ETV Bharat / bharat

ದೆಹಲಿಯಿಂದ ವಯನಾಡಿಗೆ ತೆರಳಿದ ರಾಹುಲ್​ ಗಾಂಧಿ.. ಭರ್ಜರಿ ಸ್ವಾಗತಕ್ಕೆ ಸಿದ್ಧತೆ - ಮಾನನಷ್ಟ ಮೊಕದ್ದಮೆ ಪ್ರಕರಣ

ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಮತ್ತ ಸಂಸದರಾಗಿ ನಿಯೋಜಿತಗೊಂಡಿರುವ ರಾಹುಲ್​ ಗಾಂಧಿ ಮೊದಲ ಬಾರಿಗೆ ತಮ್ಮ ಸ್ವ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡಲು ದೆಹಲಿಯ ತಮ್ಮ ಅಧಿಕೃತ ನಿವಾಸದಿಂದ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸಿದ್ದಾರೆ. ಇನ್ನೊಂದು ವಿಶೇಷ ಎಂದರೆ ಈ ಮೂದಲು ಅವರು ಇದ್ದ ತುಘಲಕ್​ ಲೇನ್​ ಬಂಗಲೆಯಲ್ಲೇ ಅವರಿಗೆ ನಿವಾಸವನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ

Rahul Gandhi leaves for Wayanad, first time after being reinstated as Lok Sabha MP
ದೆಹಲಿಯಿಂದ ವಯನಾಡಿಗೆ ತೆರಳಿದ ರಾಹುಲ್​ ಗಾಂಧಿ.. ಭರ್ಜರಿ ಸ್ವಾಗತಕ್ಕೆ ಸಿದ್ಧತೆ
author img

By

Published : Aug 12, 2023, 7:12 AM IST

Updated : Aug 12, 2023, 10:27 AM IST

ನವದೆಹಲಿ: ಕಾಂಗ್ರೆಸ್​ ಮಾಜಿ ಅಧ್ಯಕ್ಷ ವಯನಾಡು ಸಂಸದ ರಾಹುಲ್​ ಗಾಂಧಿ ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡುವುದಕ್ಕಾಗಿ ದೆಹಲಿ ತಮ್ಮ ನಿವಾಸದಿಂದ ಪ್ರಯಾಣ ಬೆಳೆಸಿದ್ದಾರೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್​ ಕೋರ್ಟ್​ನ ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ ನೀಡಿದ ಬಳಿಕ, ರಾಹುಲ್​ ಗಾಂಧಿ ಅವರಿಗೆ ಸಂಸದ ಸ್ಥಾನ ಮರಳಿ ಸಿಕ್ಕಿದೆ. ಹೀಗೆ ಸಂಸದ ಸ್ಥಾನಕ್ಕೆ ವಾಪಸ್​ ಆದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್​ ಗಾಂಧಿ ಕೇರಳದ ತಮ್ಮ ಸ್ವ ಕ್ಷೇತ್ರ ವಯನಾಡಿಗೆ ಭೇಟಿ ನೀಡುತ್ತಿದ್ದಾರೆ.

ಮೋದಿ ಹೆಸರಿನ ಬಗ್ಗೆ ಟೀಕೆ ಕುರಿತಂತೆ ಎದುರಿಸುತ್ತಿದ್ದ ಪ್ರಕರಣಕ್ಕೆ ಸುಪ್ರೀಂಕೋರ್ಟ್​ ಆಗಸ್ಟ್​ ನಾಲ್ಕರಂದು ತಡೆಯಾಜ್ಞೆ ನೀಡಿತ್ತು. ಆ ಬಳಿಕ ಸ್ಪೀಕರ್​ ಓಂ ಬಿರ್ಲಾ ಅವರ ಸಂಸದ ಸ್ಥಾನವನ್ನು ಮರಳಿ ನೀಡಿದ್ದರು. ನಂತರ ರಾಹುಲ್​ ಗಾಂಧಿ, ಮೋದಿ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿ ಮಂಡನೆ ಪರವಾಗಿ ಅಬ್ಬರದ ಭಾಷಣವನ್ನು ಮಾಡಿದ್ದರು. ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಸಂಸತ್​ ಅಧಿವೇಶನ ನಿನ್ನೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆ ರಾಹುಲ್​ ಗಾಂಧಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಭಾರತ ಜೋಡೋ ಯಾತ್ರೆಗೆ ಕಾಂಗ್ರೆಸ್​ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ರಾಹುಲ್​ ಗಾಂಧಿ ತಮ್ಮ ಸ್ವ ಕ್ಷೇತ್ರ ವಯನಾಡು ಪ್ರವಾಸ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

  • #WATCH | Tamil Nadu: Congress leader Rahul Gandhi arrives at Coimbatore airport.

    Rahul Gandhi is scheduled to visit his Wayanad Lok Sabha constituency after the restoration of his parliamentary membership. pic.twitter.com/pB82AT9tlF

    — ANI (@ANI) August 12, 2023 " class="align-text-top noRightClick twitterSection" data=" ">

ಕಳೆದ ಮಂಗಳವಾರ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ವಿ ಟಿ ಸಿದ್ದಿಕ್ ಮಾತನಾಡಿ, ರಾಹುಲ್ ಗಾಂಧಿ ಅವರು ಆಗಸ್ಟ್ 12 ರಂದು ವಯನಾಡಿಗೆ ಬರಲಿದ್ದಾರೆ ಎಂದು ಹೇಳಿದ್ದರು. ರಾಹುಲ್​ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ನಾವು ಅವರಿಗೆ ಅದ್ಧೂರಿ ಸ್ವಾಗತವನ್ನು ಏರ್ಪಡಿಸಲಿದ್ದೇವೆ ಮತ್ತು ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಮಾಹಿತಿ ನೀಡಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಲಿದ್ದು, ಆಗಸ್ಟ್ 12 ಮತ್ತು 13 ರಂದು ರಾಹುಲ್ ಗಾಂಧಿ ಹಾಜರಾಗಲಿದ್ದಾರೆ ಎಂಬುದಾಗಿ ಅವರು ಹೇಳಿದ್ದರು.

ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ಅವರಿಗೆ ವಯನಾಡಿನ ಇತಿಹಾಸದಲ್ಲಿಯೇ ಅತ್ಯಂತ ಆತ್ಮೀಯ ಸ್ವಾಗತ ದೊರೆಯಲಿದೆ ಎಂದು ಸಿದ್ದಿಕ್ ಹೇಳಿದ್ದಾರೆ. ಈ ಮಧ್ಯೆ ಪಕ್ಷದ ಮೂಲಗಳು ಹೇಳುವ ಪ್ರಕಾರ, ರಾಹುಲ್ ಗಾಂಧಿ ಅವರಿಗೆ ತುಘಲಕ್ ಲೇನ್ ನಲ್ಲಿ ಅವರ ಈ ಹಿಂದಿನ 12 ನಂಬರ್​ನ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ.

ಇದನ್ನ ಓದಿ:Rahul Gandhi: ಮಣಿಪುರ ಹೊತ್ತಿ ಉರೀತಿದ್ರೆ, ಪ್ರಧಾನಿ ಲೋಕಸಭೆಯಲ್ಲಿ ಜೋಕ್​ ಮಾಡ್ತಿದ್ರು: ರಾಹುಲ್​ ಗಾಂಧಿ

Last Updated : Aug 12, 2023, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.