ETV Bharat / bharat

ತೈಲ ದರ ಏರಿಕೆ, ರಫೇಲ್​ ಅವ್ಯವಹಾರ ಆರೋಪ: ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ

author img

By

Published : Jul 6, 2021, 11:47 AM IST

ಸ್ನೇಹಿತರಿಗಾಗಿ ರಫೇಲ್ ಖರೀದಿ, ತೆರಿಗೆ ಸಂಗ್ರಹಕ್ಕೆ ತೈಲ ದುಬಾರಿ, ಸಾರ್ವಜನಿಕ ಸಂಸ್ಥೆಗಳು, ಬ್ಯಾಂಕುಗಳು ಕುರುಡಾಗಿವೆ. ಪ್ರಶ್ನೆ ಮಾಡಿದವರು ಜೈಲಿಗೆ. ಹಾಗಾದ್ರೆ ಮೋದಿ ಸರ್ಕಾರ______ ಏನು? ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ
ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ

ನವದೆಹಲಿ: ರಫೇಲ್​ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪ ಹಾಗೂ ನಿರಂತರ ತೈಲ ದರ ಏರಿಕೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಟ್ವಿಟ್ಟರ್​ನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಸ್ನೇಹಿತರಿಗಾಗಿ ರಫೇಲ್ ಖರೀದಿ, ತೆರಿಗೆ ಸಂಗ್ರಹಕ್ಕೆ ತೈಲ ದುಬಾರಿ, ಸಾರ್ವಜನಿಕ ಸಂಸ್ಥೆಗಳು, ಬ್ಯಾಂಕುಗಳು ಕುರುಡಾಗಿವೆ. ಪ್ರಶ್ನೆ ಮಾಡಿದವರು ಜೈಲಿಗೆ. ಹಾಗಾದ್ರೆ ಮೋದಿ ಸರ್ಕಾರ___ ಏನು? ಎಂದು ಪ್ರಶ್ನಿಸಿದ್ದಾರೆ.

ರಫೇಲ್ ಒಪ್ಪಂದವಾದ ಅಂದಿನಿಂದಲೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಗಿಬೀಳುತ್ತಲೇ ಇದೆ. ಈ ಒಪ್ಪಂದದ ಬಗ್ಗೆ ಫ್ರಾನ್ಸ್​ ತನಿಖೆಗೆ ಆದೇಶಿಸಿದೆ. ಆದರೆ, ಕೇಂದ್ರ ಸರ್ಕಾರ ಮೌನವಾಗಿರೋದು ಯಾಕೆ ಅಂತಾ ಕೇಳಿದ್ದಾರೆ.

59,000 ಕೋಟಿ ರೂ.ಮೌಲ್ಯದ ರಫೇಲ್​​ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿನ್ನೆಲೆ ತನಿಖೆಗಾಗಿ ಫ್ರಾನ್ಸ್​ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.