ETV Bharat / bharat

Watch- ಲಾಲು ಜೊತೆ ರಾಹುಲ್​ ಮಟನ್​ ರೆಸಿಪಿ.. ಅಡುಗೆ ಜೊತೆ ರಾಜಕೀಯ ಮಸಾಲೆ - ರಾಹುಲ್​ ಗಾಂಧಿ

ರಾಹುಲ್​ ಗಾಂಧಿ ಲಾಲು ಪ್ರಸಾದ್ ಯಾದವ್ ಅವರ ಭೇಟಿ ಸಂದರ್ಭದಲ್ಲಿನ ವಿಡಿಯೋವನ್ನು ಕಾಂಗ್ರೆಸ್​ ಮತ್ತು ಸತಃ ರಾಹುಲ್​ ಗಾಂಧಿ ಹಂಚಿಕೊಂಡಿದ್ದಾರೆ.

ರಾಹುಲ್​ ಗಾಂಧಿ ಲಾಲು ಪ್ರಸಾದ್ ಯಾದವ್
ರಾಹುಲ್​ ಗಾಂಧಿ ಲಾಲು ಪ್ರಸಾದ್ ಯಾದವ್
author img

By ETV Bharat Karnataka Team

Published : Sep 3, 2023, 2:54 PM IST

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವನ್ನು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದ ಸಂದರ್ಭದ ವಿಡಿಯೋವನ್ನು ರಾಷ್ಟ್ರೀಯ ಕಾಂಗ್ರೆಸ್​ x ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ರಾಹುಲ್​ ಗಾಂಧಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗಳು ಮಿಸಾ ಭಾರತಿ ಅವರ ಜೊತೆ ಮಟನ್​ ಅಡುಗೆ ಮಾಡುತ್ತ, ರಾಜಕೀಯದ ಬಗ್ಗೆ ಮಾತನಾಡುತ್ತಿರುವದನ್ನು ಗಮನಿಸಬಹುದಾಗಿದೆ.

ಗಾಂಧಿ ಕುಟುಂಬಕ್ಕೆ ಲಾಲು ಯಾದವ್ ಅವರ ಆಪ್ತತೆ ಹೊಸತಲ್ಲ. ಇವರ ಜೊತೆಗಿನ ಫೋಟೋ ವಿಡಿಯೋ ಇವರ ನಡುವಿನ ಸೌಹಾರ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ವಿಡಿಯೋ ಕುರಿತು ಲಾಲು ಯಾದವ್ ಅವರೊಂದಿಗೆ ಕುರಿ ಮಾಂಸ ಮತ್ತು ರಾಜಕೀಯ ಮಸಾಲೆಗಳನ್ನು ತಯಾರಿಸುವ ರಹಸ್ಯ ಪಾಕ ವಿಧಾನವನ್ನು ಚರ್ಚಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

  • लोकप्रिय नेता, लालू जी से उनकी सीक्रेट रेसिपी और ‘राजनीतिक मसाले’ पर जननायक राहुल गांधी जी की दिलचस्प बातचीत।

    पूरा वीडियो: https://t.co/lmsuwGAVUr pic.twitter.com/WcEHWBsgvF

    — Congress (@INCIndia) September 2, 2023 " class="align-text-top noRightClick twitterSection" data=" ">

