ಮುಂಬೈ (ಮಹಾರಾಷ್ಟ್ರ): ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ಪ್ಲಾಟ್ಫಾರ್ಮ್ನಿಂದ ಹಳಿ ಮೇಲೆ ಬಿದ್ದಿರುವ ಮಗುವೊಂದನ್ನ ರೈಲ್ವೆ ಸಿಬ್ಬಂದಿಯೊಬ್ಬ ಕಾಪಾಡಿದ್ದಾನೆ. ಇನ್ನು ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಯಿ ಕುರುಡಿಯಾಗಿದ್ದು, ಆಕೆಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ವಂಗಾನಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಾಯಿ ಜತೆ ತೆರಳುತ್ತಿದ್ದ ಮಗುವೊಂದು ಪ್ಲಾಟ್ಫಾರ್ಮ್ನಿಂದ ರೈಲ್ವೆ ಹಳಿ ಮೇಲೆ ಬಿದ್ದಿದೆ. ಈ ವೇಳೆ ಅಸಹಾಯಕಳಾದ ತಾಯಿ, ಕಣ್ಣೀರು ಹಾಕಲು ಶುರು ಮಾಡಿದ್ದಾಳೆ.
ಇದನ್ನೂ ಓದಿ: ಇಂಜೆಕ್ಷನ್ ಅಲ್ಲ ಅಲ್ಕೋಹಾಲ್ನಿಂದ ಹುಷಾರು.. ಮಹಿಳೆ ಮಾತಲ್ಲೇ ಕೇಳಿ ಲಾಭ-ನಷ್ಟದ ಲೆಕ್ಕ
ಕೆಲವೇ ಕ್ಷಣಗಳಲ್ಲಿ ರೈಲು ಮಗುವಿನ ಮೇಲೆ ಹಾಯ್ದುಹೋಗಬೇಕು ಎನ್ನುವಷ್ಟರಲ್ಲಿ ಮುಂಬೈ ವಿಭಾಗದ ರೈಲ್ವೆ ಸಿಬ್ಬಂದಿ(ಪಾಯಿಂಟ್ಮ್ಯಾನ್) ಅದರ ರಕ್ಷಣೆ ಮಾಡಿ, ಮಗುವಿನ ಪಾಲಿಗೆ ದೇವರಾಗಿದ್ದಾನೆ.ಈ ವೇಳೆ ಕೊದಲೆಳೆ ಅಂತರದಲ್ಲಿ ರೈಲ್ವೆ ಸಿಬ್ಬಂದಿ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಮೈಜುಮ್ಮೆನುಸುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.