ಹೈದರಾಬಾದ್: ಚಲಿಸುವ ರೈಲನ್ನು ಹತ್ತಲು ಯತ್ನಿಸುತ್ತಿದ್ದಾಗ ರೈಲ್ವೇ ಹಳಿ ಮೇಲೆ ಬಿದ್ದ ಬಾಲಕಿಯನ್ನು ಸಮಯಕ್ಕೆ ಸರಿಯಾಗಿ ಅಲ್ಲೇ ಇದ್ದ ಮಹಿಳಾ ರೈಲ್ವೇ ಪೊಲೀಸ್ ಕಾಪಾಡಿದ್ದಾರೆ.
ಬೇಗಂಪೆಟ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಸಿದ್ಧಮ್‌ಗೆ ಹೋಗುತ್ತಿದ್ದ ರೈಲು ಬೇಗಂಪೆಟ್ ರೈಲ್ವೆ ನಿಲ್ದಾಣದಲ್ಲಿ ಬಂದು ನಿಂತಿದೆ. ನಾಲ್ಕು ವರ್ಷದ ಹುಡುಗಿ ಶಬೀನಾ ಬೇಗಂ ತನ್ನ ಪೋಷಕರೊಂದಿಗೆ ರೈಲು ಹತ್ತುತ್ತಿದ್ದಾಗ ಪ್ಲಾಟ್‌ಫಾರ್ಮ್ ನಡುವೆ ಜಾರಿ ರೈಲಿನಡಿ ಸಿಲುಕಿಕೊಂಡಿದ್ದಾಳೆ. ಇದನ್ನು ನೋಡಿದ ಮಹಿಳಾ ಕಾನ್ಸ್ಟೇಬಲ್ ಸೀಮಾ, ತಕ್ಷಣವೇ ಹುಡುಗಿಯನ್ನು ಮೇಲಕ್ಕೆ ಎಳೆದು ಕಾಪಾಡಿದ್ದಾರೆ.
ಘಟನೆಯ ವಿಡಿಯೋವನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಮಹಿಳಾ ಕಾನ್‌ಸ್ಟೆಬಲ್‌ಗೆ ರೈಲ್ವೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮಕ್ಕಳೊಂದಿಗೆ ರೈಲುಗಳಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಲು ಈ ಮುಖಾಂತರ ಸೂಚಿಸಲಾಗಿದೆ.