ಕಚ್(ಗುಜರಾತ್): ಕಚ್‌ನ ಮುಂಡ್ರಾದಲ್ಲಿರುವ ಅದಾನಿ ಖಾಸಗಿ ಬಂದರಿನಲ್ಲಿ ಕಾರ್ಯಾಚರಣೆಯ ವೇಳೆ ರೈಲು ಇಂಜಿನ್‌ನ ಒಂದು ಭಾಗವು ಮೇಲಿಂದ ಕೆಳಕ್ಕೆ ಉರುಳಿಬಿದ್ದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಅವಘಡದ ಸಂದರ್ಭ ಸುಮಾರು 10-15 ಜನರು ಸ್ಥಳದಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ಅದಾನಿ ಬಂದರು ಮತ್ತು ಎಸ್‌ಇಝಡ್ ವಕ್ತಾರ ಜೈದೀಪ್ ಷಾ ತಿಳಿಸಿದ್ದಾರೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದೆ.