ETV Bharat / bharat

ರಾಹುಲ್ ಗಾಂಧಿ ಒಬ್ಬ ಶಿವಭಕ್ತ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ - Shiva idol unveiled in Rajasthan

ವಿಶ್ವದಲ್ಲಿಯೇ ಅತಿ ಎತ್ತರದ ಶಿವನ ಮೂರ್ತಿಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಶನಿವಾರ ಅನಾವರಣಗೊಳಿಸಿದರು.

rajasthan-cm-ashok-gehlot
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
author img

By

Published : Oct 30, 2022, 9:02 AM IST

Updated : Oct 30, 2022, 9:13 AM IST

ಜೈಪುರ(ರಾಜಸ್ಥಾನ): ಇಲ್ಲಿನ ನಾಥದ್ವಾರ ಪಟ್ಟಣದಲ್ಲಿ ವಿಶ್ವದ ಅತಿ ಎತ್ತರದ (369 ಅಡಿ) ತಪೋರೂಢ ಶಿವನ ಪ್ರತಿಮೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅನಾವರಣಗೊಳಿಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿ, "ಇದು ಶಿವನ ಭಕ್ತರನ್ನು ಸಂತೋಷಗೊಳಿಸಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಕೂಡ ಶಿವನ ಭಕ್ತರೇ" ಎಂದು ಹೇಳಿದರು.

'ರಾಹುಲ್ ಗಾಂಧಿ ಒಬ್ಬ ಶಿವಭಕ್ತ'

ಬಿಜೆಪಿಗರು ಕಾರ್ಯಕ್ರಮಕ್ಕೆ ಆಗಮಿಸದ ಬಗ್ಗೆ ಪ್ರಶ್ನಿಸಿದಾಗ, ಶಿವನನ್ನು ಪೂಜಿಸುವವರು ಯಾರೆಂದು ನೀವು ಅರ್ಥಮಾಡಿಕೊಳ್ಳಬೇಕು. ರಾಹುಲ್​ ಗಾಂಧಿ ಒಬ್ಬ ಶಿವಭಕ್ತರು. 10 ವರ್ಷಗಳ ಸತತ ಪ್ರಯತ್ನದಿಂದ ಭವ್ಯವಾದ ಪ್ರತಿಮೆ ನಿರ್ಮಾಣವಾಗಿರುವುದಕ್ಕೆ ಸಂತಸವಾಗಿದೆ ಎಂದರು.

ಉದಯಪುರದಿಂದ ಸುಮಾರು 45 ಕಿಲೋ ಮೀಟರ್​ ದೂರದ ತತ್ ಪದಮ್ ಸಂಸ್ಥಾನದಲ್ಲಿ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, 9 ದಿನಗಳ ಕಾಲ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: 10 ಲಕ್ಷ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ: ಪ್ರಧಾನಿ ಮೋದಿ

Last Updated : Oct 30, 2022, 9:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.