ETV Bharat / bharat

"ಸತ್ಯ, ಅಹಿಂಸೆಗೆ ಜಯ": ಮಾನಹಾನಿ ಪ್ರಕರಣ ತೀರ್ಪು ಬಳಿಕ ರಾಹುಲ್​ ಗಾಂಧಿ ಮಾರ್ಮಿಕ ಟ್ವೀಟ್​! - criminal defamation case

ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಜಾಮೀನು ಪಡೆದ ಬಳಿಕ ರಾಹುಲ್​ ಗಾಂಧಿ ಮಾರ್ಮಿಕ ಟ್ವೀಟ್​ ಮಾಡಿದ್ದಾರೆ. ಕಾಂಗ್ರೆಸ್​ ನಾಯಕರು ಬೆಂಬಲಿಸಿದ್ದಾರೆ.

ರಾಹುಲ್​ ಗಾಂಧಿ ಮಾರ್ಮಿಕ ಟ್ವೀಟ್​
ರಾಹುಲ್​ ಗಾಂಧಿ ಮಾರ್ಮಿಕ ಟ್ವೀಟ್​
author img

By

Published : Mar 23, 2023, 1:15 PM IST

ನವದೆಹಲಿ: 2019 ರ ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ಜಾಮೀನು ಪಡೆದ ರಾಹುಲ್​ ಗಾಂಧಿ, "ಇದು ಸತ್ಯ ಮತ್ತು ಧರ್ಮಕ್ಕಾದ ಜಯ" ಎಂದು ಬಣ್ಣಿಸಿದ್ದಾರೆ. ರಾಹುಲ್​ ವಿರುದ್ಧ ಕೇಸ್​ ದಾಖಲಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕೋರ್ಟ್​ ತೀರ್ಪು ಸ್ವಾಗತಿಸಿದ್ದರೆ, ಕಾಂಗ್ರೆಸ್​ ನಾಯಕರು ರಾಹುಲ್ ಬೆನ್ನಿಗೆ ನಿಂತಿದ್ದಾರೆ.

ಸೂರತ್​ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಪ್ರಕರಣದ ತೀರ್ಪು ಹೊರಬಿದ್ದಿದ್ದು, ದೋಷಿ ಎಂದು ಪರಿಗಣಿತವಾಗಿದ್ದ ರಾಹುಲ್​ ಅವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಯಿತು. ಬಳಿಕ ಕಾಂಗ್ರೆಸ್​ ನಾಯಕನ ಮನವಿಯ ಮೇರೆಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಗಡುವು ಕೂಡ ನೀಡಿದೆ.

  • मेरा धर्म सत्य और अहिंसा पर आधारित है। सत्य मेरा भगवान है, अहिंसा उसे पाने का साधन।

    - महात्मा गांधी

    — Rahul Gandhi (@RahulGandhi) March 23, 2023 " class="align-text-top noRightClick twitterSection" data=" ">

ಮಹಾತ್ಮ ಗಾಂಧಿ ಹೇಳಿಕೆ ಟ್ವೀಟ್​: ಪ್ರಕರಣದ ತೀರ್ಪು ಪ್ರಕಟವಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೇಳಿಕೆಯಾದ "ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ. ಸತ್ಯವೇ ನನ್ನ ದೇವರು, ಅಹಿಂಸೆಯೇ ಸತ್ಯವನ್ನು ಪಡೆಯುವ ಸಾಧನ ಎಂದು ಟ್ವೀಟಿಸಿದ್ದಾರೆ. ಅಂದರೆ, ಸತ್ಯ ಮತ್ತು ಅಹಿಂಸೆಯಿಂದ ಮಾತ್ರ ಎಲ್ಲವನ್ನು ಜಯಿಸಲು ಸಾಧ್ಯ ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕೋರ್ಟ್​ ತೀರ್ಪಿಗೆ ಅರ್ಜಿದಾರರಿಂದ ಸ್ವಾಗತ: ರಾಹುಲ್​ ಗಾಂಧಿ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ದೂರು ದಾಖಲಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ರಾಹುಲ್​ ಅವರು ನೀಡಿದ ಹೇಳಿಕೆ ಅವರು ನಿಂದಿಸಿದ ಹೆಸರಿನವರ ಮಾನಹಾನಿ ಮಾಡಿತ್ತು. ಹೀಗಾಗಿ ಅವರ ವಿರುದ್ಧ ಕೇಸ್​ ದಾಖಲಿಸಿದ್ದೆ. ಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದರು.