ಹಂಚಿಕೊಂಡಿರುವ ವಿಡಿಯೋವು ಆರ್‌ಜೆಡಿ ಸಂಸದ ಮಿಸಾ ಭಾರತಿ ಅವರ ನಿವಾಸದಿಂದ ಬಂದಿದೆ. ಇವರ ನಿವಾಸಕ್ಕೆ ಭೇಟಿ ಕೊಟ್ಟಿದ್ದ ರಾಹುಲ್​ ಗಾಂಧಿ, ಅಲ್ಲಿ ಲಾಲು ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಹುಲ್​ಗೆ ಲಾಲು ಅವರು ಚಂಪಾರಣ್ ಮಟನ್ ಮಾಡಲು ಕಲಿಸಿದ್ದಾರೆ. ರಾಹುಲ್​ ಗಾಂಧಿ ಎಷ್ಟು ಪದಾರ್ಥ ಬಳಸಬೇಕು ಎಂದಾಗ ಅವರ ಕೈಗೆ ಬೆಳ್ಳುಳ್ಳಿ ಪೇಸ್ಟ್​ ಕೊಟ್ಟು ಹೆಚ್ಚಿದ್ದ ಈರುಳ್ಳಿಗೆ ಹಾಕಲು ಹೇಳಿದರು. ಬಳಿಕ ಸ್ವತಃ ರಾಹುಲ್​ ಗಾಂಧಿಯೇ ಅದನ್ನು ಮಿಶ್ರಣ ಮಾಡಿದರು. ಇವರಿಗೆ ಮಿಸಾ ಭಾರತಿ ಕೂಡ ಸಹಾಯ ಮಾಡಿದ್ದಾರೆ. ಉಳಿದ ನಾಯಕರಾದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಇತರರು ಅವರ ಬಳಿಯೇ ಇದ್ದರು.

ಅಡುಗೆ ಜೊತೆ ರಾಜಕೀಯ ಮಸಾಲೆ: ಮಟನ್​ ಅಡುಗೆ ವೇಳೆ ರಾಹುಲ್ ಗಾಂಧಿ ಲಾಲು ಯಾದವ್‌ಗೆ ರಾಜಕೀಯ ಮಸಾಲೆ ಎಂದರೇನು ಎಂದು ಕೇಳಿದ್ದಾರೆ. ಆಗ ಲಾಲು ರಾಜಕೀಯ ಮಸಾಲಾ ಎಂದರೆ ಹೋರಾಟ. ಎಲ್ಲಿಯಾದರೂ ಅನ್ಯಾಯ ಕಂಡರೆ ಅದರ ವಿರುದ್ಧ ಹೋರಾಡಿ ಎಂದಿದ್ದಾರೆ. ನಂತರ ಬಿಜೆಪಿಯವರು ಯಾಕೆ ಇಷ್ಟೊಂದು ದ್ವೇಷ ಹರಡುತ್ತಾರೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಲಾಲು ಇದು ಅಧಿಕಾರದ ಹಸಿವು ಎನ್ನುತ್ತಾರೆ. ಮುಂದುವರೆಯುತ್ತಾ ರಾಹುಲ್ ಗಾಂಧಿ ಲಾಲು ಪ್ರಸಾದ್ ಯಾದವ್ ಅವರಿಗೆ ನಿಮಗೆ ಬೇರೆ ಏನು ಇಷ್ಟ? ದೇಶದ ಹೊರಗಿನ ವಿಶೇಷ ಖಾದ್ಯಗಳು ಎಂದಾಗ ನಗುತ್ತಾ ಅವರು 'ನಾನು ಥಾಯ್ ಖಾದ್ಯವನ್ನು ತಿನ್ನಲು ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ. ಮುಂದುವರೆದು ರಾಹುಲ್​ ಗಾಂಧಿ ನನ್ನ ತಂಗಿ (ಪ್ರಿಯಾಂಕಾ ಗಾಂಧಿ) ಚೆನ್ನಾಗಿ ಅಡುಗೆ ಮಾಡುತ್ತಾಳೆ. ನಾನು ನಿಮಗೆ ಅದನ್ನು ಕಳುಹಿಸುತ್ತೇನೆ ಎಂದು ಹೇಳಿದರು. (ಐಎಎನ್​ಎಸ್​)

ಇದನ್ನೂ ಓದಿ: ರಾಯ್‌ಪುರಕ್ಕೆ ರಾಹುಲ್ ಗಾಂಧಿ ಭೇಟಿ: 'ರಾಜೀವ್ ಯುವ ಮಿತನ್​ ಸಮ್ಮೇಳನ'ದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಲಿರುವ ಕೈ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.