಿವರ ಬಹಿರಂಗ ಅಸಮಾಧಾನ - ಅಶೋಕ್ ಗೆಹ್ಲೋಟ್

'ನನ್ನ ಇಲಾಖೆಯ ಉಸ್ತುವಾರಿಯನ್ನು ಸಿಎಂ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಂಕಾ ಜೀ ಅವರಿಗೆ ನೀಡಿ. ಹೇಗೂ ಅವರೇ ಎಲ್ಲಾ ಇಲಾಖೆಗಳನ್ನು ಹೊಂದಿದ್ದಾರೆ. ಅವರು ಎಲ್ಲಾ ಇಲಾಖೆಗಳ ಸಚಿವರು ಕೂಡಾ' ಎಂದು ಕ್ರೀಡಾ ಸಚಿವ ಅಶೋಕ್ ಚಂದನ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಶೋಕ್ ಚಂದನ
ಅಶೋಕ್ ಚಂದನ
author img

By

Published : May 27, 2022, 9:35 AM IST

Updated : May 27, 2022, 10:59 AM IST

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪ್ರಧಾನ ಕಾರ್ಯದರ್ಶಿ ಕುಲದೀಪ್​ ರಂಕಾ ಕಾರ್ಯವೈಖರಿಯ ಬಗ್ಗೆ ಕ್ರೀಡಾ ಸಚಿವ ಅಶೋಕ್ ಚಂದನ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಅಗೌರವದ ಸಚಿವ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್​ ಮಾಡಿರುವ ಅಶೋಕ್ ಚಂದನ, 'ಗೌರವಾನ್ವಿತ ಮುಖ್ಯಮಂತ್ರಿಗಳು ನನ್ನನ್ನು ಈ ಅಗೌರವದ ಸಚಿವ ಸ್ಥಾನದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡುತ್ತಿದ್ದೇನೆ. ನನ್ನ ಇಲಾಖೆಯ ಉಸ್ತುವಾರಿಯನ್ನು ಕುಲದೀಪ್ ರಂಕಾ ಜೀಗೆ ನೀಡಿ. ಹೇಗೂ ಅವರೇ ಎಲ್ಲಾ ಇಲಾಖೆಗಳನ್ನು ಹೊಂದಿದ್ದಾರೆ. ಅವರು ಎಲ್ಲಾ ಇಲಾಖೆಗಳ ಸಚಿವರು ಕೂಡಾ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • माननीय मुख्यमंत्री जी मेरा आपसे व्यक्तिगत अनुरोध है की मुझे इस ज़लालत भरे मंत्री पद से मुक्त कर मेरे सभी विभागों का चार्ज श्री कुलदीप रांका जी को दे दिया जाए, क्योंकि वैसे भी वो ही सभी विभागों के मंत्री है।
    धन्यवाद

    — Ashok Chandna (@AshokChandnaINC) May 26, 2022 " class="align-text-top noRightClick twitterSection" data=" ">

ರಾಜ್ಯಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದ್ದು, ಪಕ್ಷದೊಳಗಿನ ಅಸಮಾಧಾನ ಹೊರಬಿದ್ದಿದೆ. ಕಳೆದ ಒಂದು ವಾರದ ಹಿಂದಷ್ಟೇ ಡುಂಗರ್‌ಪುರದ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ, ತಮ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಗೆಹ್ಲೋಟ್​ಗೆ ರಾಜೀನಾಮೆ ಕಳುಹಿಸಿದ್ದರು.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪ್ರತಿಕ್ರಿಯೆ: 'ಅವರು ತುಂಬಾ ಕೆಲಸದ ಒತ್ತಡದಲ್ಲಿರಬಹುದು. ಮಾನಸಿಕ ಉದ್ವೇಗಕ್ಕೂ ಒಳಗಾಗಿರಬಹುದು. ನಾವು ಇದನ್ನೆಲ್ಲಾ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಾರದು' ಎಂದು ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ನಾಯಕರು ಚಂದನ ಅವರ ಟ್ವೀಟ್​ ಅನ್ನೇ ಪ್ರಬಲ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಮೇಲೆ ಸಚಿವರು ಮತ್ತು ಶಾಸಕರಿಗೆ ವಿಶ್ವಾಸವಿಲ್ಲ ಎಂದು ಬಿಜೆಪಿ ಶಾಸಕ ವಾಸುದೇವ್ ದೇವ್ನಾನಿ ಹೇಳಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್‌ ಪೂನಿಯಾ ಟ್ವೀಟ್‌ ಮಾಡಿ, 'ಕಾಂಗ್ರೆಸ್​ ಹಡಗು ಮುಳುಗುತ್ತಿದೆ, ಈಗಿನಿಂದಲೇ 2023ರ ಟ್ರೆಂಡ್‌ ಆರಂಭವಾಗಿದೆ' ಎಂದಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರಗೆ ಕೈತಪ್ಪಿದ ಎಂಎಲ್​​ಸಿ ಟಿಕೆಟ್; ಈಡೇರದ ಸಚಿವ ಸ್ಥಾನದ ಕನಸು

Last Updated : May 27, 2022, 10:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.