30 ದಿನ ಮಾತ್ರ ಜಾಮೀನು: ರಾಹುಲ್ ಗಾಂಧಿ ಅವರನ್ನು ಐಪಿಸಿ ಸೆಕ್ಷನ್​ 499 ಮತ್ತು 500 ರ ನಿಯಮದಡಿ ದೋಷಿ ಎಂದು ಕೋರ್ಟ್​ ತೀರ್ಪು ನೀಡಿದೆ. ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲಾಗಿದೆ. ಇದರ ವಿರುದ್ಧ ರಾಹುಲ್​ ಅವರು ಮೇಲ್ಮನವಿ ಸಲ್ಲಿಸಲು 30 ದಿನಗಳ ಗಡುವು ನೀಡಲಾಗಿದೆ. ಆ ದಿನಗಳಿಗೆ ಮಾತ್ರ ಜಾಮೀನು ಮಂಜೂರಾಗಿದೆ. ಅಲ್ಲಿಯವರೆಗೆ ಕೋರ್ಟ್​ ನೀಡಿದ ಶಿಕ್ಷೆ ಅಮಾನತಿನಲ್ಲಿರುತ್ತದೆ ಎಂದು ಅರ್ಜಿದಾರ ಪೂರ್ಣೇಶ್ ಮೋದಿ ಪರ ವಕೀಲರ ಕೇತನ್ ರೇಶಮವಾಲಾ ಅವರು ತಿಳಿಸಿದರು.

ಕಾಂಗ್ರೆಸ್​ ನಾಯಕರ ಬೆಂಬಲ: ಇತ್ತ, ತಮ್ಮ ನಾಯಕ ರಾಹುಲ್​ ಗಾಂಧಿ ಅವರಿಗೆ ಪಕ್ಷದ ಮುಖಂಡರು ಬೆಂಬಲ ನೀಡಿದ್ದಾರೆ. "ರಾಹುಲ್​ಗೆ ಜಾಮೀನು ಮಂಜೂರಾಗಿದೆ. ನಮಗೆ ಕಾನೂನು, ನ್ಯಾಯಾಂಗದಲ್ಲಿ ನಂಬಿಕೆ ಇದೆ. ಕಾನೂನು ಪ್ರಕಾರವೇ ಇದರ ವಿರುದ್ಧ ಹೋರಾಡುತ್ತೇವೆ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಹುಲ್​ ಗಾಂಧಿ ಧೈರ್ಯಶಾಲಿ. ಸರ್ಕಾರದ ವಿರುದ್ಧ ಅವರು ಏಕಾಂಗಿಯಾಗಿ ಹೋರಾಡಬಲ್ಲರು. ನ್ಯಾಯಾಂಗ, ಚುನಾವಣಾ ಆಯೋಗ, ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಂಡು ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಇದರ ವಿರುದ್ಧ ಹೋರಾಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದರು.

ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತಿದೆ. ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ವಿಪಕ್ಷ ನಾಯಕರ ವಿರುದ್ಧ ಇಂತಹ ಕ್ರಮಗಳು ನಡೆಯುತ್ತಿವೆ ಎಂದು ರಾಹುಲ್ ಗಾಂಧಿಗೆ ಸೂರತ್ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಕುರಿತು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ, ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.