ETV Bharat / bharat

ಮೋದಿ ಉಪನಾಮ ಪ್ರಕರಣ: ಏ.12 ರಂದು ಪಾಟ್ನಾ ಕೋರ್ಟ್​ಗೆ ಹಾಜರಾಗಲಿರುವ ರಾಹುಲ್ ಗಾಂಧಿ - ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ

ಮೋದಿ ಉಪನಾಮ ಪ್ರಕರಣ.. ರಾಹುಲ್ ವಿರುದ್ಧ ಪಾಟ್ನಾ ಹಾಗೂ ಸೂರತ್‌ನಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ರಾಹುಲ್ ಗಾಂಧಿ ಏಪ್ರಿಲ್ 12 ರಂದು ಪಾಟ್ನಾ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

Rahul Gandhi
ರಾಹುಲ್ ಗಾಂಧಿ
author img

By

Published : Mar 25, 2023, 10:34 AM IST

ಪಾಟ್ನಾ(ಬಿಹಾರ): ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಬೆನ್ನಲ್ಲೇ ಶುಕ್ರವಾರ (ಮಾ.24) ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಏಪ್ರಿಲ್ 12 ರಂದು ಪಾಟ್ನಾ ಹೈಕೋರ್ಟ್‌ಗೆ ಹಾಜರಾಗಬೇಕಾಗಿದೆ.

Sushil Modi
ಸುಶೀಲ್ ಕುಮಾರ್ ಮೋದಿ

ವಿವಾದಾತ್ಮಕ ಹೇಳಿಕೆಗಳ ನಂತರ 2019ರಲ್ಲಿ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಸೂರತ್‌ನಲ್ಲಿ ದೂರು ದಾಖಲಿಸಿದ್ದರು. ಅದೇ ವರ್ಷ ಸುಶೀಲ್ ಮೋದಿ ಪಾಟ್ನಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಇದೀಗ ರಾಹುಲ್ ಗಾಂಧಿ ಅವರಿಗೆ ಏಪ್ರಿಲ್ 12 ರಂದು ಪಾಟ್ನಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಮತ್ತು ಅವರ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಕೇಳಲಾಗಿದೆ. ಪಾಟ್ನಾದಲ್ಲಿ ನಡೆದ ಕೊನೆಯ ವಿಚಾರಣೆಯಲ್ಲಿ ರಾಹುಲ್‌ಗೆ ಜಾಮೀನು ಸಿಕ್ಕಿತ್ತು.

ಇದನ್ನೂ ಓದಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

ರಾಹುಲ್ ಕಾನೂನಿಗಿಂತ ಮೇಲಲ್ಲ: ಈ ನಡುವೆ ಕಾಂಗ್ರೆಸ್ ನಾಯಕರ ಟೀಕೆಗೆ ಸುಶೀಲ್ ಮೋದಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿರುವುದು ಸತ್ಯವನ್ನು ಮಾತನಾಡಿದ್ದಕ್ಕಾಗಿ ಅಲ್ಲ, ಆದರೆ ಮೋದಿ ಉಪನಾಮದಿಂದ ಲಕ್ಷಾಂತರ ಹಿಂದುಳಿದ ಜನರನ್ನು ಅವಮಾನಿಸಿದ್ದಕ್ಕಾಗಿ" ಎಂದು ಪ್ರತಿಪಾದಿಸಿದ್ದಾರೆ.

"ಪ್ರತಿಕೂಲ ನಿರ್ಧಾರಗಳು ಬಂದಾಗ ಕಾಂಗ್ರೆಸ್​​ ನ್ಯಾಯಾಂಗ, ಸರ್ಕಾರ ಮತ್ತು ಮಾಧ್ಯಮಗಳತ್ತ ಬೆರಳು ತೋರಿಸುತ್ತದೆ ಎಂದು ಸುಶೀಲ್ ಮೋದಿ ದೂರಿದರು. ರಾಹುಲ್ ಗಾಂಧಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುವ ಮೂಲಕ ನ್ಯಾಯಾಂಗಕ್ಕೆ ಗೌರವ ನೀಡಬೇಕು. ರಾಹುಲ್ ಗಾಂಧಿಗಿಂತ ಮೊದಲು ಲಾಲು ಪ್ರಸಾದ್​ ಯಾದವ್ ಮತ್ತು ಜಯಲಲಿತಾ ಸೇರಿದಂತೆ 200ಕ್ಕೂ ಹೆಚ್ಚು ಜನರು ಒಂದಲ್ಲ ಒಂದು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಇದು ಹೊಸ ವಿಷಯವೂ ಅಲ್ಲ ಅಥವಾ ರಾಹುಲ್ ಗಾಂಧಿ ಕಾನೂನಿಗಿಂತ ಮೇಲಿರುವವರೂ ಅಲ್ಲ" ಎಂದಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಸುಶೀಲ್ ಮೋದಿ, "ಸತ್ಯದ ಪರವಾಗಿ ನಿಂತಿರುವವರ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಸತ್ಯದ ಕತ್ತು ಹಿಸುಕುವ ರಾಜಕೀಯ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹಿಂದುಳಿದ ಜಾತಿಯವರನ್ನು ಕಳ್ಳರು ಎಂದು ಕರೆಯಬಹುದೇ?. ಹಿಂದುಳಿದ ವರ್ಗಗಳ ಜನರಿಗೆ ಉನ್ನತ ಹುದ್ದೆಗೆ ಹೋಗುವ ಹಕ್ಕನ್ನು ಸಂವಿಧಾನ ನೀಡಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿ ಮೋದಿಯವರ ಉಪನಾಮದ ಬಗ್ಗೆ ಟೀಕೆ ಮಾಡಿ ಕ್ಷಮೆಯನ್ನೂ ಕೇಳದಿರುವುದು ರಾಹುಲ್ ಗಾಂಧಿಯವರ ದುರಹಂಕಾರದ ಪರಮಾವಧಿ. ಈ ಧೋರಣೆಗಾಗಿ ಅವರಿಗೆ ಶಿಕ್ಷೆಯಾಗಿದೆ. ಹಿಂದುಳಿದ ಜಾತಿಯ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರ ಜಾತಿಯ ಜನರನ್ನೆಲ್ಲ ಕಳ್ಳರು ಎಂದು ಕರೆದು ಅವಮಾನಿಸಲಾಗಿದೆ" ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ.

ದೇಶದ ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ದೇಶದಲ್ಲಿ ಸರ್ವಾಧಿಕಾರ ಬಂದಿದೆ ಎಂದು ಅವರು (ಕಾಂಗ್ರೆಸ್) ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವವರು ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೆವು ಎಂದು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಎಂದು ಸುಶೀಲ್ ಕುಟುಕಿದರು. ಇನ್ನು ರಾಹುಲ್ ಗಾಂಧಿ ಅನರ್ಹತೆ ದೇಶದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 'ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ': ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಪ್ರತಿಪಕ್ಷದ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.