ರಾಂಚಿ (ಜಾರ್ಖಂಡ್): ಚಲಿಸುತ್ತಿದ್ದ ರೈಲನ್ನು ಹತ್ತಲು - ಇಳಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಎಷ್ಟೋ ಮಂದಿಯನ್ನು ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಸಿಬ್ಬಂದಿ ಅಥವಾ ಅಲ್ಲಿದ್ದ ಜನರು ಕಾಪಾಡಿರುವ ಅನೇಕ ಘಟನೆಗಳು ನಡೆದಿವೆ. ಆದರೆ, ಪ್ರತಿಬಾರಿಯೂ ಆಪತ್ಬಾಂಧವನಂತೆ ನಮ್ಮೊಂದಿಗೆ ಯಾರೂ ಇರುವುದಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಜಾರ್ಖಂಡ್ನ ರಾಂಚಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ ರೈಲು ಇನ್ನೇನು ನಿಲ್ಲುವುದರಲ್ಲಿತ್ತು. ಆದರೆ ರೈಲಿನೊಳಗಿದ್ದ ಬಾತ್ ರೂಂಗೆ ಹೋಗಿದ್ದ ರೈಲ್ವೆ ಕಾರ್ಮಿಕರೊಬ್ಬರು ಅವಸರದಿಂದ ರೈಲು ನಿಲ್ಲುವ ಮುನ್ನವೇ ಇಳಿಯಲು ಹೋಗಿ ಪ್ರಾಣ ಕಳೆದು ಕೊಂಡಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ಸಿಲುಕಿದ ವ್ಯಕ್ತಿ - ದೇವರಂತೆ ಬಂದ ಆರ್ಪಿಎಫ್ ಸಿಬ್ಬಂದಿ
ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಅಧಿಕಾರಿಗಳು ಮತ್ತು ಆರ್ಪಿಎಫ್ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.