ETV Bharat / bharat

"ಸ್ಪೀಕ್​ಅಪ್​ ಫಾರ್​ ಫಾರ್ಮರ್ಸ್​" ಅಭಿಯಾನಕ್ಕೆ ಕೈಜೋಡಿಸಲು ರಾಹುಲ್​, ಪ್ರಿಯಾಂಕಾ ಮನವಿ

ರೈತರೊಂದಿಗೆ ಮಾತನಾಡದೆ ರೈತ ಕಾನೂನುಗಳನ್ನು ಹೇಗೆ ಮಾಡಬಹುದು? ಈ ಕಾನೂನುಗಳನ್ನು ಮಾಡುವಾಗ ರೈತರ ಹಿತಾಸಕ್ತಿಗಳನ್ನು ಹೇಗೆ ನಿರ್ಲಕ್ಷಿಸಬಹುದು? ಸರ್ಕಾರ ರೈತರ ಮಾತನ್ನು ಕೇಳಬೇಕಾಗುತ್ತದೆ. ರೈತರನ್ನು ಬೆಂಬಲಿಸಲು ನಾವು ಒಟ್ಟಾಗಿ ಧ್ವನಿ ಎತ್ತೋಣ..

ರಾಹುಲ್​, ಪ್ರಿಯಾಂಕಾ
ರಾಹುಲ್​, ಪ್ರಿಯಾಂಕಾ
author img

By

Published : Nov 30, 2020, 3:58 PM IST

ನವದೆಹಲಿ : ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ "ಸ್ಪೀಕ್​ಅಪ್​ ಫಾರ್​ ಫಾರ್ಮರ್ಸ್​" ಎಂಬ ಅಭಿಯಾನಕ್ಕೆ ಸೇರುವಂತೆ ಮನವಿ ಮಾಡಿದ್ದಾರೆ.

"ಮೋದಿ ಸರ್ಕಾರ ಕರಾಳ ಕಾನೂನುಗಳನ್ನು ತಂದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದೀಗ ಲಾಠಿಚಾರ್ಜ್​, ಬಲಪ್ರಯೋಗ ಮಾಡುವ ಮೂಲಕ ಹಿಂಸಿಸುತ್ತಿದೆ. ಆದರೆ, ರೈತರು ಧ್ವನಿ ಎತ್ತಿದಾಗ ಅದು ದೇಶಾದ್ಯಂತ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. #ಸ್ಪೀಕ್​ಅಪ್​​ಫಾರ್ಮರ್ಸ್ ಅಭಿಯಾನದ ಮೂಲಕ ನಮ್ಮ ಶೋಷಣೆಯ ವಿರುದ್ಧ ಧ್ವನಿಯೆತ್ತಿ. ನಮ್ಮೊಂದಿಗೆ ಸೇರಿ ರೈತ ಸಹೋದರರೇ" ಎಂದು ರಾಹುಲ್ ಟ್ವೀಟ್​ ಮಾಡಿದ್ದಾರೆ.

  • मोदी सरकार ने किसान पर अत्याचार किए- पहले काले क़ानून फिर चलाए डंडे लेकिन वो भूल गए कि जब किसान आवाज़ उठाता है तो उसकी आवाज़ पूरे देश में गूंजती है।

    किसान भाई-बहनों के साथ हो रहे शोषण के ख़िलाफ़ आप भी #SpeakUpForFarmers campaign के माध्यम से जुड़िए। pic.twitter.com/tJ8bry6QWi

    — Rahul Gandhi (@RahulGandhi) November 30, 2020 " class="align-text-top noRightClick twitterSection" data=" ">

ಇನ್ನು ಇದೇ ವಿಷಯದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, "ಹೊಸ ಕೃಷಿ ಕಾನೂನುಗಳಲ್ಲಿ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಕಾನೂನಿನ ಹೆಸರು, ರೈತರಿಗೆ ಕಾನೂನು. ಆದರೆ, ಕೋಟ್ಯಾಧಿಪತಿ ಸ್ನೇಹಿತರಿಗೆ ಎಲ್ಲಾ ಪ್ರಯೋಜನ.

ರೈತರೊಂದಿಗೆ ಮಾತನಾಡದೆ ರೈತ ಕಾನೂನುಗಳನ್ನು ಹೇಗೆ ಮಾಡಬಹುದು? ಈ ಕಾನೂನುಗಳನ್ನು ಮಾಡುವಾಗ ರೈತರ ಹಿತಾಸಕ್ತಿಗಳನ್ನು ಹೇಗೆ ನಿರ್ಲಕ್ಷಿಸಬಹುದು? ಸರ್ಕಾರ ರೈತರ ಮಾತನ್ನು ಕೇಳಬೇಕಾಗುತ್ತದೆ. ರೈತರನ್ನು ಬೆಂಬಲಿಸಲು ನಾವು ಒಟ್ಟಾಗಿ ಧ್ವನಿ ಎತ್ತೋಣ.#ಸ್ಪೀಕ್​ಅಪ್​​ಫಾರ್ಮರ್ಸ್" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • नाम किसान कानून
    लेकिन सारा फायदा अरबपति मित्रों का

    किसान कानून बिना किसानों से बात किए कैसे बन सकते हैं? उनमें किसानों के हितों की अनदेखी कैसे की जा सकती है?

    सरकार को किसानों की बात सुननी होगी। आइए मिलकर किसानों के समर्थन में आवाज उठाएं।#SpeakUpForFarmers pic.twitter.com/av8i7jhUpt

    — Priyanka Gandhi Vadra (@priyankagandhi) November 30, 2020 " class="align-text-top noRightClick twitterSection" data=" ">

ದೆಹಲಿ ಮತ್ತು ಹರಿಯಾಣದ ವಿವಿಧ ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್‌, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಸುಮಾರು 32 ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಡಿಸೆಂಬರ್ 3ರಂದು ರೈತ ಸಂಘಗಳೊಂದಿಗೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.