ETV Bharat / bharat

ರಾಯ್‌ಪುರಕ್ಕೆ ರಾಹುಲ್ ಗಾಂಧಿ ಭೇಟಿ: 'ರಾಜೀವ್ ಯುವ ಮಿತನ್​ ಸಮ್ಮೇಳನ'ದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಲಿರುವ ಕೈ ನಾಯಕ - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Rahul Gandhi Visit Chhattisgarh: ಈ ವರ್ಷಾಂತ್ಯದಲ್ಲಿ ಛತ್ತೀಸ್‌ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ರಾಜ್ಯ ರಾಜಧಾನಿ ರಾಯ್‌ಪುರದಲ್ಲಿ ಆಯೋಜಿಸಿರುವ 'ರಾಜೀವ್ ಯುವ ಮಿತನ್ ಸಮ್ಮೇಳನ' ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಿಎಂಒ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

rahul gandhi
ರಾಹುಲ್ ಗಾಂಧಿ
author img

By ETV Bharat Karnataka Team

Published : Sep 2, 2023, 8:46 AM IST

ರಾಯ್‌ಪುರ (ಛತ್ತೀಸ್‌ಗಢ) : ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಈಗಾಗಾಲೇ ತಯಾರಿ ಪ್ರಾರಂಭವಾಗಿದೆ. ಈ ಬೆನ್ನಲ್ಲೇ ಇಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ರಾಜ್ಯ ರಾಜಧಾನಿ ರಾಯ್‌ಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ 'ರಾಜೀವ್ ಯುವ ಮಿತನ್ ಸಮ್ಮೇಳನ'ದಲ್ಲಿ ಪಾಲ್ಗೊಂಡು ಯುವಕರೊಂದಿಗೆ ಸಂವಾದ ನಡೆಸುವ ಮೂಲಕ 48 ಲಕ್ಷ ಯುವ ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ರಾಹುಲ್ ಗಾಂಧಿ ಪ್ರವಾಸದ ಮಾಹಿತಿ : ಬೆಳಗ್ಗೆ 11:55 ಕ್ಕೆ ದೆಹಲಿಯಿಂದ ರಾಯಪುರಕ್ಕೆ ತೆರಳಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 1:45 ಕ್ಕೆ ರಾಯ್‌ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಯ್‌ಪುರದ ಮೇಳದ ಮೈದಾನದಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಐದು ಗಂಟೆಗೆ ಮತ್ತೆ ದೆಹಲಿಗೆ ತೆರಳಲಿದ್ದಾರೆ.

ಛತ್ತೀಸ್​ಗಢ ಭೇಟಿಯ ವಿಶೇಷತೆ ಏನು? : ಚುನಾವಣಾ ಆಯೋಗದ ಪ್ರಕಾರ, ಛತ್ತೀಸ್​ಗಢದಲ್ಲಿ ಸುಮಾರು 48 ಲಕ್ಷ ಯುವ ಮತದಾರರಿದ್ದಾರೆ. ಇವರ ವಯಸ್ಸು 18 ರಿಂದ 29 ವರ್ಷಗಳು. ಈ 48 ಲಕ್ಷ ಮತದಾರರಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ ಯುವಕರ ಸಂಖ್ಯೆ 4 ಲಕ್ಷದ 43 ಸಾವಿರ ಇದೆ. ಹೀಗಾಗಿ, ರಾಹುಲ್ ಮೊದಲ ಬಾರಿಗೆ ಮತದಾರರ ಮನ ಗೆಲ್ಲಲು 'ಛತ್ತೀಸ್‌ಗಢ ರಾಜೀವ್ ಯುವ ಮಿತನ್ ಕ್ಲಬ್'ನಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ : 2024ರ ಚುನಾವಣೆಗೆ ಸಮರೋಪಾದಿಯಲ್ಲಿ ಸಿದ್ಧತೆ .. INDIA ಕೂಟದಿಂದ ಇಂದು ಮಹತ್ವದ ಘೋಷಣೆಗಳ ಸಾಧ್ಯತೆ

ರಾಯ್​ಪುರದಲ್ಲಿ ನಡೆಯಲಿರುವ ಯುವ ಸಂವಾದದ ಬಳಿಕ 2000 ಶಿಕ್ಷಕರಿಗೆ ನೇಮಕಾತಿ ಪತ್ರ ನೀಡಲಾಗುವುದು. ಈ ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆ ನೇರವಾಗಿ ನೇಮಕ ಮಾಡಿಕೊಂಡಿದೆ. ಮಾರ್ಚ್ 2019 ರಲ್ಲಿ ಶಾಲಾ ಶಿಕ್ಷಣ ಇಲಾಖೆಯು 14,850 ಉಪನ್ಯಾಸಕ ಶಿಕ್ಷಕರು ಮತ್ತು ಸಹಾಯಕ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಆದೇಶ ಹೊರಡಿಸಿತ್ತು. ಈ ಪೈಕಿ 10,834 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಇಂದು 2000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು.

ಇದನ್ನೂ ಓದಿ : 'ಭಾರತದ ಭೂಮಿ ಕಿತ್ತುಕೊಂಡ ಚೀನಾ' : ಪುನರುಚ್ಚರಿಸಿದ ರಾಹುಲ್ ಗಾಂಧಿ

ಇನ್ನು ರಾಹುಲ್ ಗಾಂಧಿ ಭೇಟಿಗೂ ಮುನ್ನ ರಾಜ್ಯ ಕಾಂಗ್ರೆಸ್ ಇಂದು ಬಿಜೆಪಿ ವಿರುದ್ಧ ಸರಣಿ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ನಾಗರಿಕ ಸರಬರಾಜು ನಿಗಮ (ಸಿಎಸ್‌ಸಿ) ಹಗರಣ, ಡಿಕೆಎಸ್ ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಅಲ್ಲದೇ, ಕೇಂದ್ರ ಸರ್ಕಾರ ಅದಾನಿ ಪರವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ : ಚೀನಾ ನಮ್ಮ ಭೂಮಿ ಆಕ್ರಮಿಸಿರುವುದು ಲಡಾಖ್‌ನ ಪ್ರತಿಯೊಬ್ಬರಿಗೂ ಗೊತ್ತಿದೆ : ರಾಹುಲ್ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.